ಕರ್ನಾಟಕ

karnataka

ETV Bharat / state

ವಿಧಾನಸೌಧ, ವಿಕಾಸಸೌಧದಲ್ಲಿ ಆಯುಧ ಪೂಜೆ ಸಂಭ್ರಮ - Ayudha pooja

ನಾಳೆ ನಾಡಿದ್ದು ರಜೆ ಹಿನ್ನೆಲೆ ಇಂದೇ ವಿಧಾನಸೌಧ, ವಿಕಾಸ ಸೌಧದ ಎಲ್ಲಾ ಕಚೇರಿಗಳನ್ನು ಹೂಗಳಿಂದ ಅಲಂಕರಿಸಿ ಪೂಜೆ ಸಲ್ಲಿಸಲಾಗಿದೆ.

Ayudha pooja celebration
ಆಯುಧ ಪೂಜೆ

By

Published : Oct 23, 2020, 4:12 PM IST

ಬೆಂಗಳೂರು:ಇಂದು ಶಕ್ತಿ ಕೇಂದ್ರದಲ್ಲಿ ಆಯುಧ ಪೂಜೆಯ ಸಂಭ್ರಮ‌ ಮನೆ‌ ಮಾಡಿತ್ತು. ವಿಧಾನಸೌಧ, ವಿಕಾಸಸೌಧದ ಎಲ್ಲಾ ಕಚೇರಿಗಳನ್ನು ಹೂಗಳಿಂದ ಅಲಂಕರಿಸಿ ಪೂಜೆ ನೆರವೇರಿಸಲಾಯಿತು.

ವಿಧಾನಸೌಧ, ವಿಕಾಸಸೌಧದಲ್ಲಿ ಆಯುಧ ಪೂಜೆ ಸಂಭ್ರಮ

ನಾಳೆ, ನಾಡಿದ್ದು ರಜೆ ಇರುವ ಹಿನ್ನೆಲೆಯಲ್ಲಿ ಇಂದೇ ಪೂಜಾ ಕಾರ್ಯಕ್ರಮಕ್ಕೆ ನಿರ್ಧರಿಸಿದ್ದು, ಕಚೇರಿಗಳಲ್ಲಿ ಆಯುಧ ಪೂಜೆ ಕಳೆಗಟ್ಟಿತ್ತು.

ಕ್ಯಾಬಿನೆಟ್ ಹಾಲ್, ಸಿಎಂ ಕಚೇರಿ, ಸಚಿವರುಗಳು, ಅಧಿಕಾರಿಗಳ ಕಚೇರಿಗಳಿಗೆ ಹೂವಿನ ಅಲಂಕಾರ, ಬಣ್ಣ ಬಣ್ಣದ ರಂಗೋಲಿ ಹಾಕಿ ಸಿಂಗರಿಸಲಾಗಿತ್ತು. ಆದರೆ, ಕೊರೊನಾ ಕಾರಣ ಹೆಚ್ಚು ಸಂಭ್ರಮವಿಲ್ಲದೆ ಸರಳವಾಗಿ ಪೂಜಾ ಕಾರ್ಯಗಳು ನಡೆದವು.

ಸರ್ಕಾರಿ ವಾಹನಗಳಿಗೂ ಇಂದೇ ಆಯುಧ ಪೂಜೆ ನಡೆಯಿತು. ಮಹಿಳಾ ಸಿಬ್ಬಂದಿ ಸೀರೆ‌ ಧರಿಸಿ ಹಬ್ಬದ ಪೂಜೆಯಲ್ಲಿ ಪಾಲ್ಗೊಂಡರು.

ABOUT THE AUTHOR

...view details