ಬೆಂಗಳೂರು: ಪಬ್ನಲ್ಲಿ ಕನ್ನಡ ಹಾಡು ಹಾಕಿ ಎಂದಿದ್ದಕ್ಕೆ ಯುವತಿ ಹಾಗೂ ಆತನ ಸಹೋದರನ ಮೇಲೆ ಹಲ್ಲೆಗೆ ಯತ್ನಿಸಿದ ಘಟನೆ ಕೋರಮಂಗಲದ 80 ಫೀಟ್ ರಸ್ತೆಯಲ್ಲಿರುವ ಬದ್ಮಾಷ್ ಪಬ್ನಲ್ಲಿ ಮಧ್ಯರಾತ್ರಿ ನಡೆದಿದೆ.
ನಿನ್ನೆ ರಾತ್ರಿ ಸುಮಿತಾ ಎಂಬುವರ ಹುಟ್ಟುಹಬ್ಬ ಪ್ರಯುಕ್ತ ಸಹೋದರ ನಂದಕಿಶೋರ್ ಹಾಗೂ 15 ಜನರ ತಂಡ ಕೋರಮಂಗಲದಲ್ಲಿರುವ ಬದ್ಮಾಶ್ ಪಬ್ಗೆ ಹೋಗಿದ್ದರು. ಈ ವೇಳೆ ನಿರಂತರವಾಗಿ ಪರಭಾಷೆ ಹಾಡುಗಳನ್ನೇ ಫ್ಲೇ ಮಾಡಲಾಗುತ್ತಿತ್ತು. ಕನ್ನಡ ಹಾಡು ಹಾಕುವಂತೆ ಪಬ್ ಡಿಜಿ ಸಿದ್ಧಾರ್ಥ್ಗೆ ಮನವಿ ಮಾಡಿಕೊಂಡಿದ್ದಾರಂತೆ. 9.30ರಿಂದ ರಾತ್ರಿ 12.30 ತನಕ ಡಿಜೆ ಬಳಿ ಮನವಿ ಮಾಡಿದ್ದಾರೆ. ಅಲ್ಲದೇ ಸ್ವತಃ ಯುವತಿಯೇ ತೆರಳಿ ಒಂದೇ ಒಂದು ಕನ್ನಡ ಹಾಡು ಹಾಕಿ ಎಂದು ನಾಲ್ಕೈದು ಬಾರಿ ಕೇಳಿದ್ದಾರಂತೆ. ಇದಕ್ಕೆ ಸಿದ್ದಾರ್ಥ್, ಕನ್ನಡ ಸಾಂಗ್ ಹಾಕಲು ಆಗುವುದಿಲ್ಲ, ಕನ್ನಡ ಸಾಂಗ್ ಕೇಳೋದಾದ್ರೆ ಹೊರಗೆ ಹೋಗಿ ಅಂತಾ ಅವಾಜ್ ಹಾಕಿದ್ದಾನಂತೆ.