ಕರ್ನಾಟಕ

karnataka

ETV Bharat / state

ಕೆಎಂಎಫ್ ಅಧ್ಯಕ್ಷರಾಗಿ ಬಾಲಚಂದ್ರ ಅವಿರೋಧ ಆಯ್ಕೆ; ಸಂತಸ ವ್ಯಕ್ತಪಡಿಸಿದ ಜಾರಕಿಹೊಳಿ

ಕೆಎಂಎಫ್​​ ಅಧ್ಯಕ್ಷರಾಗಿ ಬಾಲಚಂದ್ರ ಜಾರಕಿಹೊಳಿ ಅವಿರೋಧವಾಗಿ ಆಯ್ಕೆ ಆಗಿದ್ದಾರೆ. ಇಂದು ಬಾಲಚಂದ್ರ ಜಾರಕಿಹೊಳಿ ನಾಮಪತ್ರ ಸಲ್ಲಿಕೆ ಮಾಡಿದ್ದರು. ಸಹಕಾರಿ ಕ್ಷೇತ್ರದಲ್ಲಿ ಚುನಾವಣೆ ನಡೆಯಬಾರದು. ಅವಿರೋಧ ಆಯ್ಕೆಯಾಗುವ ಸಾಧ್ಯತೆಗಳು ಖಂಡಿತವಾಗಿಯೂ ಇದೆ ಎಂದು ಸುಳಿವು ನೀಡಿದ್ದ ಬಾಲಚಂದ್ರ, ಅಂತಿಮವಾಗಿ ಅವಿರೋಧ ಆಯ್ಕೆ ಆಗಿದ್ದಾರೆ. ಈ ನಡುವೆ, ಹೆಚ್​ ಡಿ ರೇವಣ್ಣ ನಾಮಪತ್ರ ವಾಪಸ್​ ಪಡೆದಿದ್ದಾರೆ.

ನಾಮಪತ್ರ ಸಲ್ಲಿಕೆಗೂ ಮುನ್ನ ದೇವರಿಗೆ ಪೂಜೆ ಸಲ್ಲಿಸುತ್ತಿರುವ ಬಾಲಚಂದ್ರ ಜಾರಕಿಹೊಳಿ

By

Published : Aug 31, 2019, 11:58 AM IST

Updated : Aug 31, 2019, 2:22 PM IST

ಬೆಂಗಳೂರು:ಕೆಎಂಎಫ್​​ ಅಧ್ಯಕ್ಷರಾಗಿ ಬಾಲಚಂದ್ರ ಜಾರಕಿಹೊಳಿ ಅವಿರೋಧವಾಗಿ ಆಯ್ಕೆ ಆಗಿದ್ದಾರೆ. ಇಂದು ಬಾಲಚಂದ್ರ ಜಾರಕಿಹೊಳಿ ನಾಮಪತ್ರ ಸಲ್ಲಿಕೆ ಮಾಡಿದ್ದರು. ಸಹಕಾರಿ ಕ್ಷೇತ್ರದಲ್ಲಿ ಚುನಾವಣೆ ನಡೆಯಬಾರದು. ಅವಿರೋಧ ಆಯ್ಕೆಯಾಗುವ ಸಾಧ್ಯತೆಗಳು ಖಂಡಿತವಾಗಿಯೂ ಇದೆ ಎಂದಿದ್ದು ಸುಳಿವು ನೀಡಿದ್ದ ಬಾಲಚಂದ್ರ ಅಂತಿಮವಾಗಿ ಅವಿರೋಧ ಆಯ್ಕೆ ಆಗಿದ್ದಾರೆ.

ಅವಿರೋಧ ಆಯ್ಕೆ ಬಳಿಕ ಮಾತನಾಡಿದ ಅವರು, ಅವಿರೋಧ ಆಯ್ಕೆ ಆಗಿದ್ದಕ್ಕೆ ಹರ್ಷ ವ್ಯಕ್ತಪಡಿಸಿದ್ದಾರೆ.

ಜಾರಕಿಹೊಳಿ

ಮಾಜಿ ಸಚಿವ ಹೆಚ್.ಡಿ.ರೇವಣ್ಣನವರು ನಾಮಪತ್ರ ವಾಪಸ್ ಪಡೆದಿರುವ ಹಿನ್ನೆಲೆಯಲ್ಲಿ ತೀವ್ರ ಕುತೂಹಲ ಮೂಡಿಸಿದ್ದ ಕರ್ನಾಟಕ ಹಾಲು ಒಕ್ಕೂಟದ (ಕೆಎಂಎಫ್ ) ಅಧ್ಯಕ್ಷ ಪಟ್ಟ ಸಿಗುವುದು ಬಿಜೆಪಿ ಶಾಸಕ ಬಾಲಚಂದ್ರ ಜಾರಕಿಹೊಳಿಗೆ ಸುಲಭವಾಗಿದೆ. ಇಂದು ತಮ್ಮ ಬೆಂಬಲಿಗರೊಂದಿಗೆ ಬಾಲಚಂದ್ರ ಜಾರಕಿಹೊಳಿ ನಾಮಪತ್ರ ಸಲ್ಲಿಸಿದ್ದರು.

ನಾಮಪತ್ರ ಸಲ್ಲಿಕೆಗೂ ಮುನ್ನ ದೇವರಿಗೆ ಪೂಜೆ ಸಲ್ಲಿಸುತ್ತಿರುವ ಬಾಲಚಂದ್ರ ಜಾರಕಿಹೊಳಿ

ನಾಮಪತ್ರ ಸಲ್ಲಿಕೆಗೂ ಮುನ್ನ ದೇವಸ್ಥಾನಕ್ಕೆ ಭೇಟಿ ಮಾತನಾಡಿದ್ದ ಜಾರಕಿಹೊಳಿ, ಕೆಎಂಎಫ್ ಅಧ್ಯಕ್ಷ ಸ್ಥಾನಕ್ಕಾಗಿ ಅವಿರೋಧ ಆಯ್ಕೆಯಾಗಯವ ವಿಶ್ವಾಸವಿದೆ, ರೇವಣ್ಣ, ಭೀಮಾನಾಯ್ಕ್ ಇಲ್ಲಿಗೆ ಆಗಮಿಸಿದರೆ, ಅವರ ಮನವೊಲಿಕೆ ಮಾಡಿ ಅವಿರೋಧ ಆಯ್ಕೆಗೆ ಸಹಕಾರ ಕೋರುತ್ತೇನೆ ಎಂದು ಕೆಎಂಎಫ್ ಅಧ್ಯಕ್ಷ ಸ್ಥಾನದ ಸ್ಪರ್ಧಿ ಬಾಲಚಂದ್ರ ಜಾರಕಿಹೊಳಿ ಹೇಳಿದ್ದರು.

ಕೆಎಂಎಫ್ ಕೇಂದ್ರ ಕಚೇರಿಯಲ್ಲಿರುವ ಗಣಪತಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಕೆ ಮಾಡಿದ ನಂತರ 10.20ಕ್ಕೆ ನಾಮಪತ್ರ ಸಲ್ಲಿಕೆ ಮಾಡಿದರು. ಈ ವೇಳೆ, ಮಾತನಾಡಿದ ಜಾರಕಿಹೊಳಿ, ಕೆಎಂಎಫ್ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಕೆ ಮಾಡುತ್ತಿದ್ದೇನೆ. ಈಗಾಗಲೇ ಇಬ್ಬರು ಅಧಿಕಾರಿಗಳು ಸೇರಿ 13 ನಿರ್ದೇಶಕರು ನನ್ನ ಜೊತೆ ಇದ್ದಾರೆ. ಆದರೂ ಈ ಚುನಾವಣೆ ನಡೆಯಬಾರದು. ಸಹಕಾರಿ ಹಂತದಲ್ಲಿ ಚುನಾವಣೆ ನಡೆದಿಲ್ಲ ಹಾಗಾಗಿ ರೇವಣ್ಣ, ಭೀಮಾನಾಯ್ಕ್ ಎಲ್ಲರಿಗೂ ವಿನಂತಿ ಮಾಡುತ್ತಿದ್ದೇನೆ ಸಂಸ್ಥೆಯನ್ನು ಇನ್ನಷ್ಟು ಬೆಳಸಲು ಸಾಕಷ್ಟು ಅವಕಾಶವಿದೆ ಹಾಗಾಗಿ ಅವಿರೋಧ ಆಯ್ಕೆಗೆ ಮನವಿ ಮಾಡುತ್ತಿದ್ದೇನೆ ಎಂದರು.

ಅವಿರೋಧ ಆಯ್ಕೆಯಾಗುವ ಸಾಧ್ಯತೆಗಳು ಖಂಡಿತವಾಗಿಯೂ ಇದೆ. ರೇವಣ್ಣ, ಭೀಮಾನಾಯಕ್ ಇಲ್ಲಿಗೆ ಬಂದರೆ ಅವರ ಮನವೊಲಿಕೆ ಮಾಡುತ್ತೇನೆ. ಚುನಾವಣೆಗೆ ನಿಂತಿರುವುದು ಯಾರನ್ನೋ ವಿರೋಧಿಸಲೂ ಅಲ್ಲ, ದ್ವೇಷವನ್ನೂ ಮಾಡಲೂ ಅಲ್ಲ. ಸಹಕಾರ ಸಂಸ್ಥೆ ಎಲ್ಲರೂ ಕಟ್ಟಿ ಬೆಳಸಿದ್ದು, ಇಲ್ಲಿ ಪಕ್ಷ ಇಲ್ಲ, ಜಾತಿ ಇಲ್ಲ ಎಲ್ಲರೂ ಕೂಡಿ ಕೆಲಸ ಮಾಡಬೇಕು ಹಾಗಾಗಿ ಯಾರನ್ನೂ ದ್ವೇಷ ಮಾಡಲ್ಲ. ಯಾರ ವಿರುದ್ದ ಜಿದ್ದಿನಿಂದ ಚುನಾವಣೆ ಮಾಡುತ್ತಿಲ್ಲ ಹಾಗಾಗಿ ಅವರು ಬಂದರೆ ಅವರ ಸಹಕಾರ ತೆಗೆದುಕೊಂಡು ಆಯ್ಕೆಯಾಗುವ ಪ್ರಯತ್ನ ಮಾಡುತ್ತೇನೆ ಎಂದಿದ್ದರು.

ನಾಮಪತ್ರ ವಾಪಸ್​ ಪಡೆದ ರೇವಣ್ಣ:

ನಾಮಪತ್ರ ಹಿಂಪಡೆದ ಎಚ್​.ಡಿ.ರೇವಣ್ಣ

ಬೆಂಗಳೂರೂ: ಮಾಜಿ ಸಚಿವ ಹೆಚ್.ಡಿ.ರೇವಣ್ಣನವರು ನಾಮಪತ್ರ ವಾಪಸ್ ಪಡೆದಿರುವ ಹಿನ್ನೆಲೆಯಲ್ಲಿ ತೀವ್ರ ಕುತೂಹಲ ಮೂಡಿಸಿದ್ದ ಕರ್ನಾಟಕ ಹಾಲು ಒಕ್ಕೂಟದ (ಕೆಎಂಎಫ್ ) ಅಧ್ಯಕ್ಷ ಪಟ್ಟ ಸಿಗುವುದು ಬಿಜೆಪಿ ಶಾಸಕ ಬಾಲಚಂದ್ರ ಜಾರಕಿಹೊಳಿಗೆ ಸುಲಭವಾಗಿದೆ. ರೇವಣ್ಣ ಅವರು ಈ ಹಿಂದೆಯೇ ನಾಮಪತ್ರ ಸಲ್ಲಿಸಿದ್ದರು. ಆದರೆ, ನಿರ್ದೇಶಕರುಗಳು ಬಾಲಚಂದ್ರ ಜಾರಕಿಹೊಳಿ ಪರ ಇರುವ ಕಾರಣದಿಂದ ರೇವಣ್ಣ ಅವರು ಪತ್ರದ ಮೂಲಕ ನಾಮಪತ್ರ ವಾಪಸ್​​ ಪಡೆದಿದ್ದಾರೆ.

16 ಸದಸ್ಯ ಬಲ ಹೊಂದಿರುವ ಕೆಎಂಎಫ್ ಒಕ್ಕೂಟದಲ್ಲಿ ಕಾಂಗ್ರೆಸ್ ಬೆಂಬಲಿತ 9 ನಿರ್ದೇಶಕರಿದ್ದು, ಜೆಡಿಎಸ್ ಬೆಂಬಲಿತ 3 ನಿರ್ದೇಶಕರು ಹಾಗೂ ನಾಲ್ವರು ನಾಮ ನಿರ್ದೇಶಿತ ಸದಸ್ಯರಿದ್ದಾರೆ. ಈಗಾಗಲೇ 13 ನಿರ್ದೇಶಕರ ಸಂಖ್ಯಾಬಲ ಹೊಂದಿರುವ ಬಾಲಚಂದ್ರ ಜಾರಕಿಹೋಳಿ ಅವರು, ಕೆಎಂಎಫ್ ಅಧ್ಯಕ್ಷರಾಗಿ ಬಾಲಚಂದ್ರ ಜಾರಕಿಹೋಳಿ ಆಯ್ಕೆ ಬಹುತೇಕ ಖಚಿತವಾಗಿದೆ.

ಚುನಾವಣೆಯಿಂದ ದೂರವೇ ಉಳಿದ ಭೀಮಾನಾಯ್ಕ್​:

ಚುನಾವಣೆಯಿಂದ ದೂರ ಉಳಿದಿರೋ ರೇವಣ್ಣನವರು ಬೆಂಗಳೂರಿಗೂ ಬಂದಿಲ್ಲ. ಅವರು ಹಾಸನದಲ್ಲೇ ಇದ್ದಾರೆ. ಇನ್ನು ಭೀಮಾನಾಯ್ಕ್, ಮಾರುತಿ ಕಾಶೆಂಪುರ ಅವರು ಚುನಾವಣೆಯಲ್ಲಿ ಭಾಗಿಯಾಗಿಲ್ಲ ಎನ್ನಲಾಗುತ್ತಿದೆ.

Last Updated : Aug 31, 2019, 2:22 PM IST

ABOUT THE AUTHOR

...view details