ಕರ್ನಾಟಕ

karnataka

ETV Bharat / state

ಕೆಪಿಎಲ್​ ಮ್ಯಾಚ್ ಫಿಕ್ಸಿಂಗ್ ಪ್ರಕರಣ... ಬೆಂಗಳೂರಿನ 2 ಕ್ರಿಕೆಟ್ ಕ್ಲಬ್ ಪಾತ್ರ ಬಯಲು! - ಕೆಪಿಎಲ್ ಮ್ಯಾಚ್ ಫಿಕ್ಸಿಂಗ್​ನಲ್ಲಿ ಕ್ರಿಕೆಟ್ ಕ್ಲಬ್ ಪಾತ್ರ

ಬೆಂಗಳೂರಿನ ಎರಡು ಕ್ರಿಕೆಟ್ ಕ್ಲಬ್​ಗಳು ಕೆಪಿಎಲ್ ಮ್ಯಾಚ್​ ಫಿಕ್ಸಿಂಗ್​ನಲ್ಲಿ ಪ್ರಮುಖ ಪಾತ್ರ ವಹಿಸಿರುವ ವಿಷಯ ಸಿಸಿಬಿ ತನಿಖೆಯಲ್ಲಿ ಬಯಲಾಗಿದೆ.

ಕೆಪಿಎಲ್​ ಮ್ಯಾಚ್ ಫಿಕ್ಸಿಂಗ್ ಪ್ರಕರಣ,KPL Match fixing latest news
ಕೆಪಿಎಲ್​ ಮ್ಯಾಚ್ ಫಿಕ್ಸಿಂಗ್ ಪ್ರಕರಣ

By

Published : Dec 6, 2019, 4:51 PM IST

ಬೆಂಗಳೂರು: ಕೆಪಿಎಲ್ ಮ್ಯಾಚ್ ಫಿಕ್ಸಿಂಗ್ ಪ್ರಕರಣದ ತನಿಖೆ ನಡೆಸುತ್ತಿರುವ ಸಿಸಿಬಿ ತಂಡಕ್ಕೆ ಮತ್ತೊಂದು ವಿಚಾರ ತಿಳಿದು ಬಂದಿದೆ. ಫಿಕ್ಸಿಂಗ್ ಹಗರಣದಲ್ಲಿ ಸಿಲಿಕಾನ್​ ಸಿಟಿಯ 2 ಪ್ರಮುಖ ಕ್ರಿಕೆಟ್ ಕ್ಲಬ್​ಗಳ ಪಾತ್ರ ಬಯಲಾಗಿದೆ.

ನಗರದ 2 ಕ್ರಿಕೆಟ್ ಕ್ಲಬ್​ಗಳು ಫಿಕ್ಸಿಂಗ್​ನಲ್ಲಿ ಭಾಗಿಯಾಗಿದ್ದು, ಈ ಎರಡು ಕ್ಲಬ್​ನ ಕ್ರಿಕೆಟ್ ಆಟಗಾರರು ಕೆಪಿಎಲ್​ನಲ್ಲಿ ಆಡುತ್ತಿದ್ದರು. ಈ ಕ್ಲಬ್​ಗಳನ್ನ ಬಂಧಿತ ಆರೋಪಿ ಸುಧೀಂದ್ರ ಶಿಂಧೆ ಹಾಗೂ ಮತ್ತೋರ್ವ ಬಿ.ಕೆ. ರವಿ ನಡೆಸುತ್ತಿದ್ದರು. ಸದ್ಯ ಸುಧೀಂದ್ರ ಶಿಂಧೆಯನ್ನ ಬಂಧಿಸಿರುವ ಸಿಸಿಬಿ‌ ಇತ್ತೀಚೆಗೆ ಬಿ.ಕೆ. ರವಿಯನ್ನ ಕೂಡ ವಿಚಾರಣೆ ನಡೆಸಿದ್ದರು.

ವಿಚಾರಣೆ ವೇಳೆ ಕೆಲ ಬಾಹಿತಿ ಬಿಟ್ಟ ಶಿಂಧೆ:
ಸಿಸಿಬಿ ವಿಚಾರಣೆ ವೇಳೆ ಸುಧೀಂದ್ರ ಶಿಂಧೆ ಕೆಲ ಮಾಹಿತಿಗಳನ್ನು ಬಿಚ್ಚಿಟ್ಟಿದ್ದಾರೆ. ಬೆಳಗಾವಿ ಪ್ಯಾಂಥರ್ಸ್ ಮಾಲೀಕ ಅಷ್ಫಾಕ್ ಥಾರ್ ಅಲಿ, ಬಂಧಿತ ಸುಧೀಂದ್ರ ಶಿಂಧೆ ‌ಕ್ಲಬ್ ಜೊತೆ ಕೈ ಜೋಡಿಸಿ ಅವರ ಕ್ಲಬ್ ಆಟಗಾರರಿಗೆ ಸ್ಪಾನ್ಸರ್ ಮಾಡಿದ್ದ ಎಂದು ತಿಳಿದುಬಂದಿದೆ. 2017 ರಿಂದಲೂ ಸುದೀಂದ್ರ ಶಿಂಧೆ ಜೊತೆ ಅಲಿ ನಿಕಟ ಸಂಪರ್ಕದಲ್ಲಿದ್ದ. ಕೆಪಿಎಲ್ ಮ್ಯಾಚ್ ನಡೆಯುವ ಮೊದಲು ಎಲ್ಲಾ ಆಟಗಾರರ ಜೊತೆ ಅಲಿ ಸಂಪರ್ಕ ಸಾಧಿಸಿ ಅದರಲ್ಲಿ ಕೆಲವರನ್ನ ಮಾತ್ರ ಮ್ಯಾಚ್ ಫಿಕ್ಸಿಂಗ್​ಗೆ ಬಳಸಿಕೊಳ್ಳುತ್ತಿದ್ದ. ಅಂತ ಆಟಗಾರರನ್ನ ಪಂದ್ಯ ಆರಂಭಕ್ಕೂ ಮೊದಲು ಪ್ರತ್ಯೇಕ ಅಪಾರ್ಟ್​ಮೆಂಟ್​ ಇರಿಸುತ್ತಿದ್ದರು ಎಂದು ಹೇಳಲಾಗ್ತಿದೆ.

ಅಲಿ ಮತ್ತು ಸುಧೀಂದ್ರ ಶಿಂಧೆ ಕ್ರಿಕೆಟ್ ಆಟಾಗಾರರ ಜೊತೆ ಫಿಕ್ಸಿಂಗ್ ಮಾತುಕತೆ‌‌ ಮಾಡುತ್ತಿದ್ದರು. ಈ ವೇಳೆ ಮೋಜು ಮಸ್ತಿಯ ಪಾರ್ಟಿ ಮಾಡಲಾಗುತ್ತಿತ್ತು. ಎಲ್ಲಾ ಖರ್ಚನ್ನು ಅಷ್ಫಾಕ್ ಅಲಿ ಭರಿಸುತ್ತಿದ್ದ ಎಂದು ಶಿಂಧೆ ಬಾಯ್ಬಿಟ್ಟಿದ್ದಾರೆ. ಕೆಪಿಎಲ್ ಆಟಗಾರರ ಮಧ್ಯೆ ಹೊಂದಾಣಿಕೆ ಮಾಡಿಸುತ್ತಿದ್ದ ಅಲಿ‌, ಪಂದ್ಯ ಮುಗಿದ ಬಳಿಕವೂ ಆಟಗಾರರಿಗೆ ಹಲವು ಬಾರಿ ಪಾರ್ಟಿ ನೀಡಿರುವ ವಿಚಾರವನ್ನ ಸಿಸಿಬಿ ವಶದಲ್ಲಿರುವ ಶಿಂಧೆ ತಿಳಿಸಿದ್ದಾರೆ ಎನ್ನಲಾಗ್ತಿದೆ.

ABOUT THE AUTHOR

...view details