ಬೆಂಗಳೂರು: ನಗರದಲ್ಲಿಂದು ಕೊರೊನಾ ಸೋಂಕಿಗೆ ಆಗ ತಾನೇ ಜನಿಸಿದ ಹಸುಗೂಸು ಬಲಿಯಾಗಿದೆ. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ದೊಡ್ಡಬಳ್ಳಾಪುರ ಮೂಲದ ದಂಪತಿಗೆ ಜನಿಸಿದ್ದ ಮಗು ಹುಟ್ಟಿದ ನಾಲ್ಕು ಗಂಟೆಗಳಲ್ಲೇ ಮೃತಪಟ್ಟಿದೆ.
ಅಯ್ಯೋ ದುರ್ವಿಧಿಯೇ... ಹುಟ್ಟಿದ ನಾಲ್ಕೇ ತಾಸಲ್ಲಿ ಮಹಾಮಾರಿ ಕೊರೊನಾಗೆ ಹಸುಗೂಸು ಬಲಿ! - ಹುಟ್ಟಿದ ಮಗುವಿಗೆ ಕೊರೊನಾ
ಮಗುವಿನ ತಾಯಿಗೆ ಕೊರೊನಾ ಪಾಸಿಟಿವ್ ಇದ್ದು, ಅದು ಮಗುವಿಗೂ ಹರಡಿದೆ. ತಂದೆ ಕೂಡ ಅಂತ್ಯ ಸಂಸ್ಕಾರದಲ್ಲಿ ಭಾಗಿಯಾಗಲು ಸಾಧ್ಯವಾಗಲಿಲ್ಲ. ಜನಿಸಿದ ನಾಲ್ಕು ತಾಸುಗಳಲ್ಲೇ ಕಂದಮ್ಮ ಸಾವನ್ನಪ್ಪಿದೆ.
ಕೊರೊನಾಗೆ ಬಲಿಯಾದ ಹಸುಗೂಸು
ನವಜಾತ ಶಿಶುವಿಗೆ ಮಹಾಮಾರಿ ಕೋವಿಡ್ ಸೋಂಕು ತಗುಲಿದ ಕಾರಣ ಮೃತದೇಹವನ್ನು ಆಂಬ್ಯುಲೆನ್ಸ್ ಸಿಬ್ಬಂದಿಯೇ ಜೆ.ಜೆ. ಆರ್ ನಗರದ ಹಿಂದೂ ರುದ್ರಭೂಮಿಯಲ್ಲಿ ಅಂತ್ಯ ಸಂಸ್ಕಾರ ನೆರವೇರಿಸಿದರು.
ಮಗುವಿನ ತಾಯಿಗೆ ಕೊರೊನಾ ಪಾಸಿಟಿವ್ ಇದ್ದು, ಅದು ಮಗುವಿಗೂ ಹರಡಿದೆ. ತಂದೆ ಕೂಡ ಅಂತ್ಯ ಸಂಸ್ಕಾರದಲ್ಲಿ ಭಾಗಿಯಾಗಲು ಸಾಧ್ಯವಾಗಲಿಲ್ಲ. ಶಾಸಕ ಜಮೀರ್ ಸೂಚನೆ ಮೇರೆಗೆ ಅವರ ಕಾರ್ಯಕರ್ತರು, ಆ್ಯಂಬುಲೆನ್ಸ್ ಸಿಬ್ಬಂದಿಯೇ ಸೇರಿ ಅಂತ್ಯ ಸಂಸ್ಕಾರ ನೆರವೇರಿಸಿದರು.