ಕರ್ನಾಟಕ

karnataka

ETV Bharat / state

ಪೊಲೀಸ್​ ಅಧಿಕಾರಿಗಳು ಜನಸಾಮಾನ್ಯರಿಗೆ ಕೊಡುತ್ತಿರುವ ಕಿರುಕುಳ ತಪ್ಪಿಸಿ: ಜೆಡಿಎಸ್ ಮುಖಂಡ ಟಿ.ಎ. ಶರವಣ - bangalore latest corona update

ಬಿ.ಎಸ್. ಯಡಿಯೂರಪ್ಪಗೆ ಬಹಿರಂಗ ಪತ್ರ ಬರೆದಿರುವ ಜೆಡಿಎಸ್ ಮುಖಂಡ ಟಿ.ಎ. ಶರವಣ , ಕೊರೊನಾ ಹೋಗೋಲ್ಲಾ. ಬಡ ಜನರಿಗೆ ಬೇಕಾದ ಆಸ್ಪತ್ರೆಯಲ್ಲಿ ಬೆಡ್, ಐಸಿಯು, ವೆಂಟಿಲೇಟರ್ ಮುಂತಾದ ಅಗತ್ಯ ಸೇವೆಗಳನ್ನು ನೀಡಿ ಎಂದು ಮನವಿ ಮಾಡಿದ್ದಾರೆ.

sharavana
sharavana

By

Published : Apr 23, 2021, 2:56 PM IST

ಬೆಂಗಳೂರು: ಕೊರೊನಾ ಹತೋಟಿಗೆ ತರಲು ಸರ್ಕಾರ ವಿಫಲವಾದ ನಂತರ ಜನರ ಮೇಲೆ ಲಾಠಿ ಪ್ರಹಾರ ಮಾಡಿ ವಿನಾಃ ಕಾರಣ ಗಲಾಟೆ ಮಾಡಿ, ಪೊಲೀಸ್​ರು ಜನಸಾಮಾನ್ಯರಿಗೆ ಕೊಡುತ್ತಿರವ ಕಿರುಕುಳ ಅಷ್ಟಿಷ್ಟಲ್ಲ ಎಂದು ಮಾಜಿ ವಿಧಾನಪರಿಷತ್ ಸದಸ್ಯ, ಜೆಡಿಎಸ್ ಮುಖಂಡ ಟಿ.ಎ. ಶರವಣ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪಗೆ ಬಹಿರಂಗ ಪತ್ರ ಬರೆದಿರುವ ಅವರು, ಕೊರೊನಾ ಹೋಗೋಲ್ಲಾ. ಬಡಜನರಿಗೆ ಬೇಕಾದ ಆಸ್ಪತ್ರೆಯಲ್ಲಿ ಬೆಡ್, ಐಸಿಯು, ವೆಂಟಿಲೇಟರ್, ಆಕ್ಸಿಜನ್, ಆ್ಯಂಬುಲೆನ್ಸ್​​, ಚಿತಾಗಾರ, ಸ್ಮಶಾನ, ರೆಮ್ಡೆಸಿವಿರ್ ಇಂಜೆಕ್ಷನ್, ವ್ಯಾಕ್ಸಿನ್ ಇವುಗಳನ್ನು ಸರಿಯಾದ ಸಮಯದಲ್ಲಿ ಒದಗಿಸದೇ ಬೀದಿ ಬೀದಿಯಲ್ಲಿ ಜನರಿಗೆ ಲಾಠಿ ಪ್ರಹಾರ ಸರಿಯಲ್ಲ ಎಂದು ಬರೆದಿದ್ದಾರೆ.

ಸರ್ಕಾರದಿಂದ ಮಾಸ್ಕ್ ಉಚಿತವಾಗಿ ನೀಡಿ. ಕೂಡಲೇ ಜನರ ಪ್ರಾಣ ಉಳಿಸಲು ಪ್ರಾಮಾಣಿಕ ಪ್ರಯತ್ನ ಮಾಡಿ ಎಂದು ಆಗ್ರಹಿಸಿದ್ದಾರೆ .

ABOUT THE AUTHOR

...view details