ಬೆಂಗಳೂರು:ಲಾಲ್‌ಬಾಗ್‌ನಲ್ಲಿ ಮುಖ್ಯ ಕಚೇರಿ ಹೊಂದಿರುವ ಹಾಪ್‌ಕಾಮ್ಸ್ ಸಂಸ್ಥೆ ಕೋವಿಡ್ ಕಾರಣದಿಂದ ಹೊಸ ವರ್ಷಕ್ಕೆ ಹಣ್ಣಿನ ಬುಟ್ಟಿಗಳನ್ನು ಆಯ್ದು ಮಾರಾಟ ಮಳಿಗೆಗಳಲ್ಲಿ ಮಾರಾಟ ಮಾಡಲು ಉದ್ದೇಶಿಸಿದೆ ಎಂದು ತಿಳಿಸಿದೆ.
ವೈರಾಣು ನಿರೋಧಕ ಶಕ್ತಿ ವೃದ್ಧಿಸಲು ಹಾಪ್‌ಕಾಮ್ಸ್‌ನಲ್ಲಿ ಬಿದಿರಿನ ಹಣ್ಣಿನ ಬುಟ್ಟಿ ಮಾರಾಟ! - ಹಾಪ್ಕಾಮ್ಸ್ನಿಂದ ರೈತರಿಗೆ ಬಿದರಿನ ಬುಟ್ಟಿ ಮಾರಾಟ
ಹೊಸ ವರ್ಷಕ್ಕೆ ವೈರಾಣು ನಿರೋಧಕ ಶಕ್ತಿ ವೃದ್ಧಿಸಲು ರೈತರಿಗೆ ಬಿದಿರಿನ ಹಣ್ಣುಗಳ ಬುಟ್ಟಿ ಮಾರಾಟ ಮಾಡಲು ಹಾಪ್‌ಕಾಮ್ಸ್ ಸಂಸ್ಥೆ ಮುಂದಾಗಿದೆ.
ಮನುಷ್ಯರ ದೇಹದಲ್ಲಿ ವೈರಾಣು ನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಹಣ್ಣುಗಳ ಸೇವನೆ ನೆರವಾಗುತ್ತದೆ. ತಮ್ಮ ಬಂಧು ಮಿತ್ರರಿಗೆ ಹೊಸ ವರ್ಷದ ಶುಭಾಶಯಗಳನ್ನು ಕೋರಲು ಹಾಗೂ ನೆನಪಿನ ಕಾಣಿಕೆಗಳನ್ನು ನೀಡುವುದರ ಬದಲು ಪೌಷ್ಟಿಕಾಂಶ ಭರಿತ ಹಣ್ಣುಗಳ ಬಿದಿರಿನ ಬುಟ್ಟಿಯನ್ನು ಕೊಡುವುದು ಸಮಂಜಸವಾಗಿದೆ. ಆದ್ದರಿಂದ ಕೋವಿಡ್ ವಿರುದ್ಧ ಹೋರಾಡುವ ಶಕ್ತಿ ಹೊಂದಿರುವಂತಹ ಬಿದರಿನ ಬುಟ್ಟಿಗಳಲ್ಲಿ ಹಣ್ಣು ಮತ್ತು ತರಕಾರಿಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಕೆ ಮಾಡುವಂತೆ ಗ್ರಾಹಕರಲ್ಲಿ ಹಾಪ್‌ಕಾಮ್ಸ್ ಮನವಿ ಮಾಡಿದೆ.
ಈ ನಿಟ್ಟಿನಲ್ಲಿ ಹಾಪ್‌ಕಾಮ್ಸ್ ಸಂಸ್ಥೆಯಿಂದ ಹೊಸ ವರ್ಷವನ್ನು ಸ್ವಾಗತಿಸಲು ಪೌಷ್ಟಿಕಾಂಶಗಳನ್ನು ಹಾಗೂ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ನೆರವಾಗುವ ಬಾಳೆ, ಸೇಬು, ಮೂಸಂಬಿ, ಕಿತ್ತಳೆ, ಕರಬೂಜ, ಸೀಬೆ, ಇತ್ಯಾದಿ ಹಣ್ಣುಗಳನ್ನು ಒಳಗೊಂಡ ಪರಿಸರಸ್ನೇಹಿ ಬಿದಿರಿನ ಬುಟ್ಟಿಯನ್ನು ಆಯ್ದು ಮಾರಾಟಕ್ಕೆ ಇಡಲಾಗಿದೆ. ಮಳಿಗೆಗಳಲ್ಲಿ ಆಸಕ್ತ ಗ್ರಾಹಕರು ಬಿದರಿನ ಬುಟ್ಟಿಯನ್ನು ಖರೀದಿಸಬಹುದಾಗಿದೆ. ಈ ಖರೀದಿಯು ರೈತ ಸಹಕಾರಿ ಸಂಸ್ಥೆಯ ಬಲವರ್ಧನೆಗೆ ಹಾಗೂ ರೈತ ಸಮುದಾಯದ ಅಭಿವೃದ್ಧಿಗೆ ನೆರವಾಗಲಿದೆ ಎಂದು ಹಾಮ್‌ಕಾಮ್ಸ್ ಹೇಳಿದೆ.