ಕರ್ನಾಟಕ

karnataka

ETV Bharat / state

ಪ್ಯಾಕೇಜ್​ ಘೋಷಣೆ ಪ್ರಚಾರಕ್ಕೆ ಮಾತ್ರ ಸೀಮಿತವಾಯ್ತ: ಸರ್ಕಾರದ ವಿರುದ್ಧ ಆಟೋ, ಕ್ಯಾಬ್​ ಚಾಲಕರ ಆಕ್ರೋಶ - latest auto, ola drivers news

ಮುಖ್ಯಮಂತ್ರಿ ಯಡಿಯೂರಪ್ಪ ಅವರು ಆಟೋ, ಕ್ಯಾಬ್ ಓಡಿಸುವ 7 ಲಕ್ಷದ 75 ಸಾವಿರ ಚಾಲಕರಿಗೆ ತಲಾ ಐದು ಸಾವಿರ ಪರಿಹಾರ ಘೋಷಿಸಿದ್ರು. ಆದ್ರೆ ಇಲ್ಲಿಯವರೆಗೆ ಯಾವುದೇ ಪರಿಹಾರದ ಹಣ ಬಾರದಿರುವುದರಿಂದ ಆಟೋ, ಓಲಾ ಚಾಲಕರು ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.

Auto, Ola drivers talking against to state govt
ರಾಜ್ಯ ಸರ್ಕಾರದ ವಿರುದ್ದ ಆಟೋ ಚಾಲರ ಆಕ್ರೋಶ

By

Published : May 20, 2020, 5:40 PM IST

ಬೆಂಗಳೂರು:ಕೊರೊನಾದಿಂದ ಸಂಕಷ್ಟದಲ್ಲಿದ್ದ ಆಟೋ, ಕ್ಯಾಬ್ ಚಾಲಕರಿಗೆ 5000 ಪರಿಹಾರ ನೀಡುವುದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಘೋಷಣೆ ಮಾಡಿದ್ರು. ಅದ್ರೆ ಸರ್ಕಾರ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿ ವಾರ ಕಳೆದರೂ ಇನ್ನೂ ಪರಿಹಾರ ಸಿಕ್ಕಿಲ್ಲವೆಂದು ಚಾಲಕರು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆಟೋ, ಕ್ಯಾಬ್ ಒಡಿಸುವ 7 ಲಕ್ಷದ 75 ಸಾವಿರ ಚಾಲಕರಿಗೆ ತಲಾ ಐದು ಸಾವಿರ ರೂಪಾಯಿ ಪರಿಹಾರ ಘೋಷಿಸಿದ್ರು. ಅಲ್ಲದೆ ಇದೇ ತಿಂಗಳ 16 ರಂದು ಅಧಿಕಾರಿಗಳು ಈ ಪರಿಹಾರ ಹಣವನ್ನು ಪಡೆಯಲು ಸರ್ಕಾರದ ಸೇವಾ ಸಿಂಧು ಆ್ಯಪ್ ಮೂಲಕ ಅರ್ಜಿ ಸಲ್ಲಿಸಿ, ಹಣವನ್ನು ಪಡೆಯುವಂತೆ ಹೇಳಿದ್ರು.

ರಾಜ್ಯ ಸರ್ಕಾರದ ವಿರುದ್ಧ ಆಟೋ ಚಾಲಕರ ಆಕ್ರೋಶ

ಆದೇಶ ಬಂದು 15 ದಿನಗಳಾದ್ರು ಸೇವಾ ಸಿಂಧು ಆ್ಯಪ್​ನಲ್ಲಿ ಅರ್ಜಿ ಸಲ್ಲಿಸೋಕೆ ಅವಕಾಶ ಕೊಟ್ಟಿಲ್ಲ. ಈವರೆಗೂ ಸರ್ಕಾರದಿಂದ ಯಾವೊಬ್ಬ ಆಟೋ ಚಾಲಕನಿಗೆ ಹಾಗೂ ಕ್ಯಾಬ್ ಚಾಲಕನಿಗೆ ಐದು ರೂಪಾಯಿ ಕೂಡ ಸಿಕ್ಕಿಲ್ಲ, ಸರ್ಕಾರ ಪ್ರಚಾರಕ್ಕಾಗಿ ಇಂತ ಆಶ್ವಾಸನೆ ಕೊಡುವುದನ್ನು ಬಿಟ್ಟು, ಕಷ್ಟದಲ್ಲಿರುವ ಚಾಲಕರಿಗೆ ಪರಿಹಾರ ನೀಡಿ ಎಂದು ಓಲಾ, ಊಬರ್ ಚಾಲಕರ ಸಂಘದ ಅಧ್ಯಕ್ಷ ತನ್ವೀರ್ ಪಾಷ ಸರ್ಕಾರಕ್ಕೆ ಆಗ್ರಹಿಸಿದ್ದಾರೆ. ಪರಿಹಾರ ಹಣ ನೀಡುವಲ್ಲಿ ಸರ್ಕಾರ ನಿರ್ಲಕ್ಷ್ಯ ಧೋರಣೆ ನೀತಿ ಅನುಸರಿಸುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

ಬೇಗ ಸರ್ಕಾರ ಹಣ ಬಿಡುಗಡೆ ಮಾಡಲಿ ಎಂದು ಆಟೋ ಚಾಲಕರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

For All Latest Updates

ABOUT THE AUTHOR

...view details