ಬೆಂಗಳೂರು:ಹೈದರಾಬಾದ್‌ಗೆ ತೆರಳಲು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ವೇಳೆ ಮಾತನಾಡಿದ ಶಾಸಕ ಬಂಡೆಪ್ಪ ಕಾಂಶೆಂಪೂರ್, ಅತೃಪ್ತ ಶಾಸಕರನ್ನು ಮರಳಿ ಮನವೊಲಿಸಿ ಕರೆ ತರುವ ಬಗ್ಗೆ ನನಗೆ ಗೊತ್ತಿಲ್ಲ. ಸಂಖ್ಯಾಬಲದ ಮೇಲೆ ಸರ್ಕಾರ ರಚನೆಯಾಗುತ್ತೆ ಎಂದು ಹೇಳಿದ್ರು.
ನಮ್ಮ ಕೈಯಲ್ಲೇನೂ ಇಲ್ಲ, ಎಲ್ಲಾ ಬಿಜೆಪಿಗೆ ಬಿಟ್ಟಿದ್ದು: ಬಂಡೆಪ್ಪ ಕಾಶೆಂಪೂರ್ - kannada news
ಉಪಚುನಾವಣೆಯಲ್ಲಿ ಸ್ಪರ್ಧೆ ವಿಚಾರಗಳು ಹೈಕಮಾಂಡ್‌ಗೆ ಬಿಟ್ಡಿದ್ದು. ಸದ್ಯ ನಮ್ಮ ಕೈಯಲ್ಲಿ ಏನೂ ಇಲ್ಲ ಸರ್ಕಾರ ರಚನೆ ಮಾಡೋದು ಬಿಜೆಪಿಗೆ ಬಿಟ್ಟ ವಿಚಾರ ಎಂದು ಶಾಸಕ ಬಂಡೆಪ್ಪ ಕಾಶೆಂಪೂರ್ ತಿಳಿಸಿದರು.
ಶಾಸಕ ಬಂಡೆಪ್ಪ ಕಾಶೆಂಪೂರ್
ಕುಮಾರಸ್ವಾಮಿ ರಾಜೀನಾಮೆ ಕೊಟ್ಟ ಕಾರಣ ಕ್ಷೇತ್ರದ ಕಡೆ ಹೊರಟಿದ್ದೇನೆ. ಉಪಚುನಾವಣೆಯಲ್ಲಿ ಸ್ಪರ್ಧೆ ವಿಚಾರಗಳು ಹೈಕಮಾಂಡ್‌ಗೆ ಬಿಟ್ಡದ್ದಾಗಿದೆ. ಸದ್ಯ ನಮ್ಮ ಕೈಯಲ್ಲಿ ಏನೂ ಇಲ್ಲ, ಸರ್ಕಾರ ರಚನೆ ಮಾಡೋದು ಬಿಜೆಪಿಗೆ ಬಿಟ್ಟಿದ್ದು ಎಂದು ಶಾಸಕರು ಹೇಳಿದ್ರು.