ಕರ್ನಾಟಕ

karnataka

ETV Bharat / state

ಕೆಎಸ್​ಆರ್​ಟಿಸಿ ಬಸ್​ಗಳಿಗೆ ಆಯುಧ ಪೂಜೆ ಮಾಡಿದ ಸಿಬ್ಬಂದಿ - bengalore ayudha pooja news 2020

ತಾಯಿ ಚಾಮುಂಡೇಶ್ವರಿ ಹೇಗೆ ಮಹಿಷಾಸುರನ ವಧೆ ಮಾಡಿದ್ದಳೋ ಹಾಗೆಯೇ ಕೊರೊನಾವನ್ನು ಮೆಟ್ಟಿ ನಿಲ್ಲುವಂತೆ ಮಾಡಲಿ ಎಂದು ‌ಸಾರಿಗೆ ಸಚಿವ ಹಾಗೂ ಡಿಸಿಎಂ ಲಕ್ಷ್ಮಣ್ ಸವದಿ ಪ್ರಾರ್ಥಿಸಿದ್ದಾರೆ.

Ayudha pooja celebration for BMTC and KSRTC at bengalore
ಕೆಎಸ್​ಆರ್​ಟಿಸಿ ವಾಹನಗಳಿಗೆ ಪೂಜೆ ಪುನಸ್ಕಾರ

By

Published : Oct 25, 2020, 12:58 PM IST

ಬೆಂಗಳೂರು:ನಗರದಾದ್ಯಂತ ಆಯುಧ ಪೂಜೆ ಸಂಭ್ರಮ ಮನೆ ಮಾಡಿದ್ದು, ಕೊರೊನಾ ಹಿನ್ನೆಲೆ ಕೆಎಸ್ ಆರ್ ಟಿಸಿ, ಬಿಎಂಟಿಸಿಯಲ್ಲಿ ಚಾಲಕರು ಸರಳವಾಗಿ ಹಬ್ಬವನ್ನ ಆಚರಿಸಿದ್ದಾರೆ.

ಕೆಎಸ್​ಆರ್​ಟಿಸಿ ವಾಹನಗಳಿಗೆ ಪೂಜೆ-ಪುನಸ್ಕಾರ ಮಾಡಲಾಯಿತು

ಪ್ರತಿ ವರ್ಷವು ವಿಜಯದಶಮಿ-ಆಯುಧಪೂಜೆ ದಿನದಂದು ನಿಗಮದ ವಾಹನಗಳು ಮತ್ತು ಯಂತ್ರೋಪಕರಣಗಳನ್ನು ಪೂಜೆ ಮಾಡುವುದು ಸಂಪ್ರದಾಯವಾಗಿದೆ. ಅದರಂತೆ, ಈ ವರ್ಷವೂ ನಿಗಮಗಳ ವಾಹನಗಳಿಗೆ ಪೂಜೆ ಮಾಡುವಂತೆ ಸೂಚಿಸಲಾಗಿತ್ತು. ಇದಕ್ಕಾಗಿ ಪ್ರತಿ ಬಸ್​ಗೆ 100 ರೂ. ಹಾಗೂ ಪ್ರತಿ ವಿಭಾಗೀಯ ಕಾರ್ಯಾಗಾರಕ್ಕೆ 1000 ರೂ. ನೀಡಲಾಗಿತ್ತು. ಈ ಹಿನ್ನೆಲೆ ಇಂದು ಬಸ್​ಗಳನ್ನ ಸ್ವಚ್ಛಗೊಳಿಸಿ ಬಾಳೆಕಂಬ, ಹೂಗಳಿಂದ ಎಲ್ಲ ಬಸ್​ಗಳಿಗೂ ಅಲಂಕಾರ ಮಾಡಿ ವಿಶೇಷ ಪೂಜೆ ಸಲ್ಲಿಸಲಾಯಿತು.

ಕೊರೊನಾ ಮಹಾಮಾರಿ ನಮ್ಮನ್ನೆಲ್ಲ ಹಿಂಸಿಸುತ್ತಿದ್ದು, ಎಲ್ಲರಿಗೂ ತೊಂದರೆ ಕೊಡುತ್ತಿದೆ. ಈ ಕಾರಣಕ್ಕೆ ನಾವೆಲ್ಲರೂ ಸರಳವಾಗಿ ಹಬ್ಬವನ್ನು ಆಚರಿಸುವ ಅನಿರ್ವಾಯತೆ ಇದೆ. ತಾಯಿ ಚಾಮುಂಡೇಶ್ವರಿ ಹೇಗೆ ಮಹಿಷಾಸುರನ ವಧೆ ಮಾಡಿದ್ದಳೋ ಹಾಗೆಯೇ ಕೊರೊನಾವನ್ನು ಮೆಟ್ಟಿ ನಿಲ್ಲುವಂತೆ ಮಾಡಲಿ ಎಂದು ‌ಸಾರಿಗೆ ಸಚಿವ ಹಾಗೂ ಡಿಸಿಎಂ ಲಕ್ಷ್ಮಣ್​ ಸವದಿ ಪ್ರಾರ್ಥಿಸಿದ್ದಾರೆ.

ABOUT THE AUTHOR

...view details