ಕರ್ನಾಟಕ

karnataka

ETV Bharat / state

ಇಂಧನ ಕ್ಷಮತಾ ಮಹೋತ್ಸವ: ಅತ್ಯುತ್ತಮ ಸಾಧನೆ ಮಾಡಿದ ಸಾರಿಗೆ ನಿಗಮಕ್ಕೆ ಪ್ರಶಸ್ತಿ - ಇಂಧನ ಕ್ಷಮತಾ ಮಹೋತ್ಸವ ಕಾರ್ಯಕ್ರಮದಲ್ಲಿ ಕರ್ನಾಟಕದ ನಾಲ್ಕು ನಿಗಮಗಳಿಗೆ ಪ್ರಶಸ್ತಿ

ಸಾರಿಗೆ ನಿಗಮಗಳಲ್ಲಿ ಸುಮಾರು 75%ಕ್ಕೂ ಅಧಿಕ ಘಟಕಗಳು ಪ್ರಶಸ್ತಿಗಳಿಗೆ ಅರ್ಹವಾಗಿವೆ. ಮುಂದಿನ ದಿನಗಳಲ್ಲಿ ಪ್ರಶಸ್ತಿಗಳ ಸಂಖ್ಯೆಯನ್ನು ಅಧಿಕ ಮಾಡಿ ಮತ್ತಷ್ಟು ಘಟಕಗಳು ಸಹ ಪ್ರಶಸ್ತಿ ಪಡೆಯುವಂತೆ ಮಾಡಿದರೆ ಇತರೆ ಚಾಲಕ/ತಾಂತ್ರಿಕ ಸಿಬ್ಬಂದಿ ಪ್ರೋತ್ಸಾಹಿಸಿದಂತಾಗುತ್ತದೆಂದು ಕೆಎಸ್​​ಆರ್​ಟಿಸಿಯ ಎಂ‌.ಡಿ ವಿ.ಅನ್ಬುಕುಮಾರ್ ಹೇಳಿದ್ದಾರೆ.

ಅತ್ಯುತ್ತಮ ಸಾಧನೆ ಮಾಡಿದ ಸಾರಿಗೆ ನಿಗಮಕ್ಕೆ ಪ್ರಶಸ್ತಿ
ಅತ್ಯುತ್ತಮ ಸಾಧನೆ ಮಾಡಿದ ಸಾರಿಗೆ ನಿಗಮಕ್ಕೆ ಪ್ರಶಸ್ತಿ

By

Published : Apr 21, 2022, 9:45 PM IST

ಬೆಂಗಳೂರು: ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದಡಿಯಲ್ಲಿ ಕರ್ತವ್ಯ ನಿರ್ವಹಿಸುವ ಸಂಸ್ಥೆಯಾದ, ಪೆಟ್ರೋಲಿಯಂ ಸಂರಕ್ಷಣಾ ಸಂಶೋಧನಾ ಸಂಸ್ಥೆಯು (PCRA) ಪ್ರತಿವರ್ಷ ದೇಶದಾದ್ಯಂತ ಸಾರ್ವಜನಿಕ ವಲಯದ ಸಂಸ್ಥೆಗಳಲ್ಲಿ ಇಂಧನ ಕ್ಷಮತಾ ಮಹೋತ್ಸವ ಕಾರ್ಯಕ್ರಮವನ್ನು ಏರ್ಪಡಿಸುತ್ತದೆ. ಕೆಎಂಪಿಎಲ್‍ನಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಘಟಕಗಳಿಗೆ PCRA ವತಿಯಿಂದ ತಲಾ ರೂ.75,000/-ನಗದು ಬಹುಮಾನ ಮತ್ತು ಪ್ರಶಸ್ತಿ ಪ್ರದಾನ ಮಾಡಲಾಗಿದೆ.

ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಕೆಎಸ್​​ಆರ್​ಟಿಸಿಯ ಎಂ‌ಡಿ ವಿ.ಅನ್ಬುಕುಮಾರ್ ಕರ್ನಾಟಕ ರಾಜ್ಯದ ನಾಲ್ಕು ರಸ್ತೆ ಸಾರಿಗೆ ಸಂಸ್ಥೆಗಳ 12 ಘಟಕಗಳು PCRA ಇಂಧನ ಕಾರ್ಯಕ್ಷಮತೆಗಾಗಿ ಅತ್ಯುತ್ತಮ ಘಟಕಗಳಾಗಿ ಹೊರಹೊಮ್ಮಿ, ದೇಶದ ರಸ್ತೆ ಸಾರಿಗೆ ನಿಗಮಗಳಲ್ಲಿಯೇ ಅತಿ ಹೆಚ್ಚಿನ ಸ್ಥಾನಗಳನ್ನು ಪಡೆದಿರುವುದು ಹೆಮ್ಮೆಯ ವಿಷಯ. ಈ ಮೂಲಕ ಸಮಸ್ತ ಚಾಲಕ/ನಿರ್ವಾಹಕ ಮತ್ತು ತಾಂತ್ರಿಕ ಸಿಬ್ಬಂದಿ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಅಭನಂದನೆ ಸಲ್ಲಿಸುತ್ತೇನೆ ಎಂದರು.

ಸಾರಿಗೆ ನಿಗಮಗಳಲ್ಲಿ ಸುಮಾರು 75% ಕ್ಕೂ ಅಧಿಕ ಘಟಕಗಳು ಪ್ರಶಸ್ತಿಗಳಿಗೆ ಅರ್ಹವಾಗಿವೆ. ಮುಂದಿನ ದಿನಗಳಲ್ಲಿ ಪ್ರಶಸ್ತಿಗಳ ಸಂಖ್ಯೆಯನ್ನು ಅಧಿಕ ಮಾಡಿ ಮತ್ತಷ್ಟು ಘಟಕಗಳು ಸಹ ಪ್ರಶಸ್ತಿ ಪಡೆಯುವಂತೆ ಮಾಡಿದರೆ ಇತರೆ ಚಾಲಕ/ತಾಂತ್ರಿಕ ಸಿಬ್ಬಂದಿ ಪ್ರೋತ್ಸಾಹಿಸಿದಂತಾಗುತ್ತದೆಂದು ತಿಳಿಸಿದರು.

ಇದನ್ನೂ ಓದಿ: ರಾಜ್ಯದ ಮೂರೂ ರಾಜಕೀಯ ಪಕ್ಷಗಳ 'ಕ್ಲೀನ್ ಇಮೇಜ್' ನಾಯಕರಿಗೆ ಆಮ್ ಆದ್ಮಿ ಗಾಳ?

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ:

1) ಮಂಗಳೂರು ವಿಭಾಗ ಘಟಕ-2

2) ಮೈಸೂರು ವಿಭಾಗ ,ಬನ್ನಿಮಂಟಪ ಘಟಕ

3) ಬೆಂಗಳೂರು ಕೇಂದ್ರೀಯ ವಿಭಾಗ ಘಟಕ-2

ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ:

1) ಹುಬ್ಬಳಿ ಗ್ರಾಮಾಂತರ ಘಟಕ

2) ಬೀಳಗಿ ಘಟಕ

3) ಚಿಕ್ಕೋಡಿ ಘಟಕ

ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ:

1) ಕಲಬುರ್ಗಿ ಘಟಕ

2) ಕುರಗೂಡು ಘಟಕ

3) ವಿಜಯಪುರ ಘಟಕ

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ:

1)ಬೈರತಿ (ಡಿಪೋ-48)

2) ಕೆಂಗೇರಿ - 2 (ಡಿಪೋ-37)

3) ಕಲ್ಯಾಣನಗರ (ಡಿಪೋ-23)

For All Latest Updates

TAGGED:

ABOUT THE AUTHOR

...view details