ಬೆಂಗಳೂರು:ಲಾಕ್‌ಡೌನ್ ಜಾರಿ ಮಾಡಿದ ಬಳಿಕ ಕೋರ್ಟ್‌ಗಳಿಗೂ ರಜೆ ನೀಡಿದ್ದರಿಂದ ಉದ್ಯೋಗವಿಲ್ಲದೆ ಸಂಕಷ್ಟಕ್ಕೀಡಾಗಿದ್ದ ಯುವ ವಕೀಲರಿಗೆ ಬೆಂಗಳೂರು ವಕೀಲರ ಸಂಘ (ಎಎಬಿ) ಆರ್ಥಿಕ ಸಹಾಯ ಮಾಡಿದೆ.
ಬೆಂಗಳೂರು ವಕೀಲರ ಸಂಘದಿಂದ ಸಂಕಷ್ಟದಲ್ಲಿರುವ ವಕೀಲರಿಗೆ ಆರ್ಥಿಕ ನೆರವು! - ಬೆಂಗಳೂರು ವಕೀಲರ ಸಂಘ
ಕೋವಿಡ್-19ನಿಂದಾಗಿ ಉದ್ಯೋಗವಿಲ್ಲದೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ನಗರದ 212 ಅರ್ಹ ವಕೀಲರಿಗೆ ತಲಾ 5 ಸಾವಿರ ರೂ. ಹಣವನ್ನು ಬೆಂಗಳೂರು ವಕೀಲರ ಸಂಘ ನೀಡಿದೆ.

ಕೋವಿಡ್-19ನಿಂದಾಗಿ ಉದ್ಯೋಗವಿಲ್ಲದೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ನಗರದ 212 ವಕೀಲರಿಗೆ ತಲಾ 5 ಸಾವಿರ ರೂ. ಹಣವನ್ನು ಬೆಂಗಳೂರು ವಕೀಲರ ಸಂಘ ನೀಡಿದೆ. ಎಎಬಿ ರಚಿಸಿರುವ ಹಿರಿಯ ವಕೀಲ ಡಿ.ಎಲ್.ಎನ್.ರಾವ್ ನೇತೃತ್ವದ ಸಮಿತಿ ಎರಡನೇ ಹಂತದಲ್ಲಿ ಅರ್ಜಿಗಳನ್ನು ಪರಿಶೀಲಿಸಿ 212 ಮಂದಿಯನ್ನು ಫಲಾನುಭವಿಗಳಾಗಿ ಆಯ್ಕೆ ಮಾಡಿದೆ. ಇವರಿಗೆ ತಲಾ 5 ಸಾವಿರ ರೂಪಾಯಿ ಹಣವನ್ನು ಅವರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ವರ್ಗಾಯಿಸಲಾಗಿದೆ.
ಏಪ್ರಿಲ್ 17ರಂದು ಮೊದಲ ಹಂತದಲ್ಲಿ 156 ವಕೀಲರಿಗೆ ಹಣ ನೀಡಲಾಗಿತ್ತು. ಐದು ವರ್ಷಕ್ಕಿಂತ ಕಡಿಮೆ ಸೇವಾನುಭವ ಹೊಂದಿರುವ ಮತ್ತು 30 ವರ್ಷಕ್ಕಿಂತ ಕಡಿಮೆ ವಯಸ್ಸಿನ ಕಿರಿಯ ವಕೀಲರು ಆರ್ಥಿಕ ಸಂಕಷ್ಟದಲ್ಲಿ ಇದ್ದರೆ ನೆರವಿಗಾಗಿ ಎಎಬಿಗೆ ಅರ್ಜಿ ಸಲ್ಲಿಸುವಂತೆ ಸಂಘ ತಿಳಿಸಿತ್ತು. ಅದರಂತೆ ಬಂದ ಅರ್ಜಿಗಳಲ್ಲಿ ಅರ್ಹರನ್ನು ಗುರುತಿಸಿ ನೆರವು ನೀಡಲಾಗುತ್ತಿದೆ ಎಂದು ಸಂಘದ ಅಧ್ಯಕ್ಷ ಎ.ಪಿ.ರಂಗನಾಥ್ ತಿಳಿಸಿದ್ದಾರೆ.