ಕರ್ನಾಟಕ

karnataka

ETV Bharat / state

ಪರ-ವಿರೋಧಗಳ ನಡುವೆ ಮೆಟ್ರೋಗಾಗಿ ಭಜರಂಗಿ ದೇವಾಲಯ ನೆಲಸಮ - ಬೊಮ್ಮಸಂದ್ರ

ಹೊಸೂರು ಮುಖ್ಯರಸ್ತೆಯ ಬೊಮ್ಮಸಂದ್ರಕ್ಕೆ‌ ಸಂಪರ್ಕ ಕಲ್ಪಿಸುತ್ತಿರುವ ಮೆಟ್ರೋ ಯೋಜನೆಯ ಕಾಮಗಾರಿ ಚುರುಕುಗೊಂಡಿದೆ. ಈ ಹಿನ್ನೆಲೆ ಮೆಟ್ರೋಗಾಗಿ ಗಾರ್ವೆಬಾವಿ ಪಾಳ್ಯದಲ್ಲಿರುವ ಆಂಜನೇಯ ದೇವಾಲಯವನ್ನು ಬಿಎಂಆರ್​ಸಿಎಲ್​​ ತೆರವುಗೊಳಿಸಿದೆ.

bajrangi-temple-demolished-for-metro
bajrangi-temple-demolished-for-metro

By

Published : Jan 27, 2020, 7:28 PM IST

ಬೆಂಗಳೂರು(ಬೊಮ್ಮನಹಳ್ಳಿ): ಪುರಾತನ ದೇವಾಲಯ ತೆರೆವಿಗೆ ಬೊಮ್ಮನಹಳ್ಳಿಯಲ್ಲಿ ಪರ-ವಿರೋಧ ವ್ಯಕ್ತವಾಗಿದೆ. ಮೆಟ್ರೋ ವಿಸ್ತರಣೆಗಾಗಿ ಗಾರ್ವೆಬಾವಿ ಪಾಳ್ಯದಲ್ಲಿರುವ ಆಂಜನೇಯ ದೇವಾಲಯ ತೆರವಿಗೆ ಮೆಟ್ರೋ ಸಂಸ್ಥೆ ಗುರುತಿಸಿದಾಗಿನಿಂದಲೂ ವಿರೋಧ ವ್ಯಕ್ತವಾಗುತ್ತಲೇ ಇತ್ತು. ಇದೀಗ ದೇಗುಲವನ್ನು ತೆರವುಗೊಳಿಸಲಾಗಿದೆ.

ಪರ-ವಿರೋಧಗಳ ನಡುವೆಯೇ ಮೆಟ್ರೋಗಾಗಿ ಭಜರಂಗಿ ದೇವಾಲಯ ನೆಲಸಮ!

ಈ ನಡುವೆ ದೇವಾಲಯದ ಮುಂಭಾಗ ಮಾತ್ರ ತೆರವುಗೊಳಿಸಿ ಗರ್ಭಗುಡಿ ಉಳಿಸಿಕೊಳ್ಳುವ ಮಾತೂ ಕೇಳಿ ಬಂದಿತ್ತು. ದೇವಾಲಯ ತೆರವಿನ ಮಾತು ಕೇಳಿಬಂದಾಗಲಂತೂ ಭಕ್ತ ಸಮೂಹ ಬೀದಿಗಿಳಿದು ಹೋರಾಟ ಮಾಡಿತ್ತು. ಈ ನಡುವೆ ದೇವಾಲಯ ಹೋರಾಟ ಸಮಿತಿಯ ಬಾಯಿ ಮಾತಿಗೆ ತುಸು ಬೆಂಬಲ ವ್ಯಕ್ತಪಡಿಸಿದ ಮೆಟ್ರೋ ಇಂದು ದೇವಾಲಯ ಕೆಡವಿ ವಿಗ್ರಹವನ್ನು ಸುರಕ್ಷಿತವಾಗಿ ಸ್ಥಳಾಂತರಿಸಿದೆ.

ಹೊಸೂರು ಮುಖ್ಯರಸ್ತೆಯ ಬೊಮ್ಮಸಂದ್ರಕ್ಕೆ‌ ಸಂಪರ್ಕ ಕಲ್ಪಿಸುತ್ತಿರುವ ಮೆಟ್ರೋ ಯೋಜನೆಯ ಕಾಮಗಾರಿ ಚುರುಕುಗೊಂಡಿದ್ದು,ಮೆಟ್ರೋ ಪಿಲ್ಲರ್​ಗಳ‌ ಸಮೀಪದಲ್ಲೆ ದೇವಾಲಯವಿರುವುದರಿಂದ ಕಾಮಗಾರಿಗೆ ತೊಡಕಾದ ಹಿನ್ನೆಲೆ ಇಂದು ತೆರವುಗೊಳಿಸಲಾಗಿದೆ.

ಇದಕ್ಕೆ ಪರಿಹಾರಾರ್ಥವಾಗಿ ಒಂದೂವರೆ ಕೋಟಿ ರೂ. ಗಳನ್ನು ದೇಗುಲದ ಟ್ರಸ್ಟ್​ಗೆ ನೀಡಲಾಗಿದೆ. ಇತ್ತ ದೇವಾಲಯವನ್ನು ಮೆಟ್ರೋ ತೆರವುಗೊಳಿಸುತ್ತಿರುವ ಸ್ಥಳಕ್ಕೆ ಆಗಮಿಸಿದ ಕಾಳಿ ಸ್ವಾಮಿ ದೇಗುಲ ತೆರವಿಗೆ ವಿರೋಧ ವ್ಯಕ್ತಪಡಿಸಿದರು. ಪುರಾತನ ದೇವಾಲಯ ತೆರವಿನಿಂದ ಗ್ರಾಮಕ್ಕೆ ಕೆಡುಕಾದರೆ ಹೊಣೆ ಯಾರೆಂದು ಆಕ್ರೋಶ ವ್ಯಕ್ತಪಡಿಸಿದರು.

ತೆರವುಗೊಳ್ಳುತ್ತಿರುವ ದೇವಾಲಯದ ಸುತ್ತ ಪೊಲೀಸ್​ ಸರ್ಪಗಾವಲಿದ್ದು, ಮೂಲ ದೇವರ ಮೂರ್ತಿಗಳನ್ನ ಆಡಳಿತ ಮಂಡಳಿಯೇ ಸ್ಥಳಾಂತರಿಸಿದೆ.

ABOUT THE AUTHOR

...view details