ದೇವನಹಳ್ಳಿ: ಬೆಂಗಳೂರು ನಗರದಿಂದ ಜೈಪುರಕ್ಕೆ ಹಾರಾಟ ನಡೆಸಿದ್ದ ಇಂಡಿಗೋ ವಿಮಾನದಲ್ಲಿ ಗರ್ಭಿಣಿ ಮಹಿಳೆ ಸುರಕ್ಷಿತವಾಗಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.
ಓದಿ: ಡ್ರಗ್ಸ್ ಪ್ರಕರಣ: ಗೋವಿಂದಪುರ ಪೊಲೀಸ್ ಠಾಣೆಗೆ ಟಾಲಿವುಡ್ ನಟ ತನೀಶ್ ಹಾಜರ್
ದೇವನಹಳ್ಳಿ: ಬೆಂಗಳೂರು ನಗರದಿಂದ ಜೈಪುರಕ್ಕೆ ಹಾರಾಟ ನಡೆಸಿದ್ದ ಇಂಡಿಗೋ ವಿಮಾನದಲ್ಲಿ ಗರ್ಭಿಣಿ ಮಹಿಳೆ ಸುರಕ್ಷಿತವಾಗಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.
ಓದಿ: ಡ್ರಗ್ಸ್ ಪ್ರಕರಣ: ಗೋವಿಂದಪುರ ಪೊಲೀಸ್ ಠಾಣೆಗೆ ಟಾಲಿವುಡ್ ನಟ ತನೀಶ್ ಹಾಜರ್
ಬೆಳಗ್ಗೆ 5:40ಕ್ಕೆ ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಜೈಪುರಕ್ಕೆ ಹಾರಿದ ಇಂಡಿಗೋ 6ಇ 469 ವಿಮಾನದಲ್ಲಿ ಮಾರ್ಗ ಮಧ್ಯ ಗರ್ಭಿಣಿ ಮಹಿಳೆಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ಈ ಸಮಯದಲ್ಲಿ ವಿಮಾನದಲ್ಲಿದ್ದ ಪ್ರಯಾಣಿಕ ವೈದ್ಯೆ ಡಾ. ಸುಭಾನ್ ನಜಿರ್ ಮತ್ತು ವಿಮಾನದ ಸಿಬ್ಬಂದಿ ಸುರಕ್ಷಿತವಾಗಿ ಹೆರಿಗೆ ಮಾಡಿಸಿದ್ದಾರೆ.
ವಿಮಾನದಲ್ಲಿಯೇ ಮಹಿಳೆಗೆ ಹೆಣ್ಣು ಮಗು ಜನನವಾಗಿದ್ದು, ತಾಯಿ-ಮಗು ಆರೋಗ್ಯವಾಗಿದ್ದಾರೆ. ಜೈಪುರದಲ್ಲಿ ವಿಮಾನ ಲ್ಯಾಂಡ್ ಆದ ತಕ್ಷಣವೇ ಆಂಬ್ಯುಲೆನ್ಸ್ನಲ್ಲಿ ತಾಯಿ-ಮಗುವನ್ನು ಆಸ್ಪತ್ರೆಗೆ ಕಳಿಸಲಾಗಿತು.
ಕೆಲ ತಿಂಗಳ ಹಿಂದೆ ದಿಲ್ಲಿಯಿಂದ ಬೆಂಗಳೂರಿಗೆ ಬರುತ್ತಿದ್ದ ವಿಮಾನದಲ್ಲೂ ಅವಧಿಪೂರ್ವ ಸುರಕ್ಷಿತ ಹೆರಿಗೆ ಆಗಿತ್ತು. ಜೈಪುರ ವಿಮಾನದಲ್ಲಿ ಸುರಕ್ಷಿತ ಹೆರಿಗೆ ಮಾಡಿಸಿದ ವೈದ್ಯೆ ಡಾ. ಸುಭಾನ್ ನಜಿರ್ ಮತ್ತು ವಿಮಾನದ ಸಿಬ್ಬಂದಿಯನ್ನು ಗೌರವಿಸಲಾಯಿತು.