ಬೆಂಗಳೂರು: ಅಖಿಲ ಭಾರತ 85ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಹಿರಿಯ ಪತ್ರಕರ್ತ ಎನ್. ಎಸ್. ಶಂಕರ್ ಬರೆದಿರುವ "ಅಜಾದಿ ಕನ್ಹಯ್ಯ,- ದಲಿತ ದನಿ ಜಿಗ್ನೇಶ" ಕೃತಿಯನ್ನು ರಾಜಕುಮಾರ ಮಡಿವಾಳ ಅವರ ಫೇಸ್ ಬುಕ್ ಪುಸ್ತಕದಂಗಡಿಯ ಅಂಗಳದಲ್ಲಿ ಬಿಡುಗಡೆಯಾಯಿತು.
ಶಂಕರ್ ಎನ್. ಸೊಂಡೂರರ 'ಕನ್ನಯ್ಯ - ಜಿಗ್ನೇಶ್' ಕೃತಿ ಬಿಡುಗಡೆ - ಬೆಂಗಳೂರು ಸುದ್ದಿ
ಅಖಿಲ ಭಾರತ 85ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಹಿರಿಯ ಪತ್ರಕರ್ತ ಎನ್. ಎಸ್. ಶಂಕರ್ ಬರೆದಿರುವ " ಅಜಾದಿ ಕನ್ಹಯ್ಯ,- ದಲಿತ ದನಿ ಜಿಗ್ನೇಶ" ಕೃತಿಯನ್ನು ರಾಜಕುಮಾರ ಮಡಿವಾಳ ಅವರ 'ಫೇಸ್ ಬುಕ್ ಪುಸ್ತಕದಂಗಡಿ'ಯ ಅಂಗಳದಲ್ಲಿ ಬಿಡುಗಡೆಯಾಯಿತು.
azadi-kanhaiya-dalit-dani-jignesh-book
ಇನ್ನು ಈ ಪುಸ್ತಕವನ್ನು ಹಿರಿಯ ಪತ್ರಕರ್ತ ಸನತ್ ಕುಮಾರ್ ಬೆಳಗಲಿ ಬಿಡುಗಡೆ ಮಾಡಿದ್ದರು. ದೇಶದ ಕ್ರಾಂತಿಯ ಯುವ ತಾರೆಗಳಾದ ಕನ್ಹಯ್ಯ ಕುಮಾರ ಮತ್ತು ಜಿಗ್ನೇಶ್ ಮೆವಾನಿ ಸಂಪೂರ್ಣ ಪರಿಚಯದ ಜೊತೆಗೆ, ಇತರೆ ಸಾಮಾಜಿಕ ಹೋರಾಟಗಾರರಿಗೆ ಅಗತ್ಯವಾದ ಮಾಹಿತಿಗಳನ್ನು "ಅಜಾದಿ ಕನ್ಹಯ್ಯ,- ದಲಿತ ದನಿ ಜಿಗ್ನೇಶ" ಪುಸ್ತಕ ಒಳಗೊಂಡಿದೆ.
ಇಂದಿನಿಂದ ಮಾರುಕಟ್ಟೆಯಲ್ಲಿ ಲಭ್ಯವಿದ್ದು, ಪುಸ್ತಕದ ಬೆಲೆಯನ್ನು 50 ರೂಪಾಯಿಗೆ ನಿಗದಿ ಮಾಡಲಾಗಿದೆ.