ಬೆಂಗಳೂರು:ನಗರದಲ್ಲಿ ಆಟೋ ಓಡಿಸಿ ಜೀವನ ಮಾಡುವವರ ಸಂಖ್ಯೆ ಸಾಕಷ್ಟಿದೆ. ಅಂತಹ ಆಟೋ ಚಾಲಕರು ಮತ್ತು ಮಾಲಕರು ಇನ್ಮುಂದೆ ಸ್ವಲ್ಪ ಎಚ್ಚೆತ್ತುಕೊಂಡಿರಬೇಕು. ಯಾಕಂದ್ರೆ, ಮನೆ ಮುಂದಿನ ಪ್ರದೇಶದಲ್ಲಿ ರಾತ್ರಿ ಆಟೋ ಪಾರ್ಕ್ ಮಾಡಿದ್ರೆ ಬೆಳಗ್ಗೆ ಅವುಗಳ ಚಕ್ರಗಳೇ ಇರೋಲ್ಲ. ನಗರದಲ್ಲಿ ವೀಲ್ ಕಳ್ಳರ ಹಾವಳಿ ಮತ್ತೆ ಶುರುವಾಗಿದೆ.
ಬೆಂಗಳೂರಿಗೆ ವೀಲ್ ಕಳ್ಳರ ಗ್ಯಾಂಗ್ ಎಂಟ್ರಿ: 10ಕ್ಕೂ ಹೆಚ್ಚು ಆಟೋ ಚಕ್ರಗಳು ಗಾಯಬ್ - ಬೆಂಗಳೂರು ನಗರದಲ್ಲಿ ಹೆಚ್ಚಿದ ಆಟೋ ವೀಲ್ ಕಳ್ಳತನ
ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿ ಮನೆ ಮುಂದೆ ನಿಂತಿದ್ದ ಹತ್ತಾರು ಆಟೋಗಳ ಚಕ್ರಗಳು ಕಳ್ಳತನವಾಗಿರುವ ಘಟನೆ ಹನುಮಂತನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಹತ್ತಕ್ಕೂ ಹೆಚ್ಚು ಆಟೋ ಗಾಲಿಗಳ ಕಳ್ಳತನ
ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿ ಮನೆ ಮುಂದೆ ನಿಂತಿದ್ದ ಹತ್ತಾರು ಆಟೋ ಚಕ್ರಗಳು ಕಳ್ಳತನವಾಗಿರುವ ಘಟನೆ ಹನುಮಂತನಗರ ಪೊಲೀಸ್ ಠಾಣಾ ವ್ಯಾಪ್ತಿಯ ಬೃಂದಾವನ ನಗರದಲ್ಲಿ ನಡೆದಿದೆ. ಬೆಳಗ್ಗೆದ್ದು ಲೈನ್ ಮೇಲೆ ಹೋಗಬೇಕು ಎಂದು ಬಂದ ಆಟೋ ಮಾಲೀಕರಿಗೆ ವೀಲ್ ಕಳ್ಳತನ ಆಗಿರೋದನ್ನು ನೋಡಿ ಆಘಾತವಾಗಿದೆ.
ಇತ್ತ ಕೊರೊನಾ ಕಾಲದಲ್ಲಿ ಆದಾಯವಿಲ್ಲದೆ ಕಂಗಾಲಾಗಿದ್ದ ಆಟೋ ಚಾಲಕರಿಗೆ ಈ ಕಳ್ಳರ ಹಾವಳಿ ಮತ್ತಷ್ಟು ಆತಂಕ ಉಂಟು ಮಾಡಿದೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.