ಬೆಂಗಳೂರು: ಕರೋನ ಮಹಾಮಾರಿ ಬಗ್ಗೆ ವಿಧಾನಸೌಧದಲ್ಲಿ ಇಂದು ಮಾಜಿ ಆರೋಗ್ಯ ಸಚಿವ ಯುಟಿ ಖಾದರ್ ಜಾಗೃತಿಯ ಬಗ್ಗೆ ಮಾತನಾಡಿದರು.
ಕರೋನಾ ವೈರಸ್ ಕುರಿತು ಜಾಗೃತಿ ಅತ್ಯಗತ್ಯ: ಯುಟಿ ಖಾದರ್ ಪ್ರತಿಪಾದನೆ
ಕೊರೋನಾ ವೈರಸ್ ಬಗ್ಗೆ ಇಂದು ಜನಜಾಗೃತಿ ಅತ್ಯಗತ್ಯ. ಸೋಂಕಿತರನ್ನ ಪತ್ತೆ ಹಚ್ಚಿ ಐಸೋಲೇಟೆಡ್ ವಾರ್ಡ್ನಲ್ಲಿ ಟ್ರೀಟ್ಮೆಂಟ್ ಕೊಡಬೇಕು ಎಂದು ಮಾಜಿ ಆರೋಗ್ಯ ಸಚಿವ ಯುಟಿ ಖಾದರ್ ಸಲಹೆ ನೀಡಿದರು.
awareness-of-the-corona-virus-is-essential-says-u-t-khadar
ಕೊರೋನಾ ವೈರಸ್ ಸೋಂಕು ಕಂಡು ಬಂದಿದೆ. ಈ ಬಗ್ಗೆ ಇಂದು ಜನಜಾಗೃತಿ ಅತ್ಯಗತ್ಯ. ಸರ್ಕಾರ ಜನರಲ್ಲಿ ಜಾಗೃತಿ ಮೂಡಿಸಬೇಕು. ಸಂಘಟನೆಗಳು ಕೂಡ ಈ ನಿಟ್ಟಿನಲ್ಲಿ ಕೆಲಸ ಮಾಡಬೇಕು. ಸ್ವಚ್ಛತೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದರು.
ಅಂಗನವಾಡಿ ಶಿಕ್ಷಕರು, ಶಾಲಾ ಶಿಕ್ಷಕರಿಂದಲೂ ಜಾಗೃತಿ ಮೂಡಿಸಬೇಕು. ಕೇವಲ ಶಾಲೆಗೆ ರಜೆ ಕೊಟ್ಟ ತಕ್ಷಣ ನಿಯಂತ್ರದ ಸಾಧ್ಯವಿಲ್ಲ. ಸೋಂಕಿತರನ್ನ ಪತ್ತೆ ಹಚ್ಚಿ ಐಸೋಲೇಟೆಡ್ ವಾರ್ಡ್ನಲ್ಲಿ ಟ್ರೀಟ್ಮೆಂಟ್ ಕೊಡಬೇಕು. ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲೂ ಜಾಗೃತಿ ಮೂಡಿಸಬೇಕು ಎಂದು ಸಲಹೆ ನೀಡಿದರು.