ಬೆಂಗಳೂರು:ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಹಿಂದುಳಿದ ವರ್ಗಗಳ ವಿಭಾಗದ ಕಾರ್ಯಕಾರಿಣಿ ಸಭೆ ಇಂದು ಕೆಪಿಸಿಸಿ ಕಚೇರಿಯಲ್ಲಿ ನಡೆಯಿತು. ಈ ಒಂದು ಸಭೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯನವರು ನನ್ನ ಕೈಯಲ್ಲಿ ಅಧಿಕಾರ ಇದ್ದಿದ್ರೆ ಇವಿಎಂ ಮಷಿನ್ ಕೈ ಬಿಡುತ್ತಿದೆ. ಚುನಾವಣಾ ಆಯೋಗದವರು ಬದಲಾವಣೆ ಮಾಡಬೇಕು. ಇವಿಎಂ ಯಂತ್ರದ ಬದಲು ಬ್ಯಾಲೆಟ್ ಪೇಪರ್ ಬರಬೇಕು ಎಂದಿದ್ದಾರೆ.
ಅಮೆರಿಕಾ, ರಷ್ಯಾ, ಯುರೋಪ್ ಅಂತಹ ದೇಶಗಳಲ್ಲಿ ಇವಿಎಂ ತಿರಸ್ಕಾರ ಮಾಡಿದ್ದಾರೆ. ರಾಜ್ಯದ ನೆರೆ-ಬರ ಸಮಸ್ಯೆಗೆ ಒಂದು ಪೈಸೆ ಕೂಡ ಕೇಂದ್ರ ಸರ್ಕಾರ ಬಿಡುಗಡೆ ಮಾಡಿಲ್ಲ. ಯಡಿಯೂರಪ್ಪ ಒಲ್ಲದ ಶಿಶು. ಅಕ್ರಮವಾಗಿ ಸರ್ಕಾರ ರಚನೆ ಮಾಡಿದ್ದಾರೆ. ಧಮ್ಕಿ ಹಾಕಿ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾರೆ. ಬಿಜೆಪಿಯವರಿಗೂ ಯಡಿಯೂರಪ್ಪಗೆ ಸಿಎಂ ಮಾಡೋ ಮನಸ್ಸಿರಲಿಲ್ಲ. ಹಾಲು ಕುಡಿದ ಮಕ್ಕಳೇ ಬದುಕಲ್ಲ, ಇನ್ನೂ ವಿಷ ಕುಡಿದ ಮಕ್ಳು ಬದುಕ್ತಾವಾ? ಎಂದು ಹೇಳುವ ಮೂಲಕ ಯಡಿಯೂರಪ್ಪ ಹಾಗೂ ಅವರ ಸರ್ಕಾರದ ಬಗ್ಗೆ ವ್ಯಂಗ್ಯವಾಡಿದರು. ನಳೀನ್ ಕುಮಾರ್ ಕಟೀಲ್ ಬಿಜೆಪಿ ರಾಜ್ಯಾಧ್ಯಕ್ಷರಾಗಿರುವುದು ರಾಜ್ಯದ ದೌರ್ಭಾಗ್ಯ ಎಂದರು. ಮೋದಿ ಎಲ್ಲ ಸಂಸ್ಥೆಯನ್ನು ತಮ್ಮ ಹಿಡಿತಕ್ಕೆ ಪಡೆದಿದ್ದಾರೆ. ಸರ್ವಾಧಿಕಾರ ದೇಶದಲ್ಲಿದೆ. ದೇಶ ಉಳಿಸಲು ನಾವು ಬೀದಿ ಗಿಳಿಯೋಣ, ನಮಗೆ ಭವಿಷ್ಯ ಇದೆ. ನಾವೇ ಮತ್ತೆ ಅಧಿಕಾರಕ್ಕೆ ಬರುತ್ತೇವೆ. ಜನ ಬಿಜೆಪಿಗೆ ಪಾಠ ಕಲಿಸಲು ಕಾದಿದ್ದಾರೆ. 17 ಕ್ಷೇತ್ರದ ಉಪಚುನಾವಣೆಯಲ್ಲಿ ಬಹುತೇಕ ಸ್ಥಾನ ಗೆಲ್ಲುತ್ತೇವೆ ಎಂದು ಭವಿಷ್ಯ ನುಡಿದರು.
ಬಿಎಸ್ವೈ ಹಿಂಬಾಗಿಲಿನಿಂದ ಅಧಿಕಾರಕ್ಕೆ ಬಂದಿದ್ದಾರೆ:
ಮಾಜಿ ಸಿಎಂ ಸಿದ್ದರಾಮಯ್ಯ ಮಾತನಾಡಿ, ನಾವು ಕಳೆದ ಚುನಾವಣೆಯ ಸೋಲನ್ನು ಸರಿಯಾಗಿ ವಿಷ್ಲೇಶಿಸಲಾಗುತ್ತಿಲ್ಲ. ಲೋಕಸಭಾ ಚುನಾವಣೆಯಲ್ಲೂ ಹಿನ್ನಡೆ ಆಯಿತು. ನಮಗೆ ವಿಧಾನಸಭೆಯಲ್ಲಿ ಮತ ಹೆಚ್ಚು ಬಂದರೂ, ಸೀಟು ಕಡಿಮೆ ಆಯಿತು. ಇದು ಪ್ರಜಾಪ್ರಭುತ್ವದ ವಿಪರ್ಯಾಸ, ಏನೇ ಬಂದರೂ ಒಪ್ಪಬೇಕು. ಭಾವನಾತ್ಮಕ ವಿಚಾರ ಮುಂದಿಟ್ಟ ಕಾರಣ, ನಮ್ಮ ಸರ್ಕಾರದ ಕಾರ್ಯ ಗೌಣವಾಯಿತು. ಕೊಟ್ಟ ಮಾತಂತೆ ನಡೆದುಕೊಂಡ ಸರ್ಕಾರ ನಮ್ಮದು. ನಾವು ಪರಿಣಾಮಕಾರಿಯಾಗಿ ಜನರನ್ನು ತಲುಪಲು ಆಗಲಿಲ್ಲ. ಅವರ ಅಪಪ್ರಚಾರಕ್ಕೆ ಸರಿಯಾದ ಪ್ರತ್ಯುತ್ತರ ನೀಡಲಿಲ್ಲ. ಇವಿಎಂ ಮೇಲೆ ನನಗೆ ಈಗಲೂ ಅನುಮಾನ ಇದೆ. 14 ತಿಂಗಳು ಮೈತ್ರಿ ಸರ್ಕಾರ ಮಾಡಿದ್ದೆವು. ನಮ್ಮ 14 ಹಾಗೂ ಜೆಡಿಎಸ್ನ 3 ಶಾಸಕರನ್ನು ಬಿಜೆಪಿಯವರು ಸೆಳೆದರು. ಆಪರೇಷನ್ ಕಮಲಕ್ಕೆ ಸರ್ಕಾರ ಬಿತ್ತು. ಸ್ವಯಂ ಪ್ರೇರಣೆಯಿಂದ ಶಾಸಕರು ರಾಜೀನಾಮೆ ನೀಡಿರಲಿಲ್ಲ. ಯಡಿಯೂರಪ್ಪ ಹಿಂಬಾಗಿಲಿನಿಂದ ಅಧಿಕಾರಕ್ಕೆ ಬಂದಿದ್ದಾರೆ ಎಂದರು.
ಹಿಂದುಳಿದ ವರ್ಗಗಳ ವಿಭಾಗದ ಕಾರ್ಯಕಾರಣಿ ಸಭೆ ಬಿಜೆಪಿ ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾಗಿರುವ ಪಕ್ಷ:
ರಾಜ್ಯಸರ್ಕಾರ ಬಂದು ಒಂದೂವರೆ ತಿಂಗಳು, ಮೋದಿ ಸರ್ಕಾರ ಮತ್ತೆ ಅಧಿಕಾರಕ್ಕೆ ಬಂದು 100 ದಿನ ಆಗಿದೆ. ಹಿಂದೆ ಕೂಡ ಏನೂ ಮಾಡಿರಲಿಲ್ಲ, ಈಗೂ ಆಗಿಲ್ಲ. ಮೋದಿಯ ಐದು ವರ್ಷದ ಆಡಳಿತದ ಫಲವಾಗಿ ಜಿಡಿಪಿ ಶೇ. 5 ಕ್ಕೆ ಕುಸಿದಿದೆ. ಇದು ವಾಸ್ತವವಾಗಿ ಶೇ. 3.5 ಆಗಿದೆ ಎಂದರು. ಬಿಜೆಪಿ ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾಗಿರುವ ಪಕ್ಷ. ನಾವು ನೀಡಿದ ಸಾಮಾಜಿಕ ನ್ಯಾಯವನ್ನು ಕಿತ್ತು ಹಾಕಿದ್ದಾರೆ. ಸಮಾನತೆ ಯಾವಾಗ ಬರಲಿದೆ. ಅಧಿಕಾರ, ಸಂಪತ್ತಿನಲ್ಲಿ ಎಲ್ಲರಿಗೂ ಪಾಲು ಸಿಗದಿದ್ದರೆ ಸಾಮಾಜಿಕ ನ್ಯಾಯ ಹೇಗೆ ಬರುತ್ತದೆ. ಇದನ್ನು ನಾವು ಜನರಿಗೆ ತಿಳಿಸಬೇಕು. ಸತ್ಯವನ್ನು ನಾವು ಹೇಳುವುದಕ್ಕೆ ಆಗದಿದ್ದರೆ ಹೇಗೆ? ಹೇಳಿಲ್ಲ ಎಂಬ ಕೊರಗು ನನ್ನದು. ಕಾಂಗ್ರೆಸ್ ಪಕ್ಷ ನಾಲ್ಕು ಗೋಡೆ ಮಧ್ಯ ಇರುವುದನ್ನು ಬಿಡಬೇಕು, ಬೀದಿಗಿಳಿಯಬೇಕು ಎಂದಿದ್ದಾರೆ.
ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಮಾತನಾಡಿ, ಇಂದಿನ ಆರ್ಥಿಕ ಕುಸಿತ ಮೋದಿ ಸರ್ಕಾರದ ಕೆಟ್ಟ ನಿರ್ಧಾರದಿಂದ ಆಗಿದ್ದು, 100 ದಿನದ ಸಾಧನೆ ಬಗ್ಗೆ ಮಾತಾಡುತ್ತಿದ್ದಾರೆ. ನೋಟು ಅಮಾನ್ಯ, ಅವೈಜ್ಞಾನಿಕ ಜಿಎಸ್ಟಿ ಇಂದಾಗಿ ದೇಶದ ಆರ್ಥಿಕ ಸ್ಥಿತಿ ಕುಸಿದಿದೆ ಎಂದು ಆರ್ಬಿಐ ಹೇಳಿದೆ. ರಾಜ್ಯದಲ್ಲಿ ಹಿಂಬಾಗಿಲಿಂದ ಅಧಿಕಾರ ಹಿಡಿದ ಬಿಜೆಪಿ ಜನ ವಿರೋಧಿ ನೀತಿ ವಿರುದ್ಧ ದನಿ ಎತ್ತಬೇಕಿದೆ ಎಂದರು.