ಬೆಂಗಳೂರು: ಯಾವುದೇ ಖಾತೆ ಕೊಟ್ಟರೂ ನಿಭಾಯಿಸುತ್ತೇನೆ. ಅದೇಬೇಕು ಇದೇಬೇಕು ಅಂತ ಕೇಳೋದಿಲ್ಲ. ನಗರಾಭಿವೃದ್ಧಿ ಖಾತೆಗೆ ಒಲವು ವ್ಯಕ್ತಪಡಿಸಿರುವೆ. ಆದರೆ, ನಮ್ಮ ಅರ್ಹತೆಗೆ ತಕ್ಕಂತೆ ಖಾತೆ ಸಿಗುವ ವಿಶ್ವಾಸವಿದೆ ಅಂತಾ ಬಿಜೆಪಿ ಶಾಸಕ ಬೈರತಿ ಬಸವರಾಜ ಹೇಳಿದ್ದಾರೆ.
ನಗರಾಭಿವೃದ್ಧಿ ಮೇಲೆ ಕಣ್ಣು.. ಆದ್ರೂ ಯಾವುದೇ ಖಾತೆ ಸಿಕ್ರೂ ನಿಭಾಯಿಸ್ತಾರಂತೆ ಬೈರತಿ ಬಸವರಾಜು
ಎಂಟಿಬಿ ನಾಗರಾಜ್, ಹೆಚ್.ವಿಶ್ವನಾಥ್, ಮಹೇಶ್ ಕುಮಟಳ್ಳಿ, ಆರ್. ಶಂಕರ್ ಅವರಿಗೂ ಸಚಿವ ಸ್ಥಾನ ನೀಡಲಾಗುತ್ತೆ. ವಿಧಾನಪರಿಷತ್‌ನಲ್ಲಿ 7-8 ಸ್ಥಾನ ಖಾಲಿಯಾಗಲಿವೆ. ಆಗ ಎಂಎಲ್‌ಸಿ ಮಾಡಿ ನಂತರ ಅವಕಾಶ ವಂಚಿತರಿಗೂ ಸಚಿವ ಸ್ಥಾನ ನೀಡಲಾಗುತ್ತೆ ಎಂದು ಬೈರತಿ ಬಸವರಾಜ್ ತಿಳಿಸಿದರು.
ಮುಖ್ಯಮಂತ್ರಿ ಯಡಿಯೂರಪ್ಪ ಪರ ಬ್ಯಾಟ್ ಬೀಸಿದ ಬೈರತಿ ಬಸವರಾಜು
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾನು ಯಾವುದೇ ಖಾತೆ ಕೊಟ್ರು ನಿಬಾಯಿಸುತ್ತೇನೆ. ಆರ್.ಶಂಕರ್ ಅವರಿಗೂ ಕೂಡ ಮುಂದಿನ ದಿನಗಳಲ್ಲಿ ಒಳ್ಳೇದಾಗುತ್ತೆ. ಸೋತವರಿಗೆ ಸಚಿವ ಸ್ಥಾನ ನೀಡಲು ಸುಪ್ರೀಂಕೋರ್ಟ್‌ನ ಆದೇಶ ಅಡ್ಡಿಯಾಗ್ತಿದೆ.
10+3 ಅಷ್ಟೇ ಅಲ್ಲ, ಎಂಟಿಬಿ ನಾಗರಾಜ್, ಹೆಚ್. ವಿಶ್ವನಾಥ್, ಮಹೇಶ್ ಕುಮಟಳ್ಳಿ, ಆರ್. ಶಂಕರ್ ಅವರಿಗೂ ಸಚಿವ ಸ್ಥಾನ ನೀಡಲಾಗುತ್ತೆ. ವಿಧಾನಪರಿಷತ್‌ನಲ್ಲಿ 7-8 ಸ್ಥಾನ ಖಾಲಿಯಾಗಲಿವೆ. ಅವಕಾಶ ವಂಚಿತರಿಗೆ ಎಂಎಲ್‌ಸಿ ಮಾಡಿ ನಂತರ ಅವರಿಗೂ ಸಚಿವ ಸ್ಥಾನ ನೀಡಲಾಗುತ್ತೆ ಎಂದು ಬೈರತಿ ಬಸವರಾಜ್ ತಿಳಿಸಿದರು.