ಕರ್ನಾಟಕ

karnataka

ETV Bharat / state

ಕೃಷಿ ಪದವಿ ಪಡೆದ ನೀವು ರೈತನ ಕಣ್ಣೀರು ಒರೆಸುವ ಕೆಲಸ ಮಾಡಬೇಕು.. ಸಚಿವ ಬಿ ಸಿ ಪಾಟೀಲ್ - Minister BC Patil

ಎಲ್ಲರೂ ಅದ್ಭುತ ಸಾಧನೆ ಮಾಡಿದ್ದೀರಿ, ನಿಮ್ಮ ಜೀವನ ಪದವಿಗೆ ಸೀಮಿತವಾಗಬಾರದು. ನಿಮ್ಮ ಬುದ್ಧಿವಂತಿಕೆ ರೈತರ ಸಮಸ್ಯೆಯನ್ನು ಕಡಿಮೆ ಮಾಡಬೇಕು. ಕೃಷಿ ಪದವಿ ಪಡೆದಿದ್ದೀರಾ ರೈತನ ಕಣ್ಣೀರು ಒರೆಸುವ ಕೆಲಸವನ್ನು ನೀವು ಮಾಡಬೇಕು..

Minister BC Patil
ಬಿ ಸಿ ಪಾಟೀಲ್

By

Published : Nov 28, 2020, 6:20 PM IST

ಬೆಂಗಳೂರು :ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ 54ನೇ ಘಟಿಕೋತ್ಸವ ಸಮಾರಂಭವು ಜಿಕೆವಿಕೆ ಆವರಣದ ಡಾ. ಬಾಬು ರಾಜೇಂದ್ರ ಪ್ರಸಾದ್ ಅಂತಾರಾಷ್ಟ್ರೀಯ ಸಭಾಂಗಣದಲ್ಲಿ ಇಂದು ನಡೆಯಿತು.

ಕಾರ್ಯಕ್ರಮದಲ್ಲಿ ಕೃಷಿ ಸಚಿವ ಬಿ ಸಿ ಪಾಟೀಲ್, ಇಸ್ರೋ ಅಧ್ಯಕ್ಷ ಡಾ ಕೆ ಸಿವನ್ ವರ್ಚುವಲ್‌ನಲ್ಲಿ ಭಾಗಿಯಾಗಿದ್ದರು. ವಿವಿಯ ಕುಲಸಚಿವ ಡಾ. ಜಿ ಎನ್ ಧನಪಾಲ್, ಕುಲಪತಿ ಡಾ ಎಸ್ ರಾಜೇಂದ್ರ ಪ್ರಸಾದ್ ಸಾಥ್ ನೀಡಿದರು.

ಕೃಷಿ ಸಚಿವ ಬಿ ಸಿ‌‌ ಪಾಟೀಲ್

ಆನ್‌ಲೈನ್ ಮೂಲಕವೇ ಇಸ್ರೋ ಅಧ್ಯಕ್ಷ ಸಿವನ್ ಮಾತಾನಾಡಿ, ಕೃಷಿ ವಿಶ್ವವಿದ್ಯಾಲಯದ 54ನೇ ಘಟಿಕೋತ್ಸವದಲ್ಲಿ ಭಾಗಿಯಾಗಿರುವುದು ಬಹಳ ಸಂತಸ ತಂದಿದೆ. ನಾನು ಕೂಡ ರೈತ ಕುಟುಂಬದಿಂದಲ್ಲೇ ಬಂದಿರುವುದರಿಂದ ಕೃಷಿಯ ಮಹತ್ವ ತಿಳಿದಿದೆ ಎಂದು ತಿಳಿಸಿದರು.

ನಂತರ ಕೃಷಿ ಸಚಿವ ಬಿ ಸಿ‌‌ ಪಾಟೀಲ್ ಮಾತನಾಡಿ, ರೈತನ ಮಗನಾಗಿ ಕೃಷಿ ಮಂತ್ರಿಯಾಗಿ, ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು ದಿಗ್ಗಜರಿಗೆ ಪದವಿ ಪ್ರದಾನ ಮಾಡಿದ್ದು ಖುಷಿ ತಂದಿದೆ‌. ಘಟಿಕೋತ್ಸವದಂದು ಕೇವಲ ಪದವಿ ಪ್ರದಾನ ಮಾಡಬೇಕು.

ಯಾರು ಮಾತಾಡುವಂತಿಲ್ಲ ಅಂತಾ ತಿಳಿಸಿದರು. ಆದರೆ, ಸಾಧನೆ ಮಾಡಿದವರಿಗೆ ಪ್ರೋತ್ಸಾಹದ ನುಡಿ ಸಲಹೆ ನೀಡದೇ ಇದ್ದರೆ ಮಾತು ಹಾಗೇ ಉಳಿದು ಬಿಡುತ್ತೆ‌‌. ಹೀಗಾಗಿ ರಾಜ್ಯಪಾಲರ ಬಳಿ ಮಾತಾಡಿದಾಗ ಅವರು ಇದಕ್ಕೆ ಸಮ್ಮತಿ ನೀಡಿದರು ಎಂದರು.

ಎಲ್ಲರೂ ಅದ್ಭುತ ಸಾಧನೆ ಮಾಡಿದ್ದೀರಿ, ನಿಮ್ಮ ಜೀವನ ಪದವಿಗೆ ಸೀಮಿತವಾಗಬಾರದು. ನಿಮ್ಮ ಬುದ್ಧಿವಂತಿಕೆ ರೈತರ ಸಮಸ್ಯೆಯನ್ನು ಕಡಿಮೆ ಮಾಡಬೇಕು. ಕೃಷಿ ಪದವಿ ಪಡೆದಿದ್ದೀರಾ ರೈತನ ಕಣ್ಣೀರು ಒರೆಸುವ ಕೆಲಸವನ್ನು ನೀವು ಮಾಡಬೇಕೆಂದು ಪ್ರೋತ್ಸಾಹದ ಮಾತನಾಡಿದರು.

'ಪ್ರಾಧ್ಯಾಪಕರನ್ನ ನೋಡೆಲ್ ಅಧಿಕಾರಿಯ'ನ್ನಾಗಿ ನೇಮಕ ಮಾಡಿ ಅಂತಾ ವಿವಿಗೆ ಸೂಚನೆ ನೀಡಿದ್ದೇನೆ. ಈ ಮೂಲಕ ಪ್ರಾಧ್ಯಾಪಕರ ಜ್ಞಾನವನ್ನ ರೈತರಿಗೆ ಧಾರೆ ಎರೆಯುವ ಕೆಲಸ ಆಗಬೇಕು. ಪ್ರಾಧ್ಯಾಪಕರು ವಿವಿಗೆ ಸೀಮಿತವಾಗದೇ, ಹೊರೆಗೆ ಬಂದು ರೈತರಿಗೆ ಎಲ್ಲ ಮಾಹಿತಿ ನೀಡಬೇಕು ಎಂದರು.

ಇದಕ್ಕೂ ಮೊದಲು ಡಾಕ್ಟರ್​ ಆಫ್ ಫಿಲಾಸಪಿ ಪದವಿಯಲ್ಲಿ ಒಟ್ಟು 20 ಚಿನ್ನದ ಪದಕಗಳನ್ನು ಪ್ರದಾನ ಮಾಡಲಾಯಿತು. ಅದರಲ್ಲಿ 8 ವಿದ್ಯಾರ್ಥಿನಿಯರು ಹಾಗೂ 4 ವಿದ್ಯಾರ್ಥಿಗಳು ಕೃಷಿ ವಿಶ್ವವಿದ್ಯಾನಿಲಯದ 11 ಚಿನ್ನದ ಪದಕಗಳನ್ನು, 9 ದಾನಿಗಳ ಚಿನ್ನದ ಪದಕಗಳು ಹಾಗೂ 3 ದಾನಿಗಳ ಚಿನ್ನದ ಪದಕ ಪ್ರಶಸ್ತಿ ಪ್ರಮಾಣ ಪತ್ರಗಳನ್ನು ಹಂಚಿಕೊಂಡಿದ್ದಾರೆ.

ಮಾಸ್ಟರ್ ಪದವಿಯಲ್ಲಿ ಒಟ್ಟು 54 ಚಿನ್ನದ ಪದಕಗಳನ್ನು ಪ್ರದಾನ ಮಾಡಲಾಗಿದೆ. ಅದರಲ್ಲಿ 25 ವಿದ್ಯಾರ್ಥಿನಿಯರು ಹಾಗೂ 6 ವಿದ್ಯಾರ್ಥಿಗಳು ಕೃಷಿ ವಿಶ್ವವಿದ್ಯಾನಿಲಯ ನೀಡುವ 20 ಚಿನ್ನದ ಪದಕಗಳು ಹಾಗೂ 5 ಆವರಣದ ಚಿನ್ನದ ಪದಕಗಳನ್ನು, 29 ದಾನಿಗಳ ಚಿನ್ನದ ಪದಕಗಳು ಹಾಗೂ 12 ದಾನಿಗಳ ಚಿನ್ನದ ಪದಕ ಪ್ರಶಸ್ತಿ ಪ್ರಮಾಣ ಪತ್ರಗಳನ್ನು ಹಂಚಿಕೊಂಡಿದ್ದಾರೆ.

ಇದಲ್ಲದೆ, ಸ್ನಾತಕ ಪದವಿಯಲ್ಲಿ ಒಟ್ಟು 47 ಚಿನ್ನದ ಪದಕಗಳನ್ನು ಪ್ರದಾನ ಮಾಡಲಿದ್ದು, ಅದರಲ್ಲಿ 8 ವಿದ್ಯಾರ್ಥಿನಿಯರು ಹಾಗೂ 8 ವಿದ್ಯಾರ್ಥಿಗಳು ಕೃಷಿ ವಿಶ್ವವಿದ್ಯಾನಿಲಯ ನೀಡುವ 6 ಚಿನ್ನದ ಪದಕಗಳು, 3 ಆವರಣದ ಚಿನ್ನದ ಪದಕಗಳು, 37 ದಾನಿಗಳ ಚಿನ್ನದ ಪದಕಗಳು, 1 ಕೃವಿವಿಯ ಕ್ರೀಡಾ ಚಿನ್ನದ ಪದಕ ಹಾಗೂ 7 ದಾನಿಗಳ ಚಿನ್ನದ ಪದಕ ಪ್ರಶಸ್ತಿ ಪ್ರಮಾಣ ಪತ್ರಗಳನ್ನು ಹಂಚಿಕೊಂಡಿದ್ದರು.

ABOUT THE AUTHOR

...view details