ಕರ್ನಾಟಕ

karnataka

ETV Bharat / state

ಕೊರೊನಾ ವೈರಸ್ ಆತಂಕ ನಿವಾರಿಸಲು ಆರೋಗ್ಯ ಇಲಾಖೆ ಜೊತೆ ಕೈ ಜೋಡಿಸಿದ ನಮ್ಮ ಮೆಟ್ರೋ! - ನಮ್ಮ ಮೆಟ್ರೋ

ದೇಶದೆಲ್ಲೆಡೆ ಜನರಲ್ಲಿ ಕೊರೊನಾ ವೈರಸ್ ಕುರಿತು ಆತಂಕ ಮನೆ ಮಾಡಿದ್ದು, ನಮ್ಮ ಮೆಟ್ರೋ ಸ್ಟೇಷನ್​ಗಳ ನಾಮಫಲಕಗಳಲ್ಲಿ ಜಾಗೃತಿ ಸಂದೇಶಗಳನ್ನ ಹಾಕಲಾಗಿದೆ.

corona virus
ಕರೋನಾ ವೈರಸ್ ಆತಂಕ ನಿವಾರಿಸಲು ಆರೋಗ್ಯ ಇಲಾಖೆ ಜೊತೆ ಕೈ ಜೋಡಿಸಿದ ನಮ್ಮ ಮೆಟ್ರೋ

By

Published : Feb 7, 2020, 6:26 AM IST

ಬೆಂಗಳೂರು:ರಾಜ್ಯದಲ್ಲಿ ದಿನೆ ದಿನೇ ಜನರಲ್ಲಿ ಕೊರೊನಾ ವೈರಸ್ ಆತಂಕ ಮನೆ ಮಾಡ್ತಿದೆ. ಭಯದಿಂದಲೇ ಜನರು ಸಾರ್ವಜನಿಕ ಸ್ಥಳಗಳಲ್ಲಿ ಓಡಾಡುತ್ತಿದ್ದಾರೆ. ಇನ್ನು ಜನರ ಆತಂಕ ನಿವಾರಿಸಲು ಹರಸಾಹಸ ಪಡುತ್ತಿರುವ ಆರೋಗ್ಯ ಇಲಾಖೆ ಜೊತೆ ನಮ್ಮ ಮೆಟ್ರೋ ಕೈ ಜೋಡಿಸಿದೆ.

ಕೊರೊನಾ ವೈರಸ್ ಆತಂಕ ನಿವಾರಿಸಲು ಆರೋಗ್ಯ ಇಲಾಖೆ ಜೊತೆ ಕೈ ಜೋಡಿಸಿದ ನಮ್ಮ ಮೆಟ್ರೋ

ಹೌದು ನಮ್ಮ ಮೆಟ್ರೋ ಪ್ರಯಾಣಿಕರಲ್ಲಿ ಕೊರೊನಾ ವೈರಸ್ ಬಗ್ಗೆ ಆತಂಕ ಬೇಡ ಜಾಗೃತರಾಗಿರುವಂತೆ ಸಂದೇಶ ‌ರವಾನಿಸಿದೆ. ಹೌದು ನಿತ್ಯ ಲಕ್ಷಾಂತರ ಜನ ಮೆಟ್ರೋದಲ್ಲಿ ಪ್ರಯಾಣಿಸಲಿದ್ದು, ಜನರ ಆತಂಕ ದೂರ ಮಾಡಲು ಆರೋಗ್ಯ ಇಲಾಖೆಗೆ ನಮ್ಮ ಮೆಟ್ರೋ ಕೈ ಜೋಡಿಸಿದೆ. ಮೆಟ್ರೋ ಸ್ಟೇಷನ್​ಗಳಲ್ಲಿರುವ ನಾಮಫಲಕಗಳಲ್ಲಿ ಕೊರೊನಾ ವೈರಸ್ ಬಗ್ಗೆ ಜಾಗೃತಿ ಮೂಡಿಸುವ ಸಂದೇಶಗಳನ್ನ ಹಾಕಲಾಗುತ್ತಿದೆ.

ಕೊರೊನಾ ವೈರಸ್ ಸೋಂಕು ಕುರಿತು ಎಚ್ಚರವಿರಲಿ, ಭಯಬೇಡ ಎಂಬ ಸಂದೇಶ ರವಾನಿಸಲಾಗುತ್ತಿದ್ದು, ಹೆಚ್ಚಿನ‌ ಮಾಹಿತಿಗಾಗಿ ಆರೋಗ್ಯ ಇಲಾಖೆಯ ಸಹಾಯವಾಣಿ 104 ಗೆ ಕರೆ ಮಾಡುವಂತೆ ಪ್ರಯಾಣಿಕರಿಗೆ ತಿಳುವಳಿಕೆ ನೀಡಿದೆ.

ABOUT THE AUTHOR

...view details