ಕರ್ನಾಟಕ

karnataka

ETV Bharat / state

ಅಕ್ರಮವಾಗಿ ರಸಗೊಬ್ಬರ - ಬೀಜ ಮಾರಿದರೆ ಕಾನೂನು ಕ್ರಮ : ಸಚಿವ ಬಿ.ಸಿ. ಪಾಟೀಲ ಎಚ್ಚರಿಕೆ

ಅಕ್ರಮವಾಗಿ ರಸಗೊಬ್ಬರ ಮತ್ತು ಬೀಜ ಮಾರಾಟ ಹಾಗೂ ದಾಸ್ತಾನು ಹಿನ್ನೆಲೆ ಇಂದು ಜಾರಿ ದಳದ ಸಹಾಯಕ ಕೃಷಿ ನಿರ್ದೇಶಕರುಗಳಾದ ರೇಷ್ಮಾ ಸುತಾರ್ ಹಾಗೂ ಅಮಗೊಂಡ ಬಿರಾದಾರ ಅವರು ವಿಜಯಪುರ ನಗರದ ಶ್ಯಾಪೇಟೆ ಗಲ್ಲಿಯಲ್ಲಿರುವ ವೀರಭದ್ರೇಶ್ವರ ಟ್ರೇಡರ್ಸ್ ಮಾರಾಟ ಮಳಿಗೆ ಮೇಲೆ ದಾಳಿ ನಡೆಸಿದ್ದು, ಪರವಾನಿಗೆ ಇಲ್ಲದೆ ರಸಗೊಬ್ಬರ ಮಾರಾಟ ಮಾಡುತ್ತಿರುವುದರ ಬಗ್ಗೆ ಗಮನಕ್ಕೆ ಬಂದಿದೆ ಎಂದು ಕೃಷಿ ಸಚಿವ ಬಿ ಸಿ ಪಾಟೀಲ್ ಟ್ವೀಟ್ ಮಾಡಿದ್ದಾರೆ.

b-c  patil
ಸಚಿವ ಬಿ ಸಿ ಪಾಟೀಲ್

By

Published : Jun 3, 2021, 3:27 PM IST

ಬೆಂಗಳೂರು: ಮುಂಗಾರು ಹಂಗಾಮಿನ ಬಿತ್ತನೆ ಕಾರ್ಯಗಳು ಪ್ರಾರಂಭವಾಗಿರುವ ಹಿನ್ನೆಲೆ ಅಕ್ರಮವಾಗಿ ರಸಗೊಬ್ಬರ ಮತ್ತು ಬೀಜ ಮಾರಾಟ ಮಾಡುವವರ ಬಗ್ಗೆ ನಿಗಾ ವಹಿಸಲಾಗುತ್ತಿದ್ದು, ಅಂತವರ ವಿರುದ್ಧ ಕಾನೂನಿನ ಅನ್ವಯ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ ಎಚ್ಚರಿಕೆ ನೀಡಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, ಅಕ್ರಮವಾಗಿ ರಸಗೊಬ್ಬರ ಮತ್ತು ಬೀಜ ಮಾರಾಟ ಹಾಗೂ ದಾಸ್ತಾನು ಹಿನ್ನೆಲೆ ಇಂದು ಜಾರಿ ದಳದ ಸಹಾಯಕ ಕೃಷಿ ನಿರ್ದೇಶಕರುಗಳಾದ ರೇಷ್ಮಾ ಸುತಾರ್ ಹಾಗೂ ಅಮಗೊಂಡ ಬಿರಾದಾರ ಅವರು ವಿಜಯಪುರ ನಗರದ ಶ್ಯಾಪೇಟೆ ಗಲ್ಲಿಯಲ್ಲಿರುವ ವೀರಭದ್ರೇಶ್ವರ ಟ್ರೇಡರ್ಸ್ ಮಾರಾಟ ಮಳಿಗೆ ಮೇಲೆ ದಾಳಿ ನಡೆಸಿದ್ದು, ಪರವಾನಿಗೆ ಇಲ್ಲದೆ ರಸಗೊಬ್ಬರ ಮಾರಾಟ ಮಾಡುತ್ತಿರುವುದರ ಬಗ್ಗೆ ಗಮನಕ್ಕೆ ಬಂದಿದೆ ಎಂದು ಹೇಳಿದ್ದಾರೆ.

ಈ ಮಳಿಗೆಯಲ್ಲಿ ವಿವಿಧ ರಸಗೊಬ್ಬರಗಳನ್ನು ಒಳಗೊಂಡಂತೆ ಅಂದಾಜು ರೂ. 1.29 ಲಕ್ಷದ ರಸಗೊಬ್ಬರವನ್ನು ಜಪ್ತಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಓದಿ:ವೃದ್ಧಾಪ್ಯದಲ್ಲಿಯೂ ಬತ್ತದ ಆರೋಗ್ಯ ಕಾಳಜಿ: ಯುವಕರೂ ನಾಚುವಂತಿದೆ 'ಅಜ್ಜಿಯ ಯೋಗಾಸನ'

ABOUT THE AUTHOR

...view details