ಬೆಂಗಳೂರು:ಮಧ್ಯರಾತ್ರಿವರೆಗೆ ಸೇವೆ ವಿಸ್ತರಿಸಿ ಪ್ರಯಾಣಿಕರಿಗೆ ಸಿಹಿ ಸುದ್ದಿ ನೀಡಿದ್ದ ನಮ್ಮ ಮೆಟ್ರೋ, ಒಂದೇ ವಾರದಲ್ಲಿ ಕಹಿ ಸುದ್ದಿ ಪ್ರಕಟಿಸಿದೆ.
ಗುಡ್ ನ್ಯೂಸ್ ಜೊತೆ ಒಂದು ಬ್ಯಾಡ್ ನ್ಯೂಸ್ ಕೊಟ್ಟ ನಮ್ಮ ಮೆಟ್ರೋ - ನಮ್ಮ ಮೆಟ್ರೋ ಸ್ಮಾರ್ಟ್ ಕಾರ್ಡ್ ರಿಯಾಯಿತಿ ಇಳಿಕೆ
ಮಧ್ಯರಾತ್ರಿವರೆಗೆ ಸೇವೆಯ ಅವಧಿ ವಿಸ್ತರಿಸಿ ಪ್ರಯಾಣಿಕರಿಗೆ ಸಿಹಿ ಸುದ್ದಿ ನೀಡಿದ್ದ ನಮ್ಮ ಮೆಟ್ರೋ, ಒಂದೇ ವಾರದಲ್ಲಿ ಕಹಿ ಸುದ್ದಿ ಪ್ರಕಟಿಸಿದೆ.
ನಮ್ಮ ಮೆಟ್ರೋ
ಮೆಟ್ರೋ ಸ್ಮಾರ್ಟ್ ಕಾರ್ಡ್ ಬಳಕೆದಾರರಿಗೆ ಒಂದು ಶಾಕ್ ಕೊಟ್ಟಿರುವ ಬಿಎಂಆರ್ಸಿಎಲ್, ಸ್ಮಾರ್ಟ್ ಬಳಕೆದಾರರಿಗೆ ನೀಡಿದ್ದ ರಿಯಾಯಿತಿಯನ್ನು ಶೇ. 15ರಿಂದ ಶೇ. 5ಕ್ಕೆ ಇಳಿಸಿದೆ.
ಮೆಟ್ರೋ ಪ್ರಯಾಣವನ್ನ ಕ್ಯಾಶ್ ಲೆಸ್ ಮಾಡುವ ಉದ್ದೇಶದಿಂದ ಸ್ಮಾರ್ಟ್ ಕಾರ್ಡ್ ಬಳಕೆದಾರರಿಗೆ ಶೇಕಡಾ 15ರಷ್ಟು ರಿಯಾಯಿತಿ ನೀಡಲಾಗುತಿತ್ತು. ಆದರೆ, ಸ್ಮಾರ್ಟ್ ಕಾರ್ಡ್ ಬಳಕೆದಾರರ ಪ್ರಮಾಣ ಶೇಕಡಾ 62ಕ್ಕೆ ಏರಿಕೆಯಾಗಿರುವ ಹಿನ್ನೆಲೆ ರಿಯಾಯಿತಿಯನ್ನು ಕಡಿತಗೊಳಿಸಲಾಗಿದೆ. ಜನವರಿ 20ರಿಂದ ರಿಯಾಯಿತಿಯನ್ನು ಪರಿಷ್ಕರಿಸಲಾಗುತ್ತಿದೆ.