ಕರ್ನಾಟಕ

karnataka

ETV Bharat / state

ನೀರು ಕೇಳಿದ್ದೆ ತಪ್ಪಾಯ್ತು..! ಬೆಂಗಳೂರಿನಲ್ಲಿ ಚಾಕುವಿನಿಂದ ಇರಿದು ಆಟೋ ಚಾಲಕನ ಕೊಲೆ - ಈಟಿವಿ ಭಾರತ ಕನ್ನಡ

ಕುಡಿಯಲು ನೀರು ಕೇಳಿದ್ದಕ್ಕೆ ಇಬ್ಬರು ಆಟೋ ಚಾಲಕರ ನಡುವೆ ಗಲಾಟೆ ನಡೆದು, ಓರ್ವ ಕೊಲೆಯಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

auto-driver-murder-over-drinking-water-issue
ಆಟೋ ಚಾಲಕನ ಕೊಲೆ

By

Published : Sep 12, 2022, 12:44 PM IST

ಬೆಂಗಳೂರು:ಇತ್ತೀಚಿನ ದಿನಗಳಲ್ಲಿ ಕ್ಷುಲ್ಲಕ ವಿಚಾರಗಳು ಕೊಲೆಗೆ ಕಾರಣವಾಗುತ್ತಿರುವುದು ಆತಂಕಕಾರಿ. ಅಂತಹದ್ದೇ ಘಟನೆ ಭಾನುವಾರ ತಡರಾತ್ರಿ 11:30ರ ಸುಮಾರಿಗೆ ಪೀಣ್ಯ ಠಾಣಾ ವ್ಯಾಪ್ತಿಯ ಜಾಲಹಳ್ಳಿ ಕ್ರಾಸ್ ಬಳಿ ನಡೆದಿದೆ. ಕುಡಿಯಲು ನೀರು ಕೇಳಿದ್ದಕ್ಕೆ ಆಟೋ ಚಾಲಕನ ಕೊಲೆ ನಡೆದಿದೆ.

ಸಿದ್ದಿಕ್ (25) ಎಂಬ ಯುವಕನನ್ನು ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದೆ. ಅಜಯ್ ಎಂಬಾತನೆ ಕೊಲೆಗೈದಿರುವ ಆರೋಪಿ. ವೃತ್ತಿಯಲ್ಲಿ ಇಬ್ಬರೂ ಸಹ ಆಟೋ ಚಾಲಕರಾಗಿದ್ದು, ತಡರಾತ್ರಿ ಸಿದ್ದಿಕ್ 'ಮಗಾ ನೀರು ಇದ್ರೆ ಕೊಡು' ಅಂತಾ ಅಜಯ್ ಬಳಿ ಸಿದ್ದಿಕ್ ಕೇಳಿದ್ದಾನೆ. ಅಷ್ಟಕ್ಕೇ ಸಿಟ್ಟಿಗೆದ್ದ ಅಜಯ್ 'ನನ್ನನ್ನೇ ಮಗಾ ಅಂತೀಯಾ' ಎಂದು ಏಕಾಏಕಿ ಸಿದ್ದಿಕ್ ಹೊಟ್ಟೆಗೆ ಚಾಕು ಇರಿದಿದ್ದಾನೆ. ತಕ್ಷಣ ಆಸ್ಪತ್ರೆಗೆ ದಾಖಲಿಸಿದರೂ ಕೂಡ ತೀವ್ರ ರಕ್ತಸ್ರಾವದಿಂದಾಗಿ ಸಿದ್ದಿಕ್ ಸಾವನ್ನಪ್ಪಿದ್ದಾನೆ ಎಂದು ಉತ್ತರ ವಿಭಾಗದ ಡಿಸಿಪಿ ವಿನಾಯಕ್ ಪಾಟೀಲ್ ತಿಳಿಸಿದ್ದಾರೆ.

ಕೊಲೆ ಬಗ್ಗೆ ಡಿಸಿಪಿ ಮಾಹಿತಿ

ಈ ಬಗ್ಗೆ ಪೀಣ್ಯ ಪೊಲೀಸ್ ಠಾಣೆಯಲ್ಲಿ ಸೆಕ್ಷನ್​ 302 ಅಡಿ ಪ್ರಕರಣ ದಾಖಲಾಗಿದ್ದು ತನಿಖೆ ಕೈಗೊಳ್ಳಲಾಗಿದೆ ಎಂದು ಡಿಸಿಪಿ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ:ಬೆಳಗಾವಿ ಗಣೇಶ ನಿಮಜ್ಜನ ವೇಳೆ ಯುವಕನ ಕೊಲೆ.. ನಾಲ್ವರು ಆರೋಪಿಗಳು ಅರೆಸ್ಟ್

ABOUT THE AUTHOR

...view details