ಬೆಂಗಳೂರು :ದಿನೇಶ್ ಗುಂಡೂರಾವ್‌ರಂತಹ ಅಧ್ಯಕ್ಷರು ಇರುವ ತನಕ ಕಾಂಗ್ರೆಸ್ ಉದ್ಧಾರ ಆಗಲ್ಲ. ಅದರ ಪರಿಸ್ಥಿತಿ ಹೀಗೆ ಇರುತ್ತದೆ ಎಂದು ಅನರ್ಹ ಶಾಸಕ ಬಿ ಸಿ ಪಾಟೀಲ್, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಅವರು, ದಿನೇಶ್ ಗುಂಡೂರಾವ್ ಸರಿ ಇದ್ದಿದ್ದರೆ ನಾವು ಪಕ್ಷ ಬಿಟ್ಟು ಆಚೆ ಬರುವ ಪ್ರಮೇಯವೇ ಬರುತ್ತಿರಲಿಲ್ಲ ಎಂದು ಕಿಡಿ ಕಾರಿದ್ದಾರೆ.ಗುಂಡೂರಾವ್ ಅಧ್ಯಕ್ಷರಾಗಿ ಅಧಿಕಾರ ಪಡೆಯುವ ಮುನ್ನ 9 ಸಂಸದರಿದ್ದರು. ಈಗ ಒಬ್ಬರು ಸಂಸದರಿದ್ದಾರೆ. ಮೈತ್ರಿ ಸರ್ಕಾರವೂ ಪತನವಾಯಿತು. ದಿನೇಶ್ ಗುಂಡೂರಾವ್ ನೆಟ್ಟಗೆ ಇದ್ದಿದ್ರೇ ಸಮ್ಮಿಶ್ರ ಸರ್ಕಾರ ಸರಿ ಇರುತ್ತಿತ್ತು. ಎಸ್ ಟಿ ಸೋಮಶೇಖರ್ ಹೇಳಿಕೆ ಸರಿ ಇದೆ. ಅಧ್ಯಕ್ಷರಾದವರು ಒಂದು ಸೈಡ್ ಇರಬಾರದು. ಒಬ್ಬರಿಗೊಂದು ರೀತಿ, ಇನ್ನೊಬ್ಬರಿಗೆ ಇನ್ನೊಂದು ರೀತಿ ಮಾಡಬಾರದು. ಹೇಳಿದಂತೆ ನಡೆದುಕೊಳ್ಳಬೇಕು ಎಂದು ವಾಗ್ದಾಳಿ ನಡೆಸಿದರು.