ದೇವನಹಳ್ಳಿ :ಅಕ್ರಮವಾಗಿ ಸರಕು ಸಾಗಾಣಿಕೆಯ ಮೂಲಕ ವಿದೇಶಕ್ಕೆ ರಪ್ತು ಮಾಡಲು ಯತ್ನಿಸಿದ ರಕ್ತ ಚಂದನವನ್ನ ಬಿಐಎಎಲ್ ಏರ್ ಕಾರ್ಗೋ ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಏರ್ ಕಾರ್ಗೋ ಅಧಿಕಾರಿಗಳ ಕಾರ್ಯಾಚರಣೆ : ₹6 ಕೋಟಿ ಮೌಲ್ಯದ ರಕ್ತಚಂದನ ವಶ - ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ರಕ್ತ ಚಂದನ ವಶ
ಸದ್ಯ ರಕ್ತ ಚಂದನದ ತುಂಡುಗಳನ್ನು ವಶಕ್ಕೆ ಪಡೆದಿರುವ ಕಸ್ಟಮ್ಸ್ ಅಧಿಕಾರಿಗಳು, ಯಾರು ಅಕ್ರಮವಾಗಿ ನಿಷೇಧಿತ ರಕ್ತ ಚಂದನ ರವಾನೆ ಮಾಡುತ್ತಿದ್ದರು ಎನ್ನುವ ಕುರಿತು ಮಾಹಿತಿ ಕಲೆ ಹಾಕುತ್ತಿದ್ದಾರೆ..
ರಕ್ತಚಂದನ
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ದುಬೈಗೆ ರಕ್ತ ಚಂದನವನ್ನ ಪೈಪ್ಗಳು ಎಂದು ಹೇಳಿ ಪಾರ್ಸಲ್ ಮಾಡಲಾಗುತ್ತಿತ್ತು. ಇದರಿಂದ ಅನುಮಾನಗೊಂಡ ಕಸ್ಟಮ್ಸ್ ಅಧಿಕಾರಿಗಳು, ಪಾರ್ಸಲ್ ಒಪನ್ ಮಾಡಿ ನೋಡಿದಾಗ ಅದರಲ್ಲಿ ಆರು ಕೋಟಿಗೂ ಅಧಿಕ ಬೆಲೆ ಬಾಳುವ ರಕ್ತ ಚಂದನ ಇರೋದು ಬೆಳಕಿಗೆ ಬಂದಿದೆ.
ಸದ್ಯ ರಕ್ತ ಚಂದನದ ತುಂಡುಗಳನ್ನು ವಶಕ್ಕೆ ಪಡೆದಿರುವ ಕಸ್ಟಮ್ಸ್ ಅಧಿಕಾರಿಗಳು, ಯಾರು ಅಕ್ರಮವಾಗಿ ನಿಷೇಧಿತ ರಕ್ತ ಚಂದನ ರವಾನೆ ಮಾಡುತ್ತಿದ್ದರು ಎನ್ನುವ ಕುರಿತು ಮಾಹಿತಿ ಕಲೆ ಹಾಕುತ್ತಿದ್ದಾರೆ.
TAGGED:
ರಕ್ತಚಂದನ ವಶ