ಬೆಂಗಳೂರು: ನಟ ಪುನೀತ್ ರಾಜ್‌ಕುಮಾರ್ ಅವರಿಗೆ ಎದೆನೋವು ಕಾಣಿಸಿಕೊಂಡಿದ್ದು, ಸದ್ಯ ಅವರನ್ನು ವಿಕ್ರಂ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಇಂದು ಶಿವರಾಜ್ ಕುಮಾರ್ ಅಭಿನಯದ ಭಜರಂಗಿ-2 ಸಿನಿಮಾ ರಿಲೀಸ್ ಆಗಿದೆ. ಅಣ್ಣನ ಸಿನಿಮಾ ಅದ್ಭುತ ಯಶಸ್ಸು ಕಾಣಲಿ ಎಂದು ಪುನೀತ್ ರಾಜ್ ಕುಮಾರ್ ಶುಭ ಕೋರಿದ್ದರು. ಇಂದು ಶಿವಣ್ಣ ಅಭಿನಯದ ಭಜರಂಗಿ ಸಿನಿಮಾ ತೆರೆಗೆ ಬಂದಿದೆ. ನಿಮ್ಮ ಶಿವಣ್ಣನನ್ನು ಗೆಲ್ಲಿಸಿ ಎಂದು ಶುಭ ಹಾರೈಸಿದ್ದರು.