ಕರ್ನಾಟಕ

karnataka

ETV Bharat / state

ಬೆಂಗಳೂರಲ್ಲಿ ಚಾಕುವಿನಿಂದ ಇರಿದು ಯುವಕನ ಬರ್ಬರ ಹತ್ಯೆ - ಚಾಕುವಿನಿಂದ ಇರಿದು ಯುವಕನ ಬರ್ಬರ ಹತ್ಯೆ

ಸಲ್ಮಾನ್ ನಿನ್ನೆ ರಾತ್ರಿ 10 ಗಂಟೆ ಸುಮಾರಿಗೆ ತಂದೆಯ ಫರ್ನಿಚರ್ ಅಂಗಡಿ ಮತ್ತು ಹೋಟೆಲ್ ಕೆಲಸ ಮುಗಿಸಿ ಮನೆಗೆ ಹಿಂದಿರುಗುವಾಗ ಈ ದುಷ್ಕೃತ ನಡೆದಿದೆ.

ಬೆಂಗಳೂರು: ಚಾಕುವಿನಿಂದ ಇರಿದು ಯುವಕನ ಬರ್ಬರ ಹತ್ಯೆ
bangalore-a-young-man-was-stabbed-to-death

By

Published : Dec 21, 2022, 10:05 AM IST

ಡಿಸಿಪಿ ಅನೂಪ್ ಶೆಟ್ಟಿ

ಬೆಂಗಳೂರು: ಚಾಕುವಿನಿಂದ ಇರಿದು ಯುವಕನ ಕೊಲೆಗೈದಿರುವ ಘಟನೆ ತಡರಾತ್ರಿ ಹೆಗಡೆನಗರದ ಬಾಲಾಜಿ ಲೇಔಟ್​​ನಲ್ಲಿ ನಡೆದಿದೆ. ಸಲ್ಮಾನ್ (20) ಕೊಲೆಯಾದ ಯುವಕ.

ಸಲ್ಮಾನ್ ನಿನ್ನೆ ರಾತ್ರಿ 10ಗಂಟೆ ಸುಮಾರಿಗೆ ತಂದೆಯ ಫರ್ನಿಚರ್ ಅಂಗಡಿ ಮತ್ತು ಹೋಟೆಲ್ ಕೆಲಸ ಮುಗಿಸಿ ಮನೆಗೆ ಹಿಂದಿರುಗುವಾಗ ಈ ದುಷ್ಕೃತ ನಡೆದಿದೆ. ಮೂವರು ದುಷ್ಕರ್ಮಿಗಳು ಸಲ್ಮಾನ್​ಗೆ ಚಾಕುವಿಂದ ಇರಿದು ಕೊಲೆಗೈದು ಪರಾರಿಯಾಗಿದ್ದಾರೆ. ಸ್ಥಳಕ್ಕೆ ಸಂಪಿಗೇಹಳ್ಳಿ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದು ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಘಟನೆಗೆ ಕಾರಣ ಏನು ಎಂದು ತಿಳಿದು ಬಂದಿಲ್ಲ ಎಂಬುದಾಗಿ ಈಶಾನ್ಯ ವಿಭಾಗದ ಡಿಸಿಪಿ ಅನೂಪ್ ಶೆಟ್ಟಿ ತಿಳಿಸಿದ್ದಾರೆ.

ಇದನ್ನೂ ಓದಿ: ರೈಲ್ವೆ ಸ್ಟೇಷನ್ ಬಳಿ ಗಾಂಜಾ ಮಾರಾಟ: 1.25 ಲಕ್ಷ ರೂ. ಮೌಲ್ಯದ ಗಾಂಜಾ ಸಹಿತ ಮೂವರು ವಶಕ್ಕೆ

ABOUT THE AUTHOR

...view details