ಕರ್ನಾಟಕ

karnataka

ETV Bharat / state

ಹೆಚ್​​ಡಿಕೆ, ಮಾಜಿ ಸ್ಪೀಕರ್​​ ವಿರುದ್ಧ ಅನರ್ಹ ಶಾಸಕ ಬಿ.ಸಿ ಪಾಟೀಲ್ ಆಕ್ರೋಶ​ - ಶಾಸಕ ಸ್ಥಾನಕ್ಕೆ ರಾಜೀನಾಮೆ

ಮೈತ್ರಿ ಸರ್ಕಾರ ಬೀಳಿಸುವಲ್ಲಿ ಒಬ್ಬರಾಗಿರುವ ಅನರ್ಹ ಶಾಸಕ ಬಿಸಿ ಪಾಟೀಲ್​, ಜೆಡಿಎಸ್​​-ಕಾಂಗ್ರೆಸ್​ ಮೈತ್ರಿ ಸರ್ಕಾರ ಹಾಗೂ ಮಾಜಿ ಸ್ಪೀಕರ್​ ರಮೇಶ್ ಕುಮಾರ್ ಸೇರಿ ಮಾಜಿ ಸಿಎಂ ಕುಮಾರಸ್ವಾಮಿ ಮೇಲೆ ಕೆಂಡಕಾರಿದ್ದಾರೆ.

ಅನರ್ಹ ಶಾಕಸ ಬಿ.ಸಿ.ಪಾಟೀಲ್​​

By

Published : Sep 6, 2019, 2:17 AM IST

ಬೆಂಗಳೂರು:ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಅನರ್ಹಗೊಂಡಿರುವ ಹಿರೇಕೆರೂರು ಶಾಸಕ ಬಿಸಿ ಪಾಟೀಲ್, ಮಾಜಿ ಸಿಎಂ ಹೆಚ್​​.ಡಿ ಕುಮಾರಸ್ವಾಮಿ ಹಾಗೂ ಮಾಜಿ ಸ್ಪೀಕರ್ ರಮೇಶ್ ಕುಮಾರ್ ವಿರುದ್ಧ ತಮ್ಮ ಆಕ್ರೋಶ ಹೊರಹಾಕಿದ್ದಾರೆ.

ಸುಪ್ರೀಂಕೊರ್ಟ್​ ನಮ್ಮ ಪರವಾಗಿ ತೀರ್ಪು ನೀಡುತ್ತೆ ಎಂದು ವಿಶ್ವಾಸ ವ್ಯಕ್ತಪಡಿಸಿರುವ ಅವರು, ಮಾಜಿ ಸ್ಪೀಕರ್ ರಮೇಶ್ ಕುಮಾರ್ ಯಾರದೋ ಮಾತನ್ನ ಕಟ್ಟಿಕೊಂಡು ಏಕಪಕ್ಷೀಯವಾಗಿ ನಡೆದುಕೊಂಡರು. ಸಿದ್ದರಾಮಯ್ಯ ಹಾಗೂ ದೇವೇಗೌಡರ ಮಾತು ಕೇಳಿಕೊಂಡು ನಮ್ಮನ್ನು ಮೊಲೆಗುಂಪು ಮಾಡಿದ್ದರು. ಸಮ್ಮಿಶ್ರ ಸರ್ಕಾರ ಬೀಳೋದಕ್ಕೆ ನಾವು 15 ಜನ ಶಾಸಕರು ಕಾರಣ. ಅದು ಸತ್ಯ ಯಾಕೆಂದರೆ ಹೆಚ್ ಡಿ ಕುಮಾರಸ್ವಾಮಿ ಅವರ ತಾರತಮ್ಯದ ರಾಜಕೀಯ ನಡೆಸಿದ್ದರು ಎಂದು ಕಿಡಿಕಾರಿದ್ದಾರೆ.

ಬಿ.ಸಿ.ಪಾಟೀಲ್​​

ಎಲೆಕ್ಷನ್ ಟೈಮ್​​ನಲ್ಲಿ ಮಂಡ್ಯ ಜಿಲ್ಲೆಗೆ 8,000 ಸಾವಿರ ಕೋಟಿ ಕೊಡ್ತೀನಿ ಅಂತಾರೆ ಕುಮಾರಸ್ವಾಮಿ. ಆದರೆ, ಬೇರೆ ಜಿಲ್ಲೆಗಳು ಕಣ್ಣಿಗೆ ಕಾಣಲಿಲ್ಲ. ಹಾವೇರಿ ಜಿಲ್ಲೆಗೆ ಅನ್ಯಾಯವಾಗಿದೆ. ಡಿಕೆ ಶಿವಕುಮಾರ್ ಬಂಧನದ ಬಗ್ಗೆ ಮೌನ ಮುರಿದ ಬಿಸಿ ಪಾಟೀಲ್, ನ್ಯಾಯಯುತವಾಗಿ ಅವರ ಬಳಿ ದಾಖಲೆ ಇದ್ದರೆ ಅವರು ನಿಜವಾಗಲೂ ಹೊರಗಡೆ ಬರುತ್ತಾರೆ. ಇಲ್ಲವಾದರೆ ಕಾನೂನಿಗೆ ಎಲ್ಲರೂ ತಲೆಬಾಗಲೇಬೇಕು ಎಂದರು.

ಏನೇ ಆದರೂ ಉಪಚುನಾವಣೆಯಲ್ಲಿ ಸ್ಪರ್ಧೆ ಮಾಡೋದು ಪಕ್ಕಾ ಎಂದು ಬಿಸಿ ಪಾಟೀಲ್ ಹೇಳಿದ್ದಾರೆ. ಸುಪ್ರೀಂ ಕೋರ್ಟ್​​​​ನಲ್ಲಿ ನ್ಯಾಯಕ್ಕಾಗಿ ಮೊರೆ ಹೋಗಿದ್ದೇವೆ, ನಮಗೆ ನ್ಯಾಯ ಸಿಗುವ ನಂಬಿಕೆ ಇದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ABOUT THE AUTHOR

...view details