ಕರ್ನಾಟಕ

karnataka

ETV Bharat / state

ಕೆಆರ್‌ಪೇಟೆ ಗೆದ್ದಿರೋದ್ರಿಂದ ಸಿಎಂ ಬಿಎಸ್​ವೈ ಕೊರಗು ದೂರಾಗಿದೆ.. ಬಿ ವೈ ವಿಜಯೇಂದ್ರ - ಬಿ.ವೈ ವಿಜಯೇಂದ್ರ ಲೇಟೆಸ್ಟ್​ ಸುದ್ದಿ

ಕೆಆರ್‌ಪೇಟೆ ಜನರ ಮನಸ್ಸನ್ನ ಗೆಲ್ಲೋದಕ್ಕೆ‌ ಸಾಧ್ಯ ಆಗ್ತಿಲ್ಲ ಅಂತಾ ತಂದೆಯವರಿಗೆ ನೋವು ಇತ್ತು. ಆದರೆ, ಇವತ್ತು ಸಂತೋಷ, ನೆಮ್ಮದಿ ಇದೆ. ಮುಂದಿನ ದಿನಗಳಲ್ಲಿ ಕೆಆರ್‌ಪೇಟೆ ಅಭಿವೃದ್ಧಿ ದಿಕ್ಕಿನತ್ತ ಸಾಗಲಿದೆ ಎಂದು ಸಿಎಂ ಪುತ್ರ ಬಿ ವೈ ವಿಜಯೇಂದ್ರ ಹೇಳಿದ್ದಾರೆ.

B. Y Vijayendra
ಬಿ.ವೈ ವಿಜಯೇಂದ್ರ

By

Published : Dec 10, 2019, 9:50 PM IST

ಬೆಂಗಳೂರು: ಎಲ್ಲೋ ಒಂದು ಕಡೆ ಕೆಆರ್‌ಪೇಟೆ ಜನರ ಮನಸ್ಸನ್ನ ಗೆಲ್ಲೋದಕ್ಕೆ‌ ಸಾಧ್ಯ ಆಗ್ತಿಲ್ಲ ಅಂತಾ ತಂದೆಯವರಿಗೆ ನೋವು ಇತ್ತು. ಆದರೆ, ಇವತ್ತು ಸಂತೋಷ, ನೆಮ್ಮದಿ ಇದೆ. ಮುಂದಿನ ದಿನಗಳಲ್ಲಿ ಕೆಆರ್‌ಪೇಟೆ ಅಭಿವೃದ್ಧಿ ದಿಕ್ಕಿನತ್ತ ಸಾಗಲಿದೆ ಎಂದು ಸಿಎಂ ಬಿಎಸ್​ವೈ ಪುತ್ರ ಬಿ ವೈ ವಿಜಯೇಂದ್ರ ಹೇಳಿದ್ದಾರೆ.

ಸಿಎಂ ಪುತ್ರ ಬಿ ವೈ ವಿಜಯೇಂದ್ರ..

ವಿಜಯನಗರದ ಆದಿಚುಂಚನಗಿರಿ ಶಾಖಾ ಮಠಕ್ಕೆ ಬಿಜೆಪಿ ಯುವ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ ವೈ ವಿಜಯೇಂದ್ರ ಭೇಟಿ ನೀಡಿ, ನಿರ್ಮಲಾನಂದ ಶ್ರೀಗಳ ಆಶೀರ್ವಾದ ಪಡೆದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಸುಭದ್ರ ಸರ್ಕಾರ ಬೇಕು ಎಂದು ಮತದಾರರು ಆಶೀರ್ವಾದ ಮಾಡಿದ್ದಾರೆ. ಹೆಚ್ಚಿನ ಅಭಿವೃದ್ಧಿ ಇನ್ಮುಂದೆ ಆಗಲಿದೆ. ಹಲವಾರು ದಿನಗಳಿಂದ ಶ್ರೀಗಳ ಆರ್ಶಿವಾದ ಪಡೆಯಬೇಕು ಅಂತಾ ಅಂದುಕೊಂಡಿದ್ದೆ. ಚುನಾವಣೆ ಸಂದರ್ಭದಲ್ಲಿ ಭೇಟಿ ಮಾಡೋಕೆ ಸಾಧ್ಯ ಆಗಿರಲಿಲ್ಲ. ಹಾಗಾಗಿ ಇವತ್ತು ಭೇಟಿ ಮಾಡಿ ಆಶೀರ್ವಾದ ಪಡೆದೆ ಎಂದರು.

ಕೆಆರ್‌ಪೇಟೆಯಲ್ಲಿ ಜಯಗಳಿಸಿದ್ದು ವಿಜಯೇಂದ್ರ ಅನ್ನೋದು ಸರಿಯಲ್ಲ. ವಿಜಯೇಂದ್ರ ಅನ್ನೋದು ನಂತರ, ಮೊದಲು ಮತದಾರರು ಹಾಗೂ ಕಾರ್ಯಕರ್ತರು. ನಮ್ಮ ಸರ್ಕಾರದ ಉದ್ದೇಶ, ಅಭಿವೃದ್ಧಿ ಕಾರ್ಯಗಳನ್ನು ಮನೆ ಮನೆಗೆ ತಲುಪಿಸಿದ ಪರಿಣಾಮ, ಕಾರ್ಯಕರ್ತರ ಪರಿಶ್ರಮದಿಂದಾಗಿ ಈ ಗೆಲುವು ಸಿಕ್ಕಿದೆ ಎಂದರು.

ಕೆಆರ್‌ಪೇಟೆಯಲ್ಲಿ ಜನ ನಮಗೆ ಆರ್ಶೀವಾದ ಮಾಡಿದ್ದಾರೆ. ಮಂಡ್ಯದಲ್ಲಿ ಹಿಂದುಳಿದ ಕ್ಷೇತ್ರವಾಗಿರುವ ಕೆಆರ್‌ಪೇಟೆಯಲ್ಲಿ ಎಷ್ಟೋ ಅಭಿವೃದ್ಧಿ ಕಾರ್ಯಗಳು ಬಾಕಿ ಉಳಿದಿವೆ. ಮಂಡ್ಯದಲ್ಲಿ ಪಾಂಡವಪುರ ಶುಗರ್ ಫ್ಯಾಕ್ಟರಿ ಸೇರಿ ಹಲವು ಬಾಕಿ ಉಳಿದಿವೆ. ಮೊದಲು 150 ಕೋಟಿ ಬಿಡುಗಡೆ ಮಾಡಿದ್ದೆವು. ಪ್ರಣಾಳಿಕೆ ಕೂಡ ಬಿಡುಗಡೆ ಮಾಡಿದ್ದೆವು. ಯಡಿಯೂರಪ್ಪನವರಿಗೆ ಜನ್ಮ ಕೊಟ್ಟಿರುವ ಬೂಕನಕೆರೆ ಈ ಕ್ಷೇತ್ರದಲ್ಲಿದ್ದು, ಜನ ಅವರನ್ನ ಕೈ ಬಿಟ್ಟಿಲ್ಲ. ಮುಂದಿನ ದಿನಗಳಲ್ಲಿ ಕೆಆರ್‌ಪೇಟೆ ಅಭಿವೃದ್ಧಿಯತ್ತ ಸಾಗುತ್ತದೆ ಎಂದರು.

ABOUT THE AUTHOR

...view details