ಕರ್ನಾಟಕ

karnataka

ETV Bharat / state

ಜಾಮೀನು ಸಿಕ್ಕರೂ ವೀರೇನ್ ಖನ್ನಾಗೆ ಇಲ್ಲ ರಿಲೀಫ್ - ಸ್ಯಾಂಡಲ್​ ವುಡ್ ಡ್ರಗ್ ಜಾಲ ನಂಟು ಆರೋಪ ಪ್ರಕರಣ

ಹೈಕೋರ್ಟ್, ಬಾಣಸವಾಡಿ ಪ್ರಕರದಲ್ಲಿ ಜಾಮೀನು ನೀಡಿದೆ. ಆದರೆ ಕಾಟನ್ ಪೇಟೆ ಪ್ರಕರಣದ ಅರ್ಜಿ ವಿಚಾರಣೆ ಇನ್ನೂ ಪ್ರಗತಿಯಲ್ಲಿರುವ ಕಾರಣ ವಿರೇನ್ ಖನ್ನಾ ಜೈಲಿನಲ್ಲಿರುವುದು ಅನಿವಾರ್ಯವಾಗಿದೆ.

By

Published : Jan 4, 2021, 10:37 PM IST

ಬೆಂಗಳೂರು:ಡ್ರಗ್ಸ್​​ ಜಾಲ ನಂಟು ಪ್ರಕರಣದ ಆರೋಪಿ ವೀರೇನ್ ಖನ್ನಾ ವಿರುದ್ಧ ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದಲ್ಲಿ ಹೈಕೋರ್ಟ್ ಜಾಮೀನು ನೀಡಿದ್ದು, ಕಾಟನ್ ಪೇಟೆ ಪ್ರಕರಣದಲ್ಲಿ ಇನ್ನೂ ಜಾಮೀನು ಸಿಕ್ಕಿಲ್ಲ. ಹೀಗಾಗಿ ಜಾಮೀನು ಸಿಕ್ಕರೂ ಖನ್ನಾ ಜೈಲಿನಲ್ಲೇ ಇರಬೇಕಾಗಿದೆ.

ಸಿಸಿಬಿ ಅಧಿಕಾರಿಗಳು ಮೊದಲು ಬಾಣಸವಾಡಿ ಠಾಣೆಯಲ್ಲಿ ದಾಖಲಾದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಖನ್ನಾನನ್ನು ಬಂಧಿಸಿದ್ದರು. ವಿಚಾರಣೆ ಬಳಿಕ ನ್ಯಾಯಾಂಗ ಬಂಧನದಲ್ಲಿದ್ದ ಖನ್ನಾನನ್ನು ಬಳಿಕ ಕಾಟನ್ ಪೇಟೆ ಠಾಣೆಯಲ್ಲಿ ದಾಖಲಾದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಾಡಿ ವಾರೆಂಟ್​ಗೆ ಮನವಿ ಮಾಡಿದ್ದರು. ನಂತರ ಕೋರ್ಟ್ ಆದೇಶದಂತೆ ಕಸ್ಟಡಿಗೆ ಪಡೆದು ವಿಚಾರಣೆ ನಡೆಸಲಾಗಿತ್ತು.

ಬಂಧಿತ ಖನ್ನಾ ಪರ ವಕೀಲರು, ಬಾಣಸವಾಡಿ ಪ್ರಕರಣದ ಸಂಬಂಧ ಸೆಷನ್ಸ್ ಕೋರ್ಟ್​ನಲ್ಲಿ ಜಾಮೀನು ಅರ್ಜಿ ಸಲ್ಲಿಸಿದ್ದರು. ಸೆಷನ್ಸ್ ಕೋರ್ಟ್​ನಲ್ಲಿ ಜಾಮೀನು ಅರ್ಜಿ ತಿರಸ್ಕೃತಗೊಂಡಿತ್ತು. ಈ ಹಿನ್ನೆಲೆ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು. ಇಂದು ಹೈಕೋರ್ಟ್, ಬಾಣಸವಾಡಿ ಪ್ರಕರದಲ್ಲಿ ಜಾಮೀನು ನೀಡಿದೆ. ಆದರೆ ಕಾಟನ್ ಪೇಟೆ ಪ್ರಕರಣದ ಅರ್ಜಿ ವಿಚಾರಣೆ ಇನ್ನೂ ಪ್ರಗತಿಯಲ್ಲಿರುವ ಕಾರಣ ವೀರೇನ್ ಖನ್ನಾ ಜೈಲಿನಲ್ಲಿರುವುದು ಅನಿವಾರ್ಯವಾಗಿದೆ.

For All Latest Updates

ABOUT THE AUTHOR

...view details