ಬೆಂಗಳೂರು:ಆಂಧ್ರ ಪ್ರದೇಶ ಮೂಲದ ಮಹಿಳಾ ಟೆಕ್ಕಿ ಮೇಲೆ ಆತ್ಯಾಚಾರ ಎಸಗಿದ ಆರೋಪದಡಿ ಇಬ್ಬರು ನೈಜೀರಿಯಾ ಪ್ರಜೆಗಳನ್ನು ಬಾಣಸವಾಡಿ ಪೊಲೀಸರು ಬಂಧಿಸಿದ್ದಾರೆ.
ಅಬುಜಿ ಉಬಾಕಾ ಹಾಗೂ ಟೋನಿ ಬಂಧಿತ ಆರೋಪಿಗಳಾಗಿದ್ದು, ಹೆಚ್ಚಿನ ವಿಚಾರಣೆ ನಡೆಯುತ್ತಿದೆ. ಆರೋಪಿಗಳ ಬಂಧನದ ಬಗ್ಗೆ ಪ್ರಾದೇಶಿಕ ವಿದೇಶಿ ನೋಂದಣಿ ಕೇಂದ್ರಕ್ಕೆ (ಎಫ್ಆರ್ಆರ್ಓ) ಮಾಹಿತಿ ನೀಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ನೈಜಿರಿಯನ್ ಪ್ರಜೆಗಳ ಹಾವಳಿ ನಿನ್ನೆ ಮೊನ್ನೆಯದಲ್ಲ. ಕೆಲವರು ವಿವಿಧ ವೀಸಾಗಳಡಿ ಬಂದಿದ್ದರೆ, ಇನ್ನೂ ಕೆಲವರು ಅಕ್ರಮವಾಗಿ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಇವರು ಹಲವು ಕಾನೂನು ಬಾಹಿರ ಚಟುವಟಿಕೆ, ಸ್ಥಳೀಯರೊಂದಿಗೆ ಗಲಾಟೆ ಮಾಡಿಕೊಂಡ ಅನೇಕ ಪ್ರಕರಣಗಳು ಬೆಳಕಿಗೆ ಬಂದಿವೆ. ಈ ಮಧ್ಯೆ ಇಬ್ಬರು ಅತ್ಯಾಚಾರ ಆರೋಪದಡಿ ಬಂಧನಕ್ಕೊಳಗಾಗಿದ್ದಾರೆ.