ಕರ್ನಾಟಕ

karnataka

ETV Bharat / state

ವಿಶ್ವ ಮೆದುಳು ಜ್ವರದ ಬಗ್ಗೆ ಜಾಗೃತಿ: ಕೆಂಪು ದೀಪಗಳಿಂದ ಕಂಗೊಳಿಸಿದ ಪ್ರಮುಖ ಕಟ್ಟಡಗಳು - Major Buildings Adorned with Red Lights

ವಿಶ್ವ ಮೆದುಳು ಜ್ವರ ದಿನಾಚರಣೆ ಹಿನ್ನೆಲೆಯಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಆರೋಗ್ಯ ಇಲಾಖೆ ವತಿಯಿಂದ ವಿನೂತನ ಕಾರ್ಯಕ್ರಮ ಆಯೋಜಿಸಲಾಗಿತ್ತು. ನಗರದ ಪ್ರಮುಖ ಕಟ್ಟಡಗಳಲ್ಲಿ ಕೆಂಪು ದೀಪಗಳನ್ನು ಬೆಳಗಿಸಲಾಯಿತು.

ಕೆಂಪು ದೀಪಗಳಿಂದ ಕಂಗೊಳಿಸಿದ ಪ್ರಮುಖ ಕಟ್ಟಡಗಳು
ಕೆಂಪು ದೀಪಗಳಿಂದ ಕಂಗೊಳಿಸಿದ ಪ್ರಮುಖ ಕಟ್ಟಡಗಳು

By

Published : Feb 22, 2021, 10:31 PM IST

Updated : Feb 22, 2021, 10:51 PM IST

ಬೆಂಗಳೂರು:ಇಂದು ವಿಶ್ವ ಮೆದುಳು ಜ್ವರದ ದಿನಾಚರಣೆ ಹಿನ್ನೆಲೆ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ನಗರದ ನಾನಾ ಪ್ರಮುಖ ಕಟ್ಟಡಗಳಲ್ಲಿ ಕೆಂಪು ದೀಪಗಳನ್ನ ಬೆಳಗಿಸಲಾಯಿತು.

ಆರೋಗ್ಯ ಇಲಾಖೆಯಿಂದ ರೆಡ್‌ಲೈಟ್ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ವಿನೂತನ ಕಾರ್ಯಕ್ರಮ ಆಯೋಜಿಸಲಾಗಿದ್ದು, ನಗರದ ಆರೋಗ್ಯ ಸೌಧ, ಬಿಬಿಎಂಪಿ, ನಿಮ್ಹಾನ್ಸ್​ನ 5 ಭಾಗಗಳು ಸೇರಿ ಹಲವೆಡೆ ಸಂಜೆ 6:30 ರಿಂದ ರಾತ್ರಿ10 ಗಂಟೆಯವರೆಗೂ ಕೆಂಪು ದೀಪಗಳಿಂದ ಅಲಂಕಾರ ಮಾಡಲಾಗಿತ್ತು.

ಕೆಂಪು ದೀಪಗಳಿಂದ ಕಂಗೊಳಿಸಿದ ಪ್ರಮುಖ ಕಟ್ಟಡಗಳು

ಇತ್ತ ನಿಮ್ಹಾನ್ಸ್ ಸಭಾಂಗಣದಲ್ಲಿ ವಿಶ್ವ ಮೆದುಳು ಜ್ವರದ ದಿನದ (ಎನ್ಸ್ ಪಲೈಟಿಸ್ ಡೇ) ಅಂಗವಾಗಿ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವರಾದ ಡಾ. ಕೆ. ಸುಧಾಕರ್ ಭಾಗಿಯಾಗಿ ಚಾಲನೆ ನೀಡಿದರು. ಇವರಿಗೆ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಜಾವೇದ್ ಅಖ್ತರ್, ಆರೋಗ್ಯ ಇಲಾಖೆ ಆಯುಕ್ತ ಡಾ. ತ್ರಿಲೋಕ್ ಚಂದ್ರ, ಸರ್ಕಾರದ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಸದಸ್ಯ ಡಾ.ವಿ.ರವಿ, ನಿಮ್ಹಾನ್ಸ್ ನಿರ್ದೇಶಕರಾದ ಡಾ. ಜಿ. ಗುರುರಾಜ್, ಡಾ. ಅನಿತಾ ದೇಸಾಯಿ, ಕುಲಸಚಿವ ಡಾ. ಬಿ.ಎಸ್. ಶಂಕರನಾರಾಯಣ ರಾವ್ ಹಾಜರಿದ್ದರು.

ಓದಿ:ಕೆರೆ ಒತ್ತುವರಿ ಮಾಡಿ ಬಡಾವಣೆ ನಿರ್ಮಾಣಕ್ಕೆ ಯತ್ನ : ಪುನರುಜ್ಜೀನಗೊಳಿಸಲು ಹೈಕೋರ್ಟ್ ತಾಕೀತು

ಚಾಲನೆ ನೀಡಿದ ಬಳಿಕ ಮಾತಾನಾಡಿದ ಸಚಿವ ಸುಧಾಕರ್, ಮೆದುಳು ಜ್ವರದ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ವಿಶೇಷವಾಗಿ ಇಂದು ರೆಡ್ ಲೈಟ್ ಕ್ಯಾಂಪನ್ ಮಾಡಲಾಗುತ್ತಿದೆ. ಸರ್ಕಾರವೂ ನಿಮ್ಮ ಜೊತೆಗೆ ಇದ್ದು, ನಿಮ್ಗೆ ಬೇಕಾದ ಎಲ್ಲ ಸಹಕಾರ ನೀಡಲಾಗುವುದು ಎಂದರು.ಇವತ್ತು ಆರೋಗ್ಯ ಕ್ಷೇತ್ರದಲ್ಲಿ ಸರ್ಕಾರಕ್ಕೆ ಹಲವು ಸವಾಲುಗಳು ಎದುರಾಗಿವೆ. ವಿಶೇಷವಾಗಿ ಕೋವಿಡ್ ಸೋಂಕಿನಿಂದ ಸಾವಿರಾರು ಜನರ ಸಾವಾಗಿರೋದು ಸತ್ಯ, ಎರಡನೇ ಅಲೆ ಬರುವ ಹಿನ್ನೆಲೆ ಸಾಕಷ್ಟು ಜಾಗೃತೆಯಿಂದ ಇರಬೇಕು. ಕರ್ನಾಟಕದಲ್ಲಿ ಕೋವಿಡ್ ನಿಯಂತ್ರಣ ಮಾಡಿದ್ದಿವಿ ಅಂದರೆ ಅದರ ಹಿಂದೆ ಸಾಕಷ್ಟು ಸಂಸ್ಥೆಗಳು ಕಾರಣವಾಗಿವೆ..ಅದರಲ್ಲಿ ನಿಮ್ಹಾನ್ಸ್ ಸಂಸ್ಥೆಯ ಕಾಳಜಿ ಕೆಲಸವೂ ಕಾರಣವಿದೆ ಅಂತ ಪ್ರೋತ್ಸಾಹದ ಮಾತುಗಳನ್ನ ಆಡಿದರು.

Last Updated : Feb 22, 2021, 10:51 PM IST

ABOUT THE AUTHOR

...view details