ಬೆಂಗಳೂರು: ಬೈಯ್ಯಪ್ಪನಹಳ್ಳಿ ಪೊಲೀಸರು ದಾಳಿ ನಡೆಸಿ, ಕೊರೊನಾಗೆ ಬಳಸುವ ರೆಮ್ಡಿಸಿವಿರ್ನ್ನು ಕಾಳಸಂತೆಯಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಬಂಧಿಸಿದ್ದಾರೆ.
ಮನು (26) ಬಂಧಿತ ಆರೋಪಿಯಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಸ್ಟಾಫ್ ನರ್ಸ್ ಆಗಿ ಕೆಲಸ ಮಾಡುತ್ತಿದ್ದ ಆರೋಪಿ ಐಸಿಯು ವಾರ್ಡ್ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳ ಇಂಜೆಕ್ಷನ್ ಎಗರಿಸುತ್ತಿದ್ದ.
ಡಿಸಿಪಿ ಶರಣಪ್ಪ ಮಾತನಾಡಿದ್ದಾರೆ ರೋಗಿಗೆ ಕೊಡುವ 2 ಡೋಸೇಜ್ನಲ್ಲಿ 1 ಡೋಸೆಜ್ ಮಾತ್ರ ರೋಗಿಗೆ ನೀಡಿ ಮತ್ತೊಂದನ್ನು ಹೊರಗಡೆ ಮಾರಾಟ ಮಾಡುತ್ತಿದ್ದ. ಇಂಜೆಕ್ಷನ್ ಅಭಾವವಿರುವ ವ್ಯಕ್ತಿಗಳನ್ನು ಹುಡುಕಿ ಇಪ್ಪತ್ತೈದು ಸಾವಿರಕ್ಕೆ ಕೊಡುತ್ತಿದ್ದ.
ಕಗ್ಗದಾಸಪುರ ಮುಖ್ಯ ರಸ್ತೆಯ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಬಳಿ ಇಂಜೆಕ್ಷನ್ ಮಾರಾಟ ಮಾಡುವಾಗ ಆರೋಪಿಯನ್ನು ಬಂಧಿಸಲಾಗಿದ್ದು, ಬಂಧಿತನಿಂದ 50 ಸಾವಿರ ನಗದು 13 ರೆಮ್ಡಿಸಿವಿರ್ ಇಂಜೆಕ್ಷನ್ ವಶಕ್ಕೆ ಪಡೆಯಲಾಗಿದೆ. ಸದ್ಯ ಬೈಯ್ಯಪ್ಪನ ಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಓದಿ:ಕೋವಿಡ್ ಪರಿಸ್ಥಿತಿ ಅರಿಯಲು ತುಮಕೂರು ನಾಯಕರೊಂದಿಗೆ ಹೆಚ್ಡಿಕೆ ವಿಡಿಯೋ ಸಂವಾದ