ಬೆಂಗಳೂರು:ಬದಲಾಗಿರುವ ಸಂಚಾರಿ ನಿಯಮಗಳ ಬಗ್ಗೆ ನಗರ ಉತ್ತರ ವಿಭಾಗದ ಸಂಚಾರ ಪೊಲೀಸರು, ಧಾರ್ಮಿಕ ಕೇಂದ್ರಗಳಿಗೆ ತೆರಳಿ ಟ್ರಾಫಿಕ್ ರೂಲ್ಸ್ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ.
ಧಾರ್ಮಿಕ ಕೇಂದ್ರಗಳಲ್ಲಿ ಟ್ರಾಫಿಕ್ ರೂಲ್ಸ್ ಅರಿವು: ಸಂಚಾರಿ ಪೊಲೀಸರಿಂದ ವಿನೂತನ ಪ್ರಯತ್ನ - ಸಂಚಾರಿ ನಿಯಮ
ನೂತನವಾಗಿ ಜಾರಿಗೆ ತರಲಾಗಿರುವ ಸಂಚಾರಿ ನಿಯಮಗಳನ್ನು ಸಾರ್ವಜನಿಕರಿಗೆ ತಿಳಿಸಲು, ಟ್ರಾಫಿಕ್ ಪೊಲೀಸರು ವಿನೂತನವಾಗಿ ಧಾರ್ಮಿಕ ಕೇಂದ್ರಗಳಲ್ಲಿನ ಗುರುಗಳಿಂದ ಪ್ರಚಾರ ಮಾಡಿಸುತ್ತಿದ್ದಾರೆ.
ಉತ್ತರ ವಿಭಾಗಕ್ಕೆ ಬರುವ ಹೆಬ್ಬಾಳ, ಆರ್.ಟಿ. ನಗರ, ಚಿಕ್ಕಜಾಲ ಸೇರಿದಂತೆ ಏಳು ಟ್ರಾಫಿಕ್ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿರುವ ಮಸೀದಿ, ಚರ್ಚ್ ಹಾಗೂ ದೇವಸ್ಥಾನಗಳಿಗೆ ತೆರಳಿ ಹೊಸ ಟ್ರಾಫಿಕ್ ರೂಲ್ಸ್ ಬಗ್ಗೆ ಸಂಚಾರಿ ಪೊಲೀಸರು ಜಾಗೃತಿ ಮೂಡಿಸುತ್ತಿದ್ದಾರೆ. ಚರ್ಚ್ನಲ್ಲಿ ಫಾದರ್ಗಳಿಂದ, ಮಸೀದಿಯಲ್ಲಿ ಮೌಲ್ವಿಗಳಿಂದ ಹಾಗೂ ದೇವಸ್ಥಾನಗಳಲ್ಲಿ ಅರ್ಚಕರಿಂದ ಭಕ್ತರಿಗೆ ಸಂಚಾರಿ ನಿಯಮಗಳ ಬಗ್ಗೆ ಅರಿವು ಮುಡಿಸುವ ಪ್ರಯತ್ನ ನಡೆಸುತ್ತಿದ್ದಾರೆ.
ಈ ಬಗ್ಗೆ ಸಂಚಾರಿ ವಿಭಾಗದ ಡಿಸಿಪಿ ಸಾರಾ ಫಾತಿಮಾ ಮಾತನಾಡಿ, ಇಂದು ಭಾನುವಾರ ಆಗಿದ್ದರಿಂದ ಚರ್ಚ್ಗಳಿಗೆ ಹೆಚ್ಚಿನ ಜನರು ಆಗಮಿಸುತ್ತಾರೆ. ಈ ವೇಳೆ ಅಲ್ಲಿನ ಚರ್ಚ್ ಫಾದರ್ಗಳಿಂದ ಟ್ರಾಫಿಕ್ ರೂಲ್ಸ್ ಬಗ್ಗೆ ತಿಳಿವಳಿಕೆ ಮೂಡಿಸಿದರೆ ಜನರಿಗೆ ಬೇಗ ವಿಷಯ ತಲುಪುತ್ತದೆ. ಹಾಗೆಯೇ ಮಸೀದಿ ಹಾಗೂ ದೇವಸ್ಥಾನಗಳಲ್ಲಿ ಕೂಡ ಜಾಗೃತಿ ಮೂಡಿಸುತ್ತಿದ್ದೇವೆ ಎಂದರು.