ಬೆಂಗಳೂರು :ಕೋವಿಡ್-19 ಭೀತಿಯಿಂದ ಪ್ರಯಾಣಕ್ಕೆ ಸ್ವಂತ ದ್ವಿಚಕ್ರ ವಾಹನ ಅಥವಾ ಕಾರುಗಳ ಆಯ್ಕೆ ಹಿನ್ನೆಲೆ ಆಟೋಮೊಬೈಲ್ ಬಿಡಿ ಉತ್ಪನ್ನಗಳ (ಸ್ಪೇರ್ ಪಾರ್ಟ್ಸ್) ಮಾರಾಟ ಹೆಚ್ಚಾಗಿದೆ ಎಂದು ಪೀಣ್ಯ ಕೈಗಾರಿಕಾ ವಲಯದ ಉದ್ಯಮಿಗಳು ಈಟಿವಿ ಭಾರತಕ್ಕೆ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ...ಅಬ್ಬಾ!.. ಭಾರತದಲ್ಲಿ ಹಬ್ಬದ ತಿಂಗಳಲ್ಲಿ 61,253 ಕೋಟಿ ರೂ.ಆನ್ಲೈನ್ ವಹಿವಾಟು!!!
ಈ ಕುರಿತು ಮಾತನಾಡಿದ ಪೀಣ್ಯ ಕೈಗಾರಿಕಾ ಸಂಘದ ಕಾರ್ಯದರ್ಶಿ ವಿಜಯ್ ಕುಮಾರ್, ಅಗತ್ಯ ಸೇವೆಗಳಲ್ಲಿ ಏಳಿಗೆ ಕಂಡಿದ್ದಲ್ಲದೆ ಆಟೋಮೊಬೈಲ್ ವಲಯದಲ್ಲೂ ಏರಿಕೆ ಕಂಡಿದೆ. ಸಾರ್ವಜನಿಕ ಸೇವೆಗಳಾದ ಮೆಟ್ರೋ, ಬಿಎಂಟಿಸಿ ಹಾಗೂ ಕೆಎಸ್ಆರ್ಟಿಸಿ ಸೇವೆಗಳ ಬಳಕೆ ಕಡಿಮೆಯಾಗಿದೆ. ಈ ಹಿನ್ನೆಲೆ ಸ್ವಂತ ಗಾಡಿಗಳ ಬಳಕೆ ಪ್ರಮಾಣ ಅಧಿಕವಾಗಿದ್ದು, ವಾಹನಗಳ ಬಿಡಿ ಭಾಗಗಳ ಉತ್ಪನ್ನ ಹಾಗೂ ಮಾರಾಟ ಹೆಚ್ಚಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.