ಬೆಂಗಳೂರು:ವಿಧಾನಸೌಧದ ಕಚೇರಿಗಳಲ್ಲಿ ಸೋಮವಾರವೇ ದಸರಾ ಹಬ್ಬ ಕಳೆಗಟ್ಟಿತ್ತು. ಆಯುಧ ಪೂಜೆ ಹಿನ್ನೆಲೆ ಸೋಮವಾರ ಶಕ್ತಿಸೌಧದ ಸಚಿವರುಗಳ ಕಚೇರಿಗಳಲ್ಲಿ ವಿಶೇಷ ಪೂಜೆ ನೆರವೇರಿಸಿದರು.
ಶಕ್ತಿಸೌಧದದ ಕಾರಿಡಾರ್ಗಳಲ್ಲಿ ರಂಗೋಲಿಯ ಬಣ್ಣದ ಚಿತ್ತಾರದೊಂದಿಗೆ ವಿಶೇಷ ಕಳೆ ಮೂಡಿದೆ. ಸಚಿವರು, ಕ್ಯಾಬಿನೆಟ್ ಹಾಲ್, ಸಿಎಂ ಕಚೇರಿ, ಅಧಿಕಾರಿಗಳ ಕಚೇರಿಗಳಿಗೆ ಆಯುಧ ಪೂಜೆ ಪ್ರಯುಕ್ತ ಹೂವಿನ ಅಲಂಕಾರ ಮಾಡಲಾಗಿದೆ. ವಿಧಾನಸೌಧ ಹಾಗೂ ವಿಕಾಸಸೌಧದ ಕಚೇರಿಗಳನ್ನು ಸ್ವಚ್ಛಗೊಳಿಸಿ, ರಂಗೋಲಿ ಹಾಕಿ, ಹೂವಿನ ಅಲಂಕಾರ ಮಾಡಿ ಪೂಜೆ ನೆರವೇರಿಸಲಾಯಿತು.