ನೆಲಮಂಗಲ:ಪಟ್ಟಣನದಲ್ಲಿ ಮೀಟರ್ ಬಡ್ಡಿ ದಂಧೆ ರಾಜಾರೋಷವಾಗಿ ನಡೆಯುತ್ತಿದೆ. ಮೀಟರ್ ಬಡ್ಡಿ ಹಣ ಕಟ್ಟದ ಆಟೋ ಡ್ರೈವರ್ರ್ನನ್ನ ಲಾಡ್ಜ್ನಲ್ಲಿ ಕೂಡಿ ಹಾಕಿ ಕಿರುಕುಳ ಕೊಟ್ಟ ಆರೋಪ ಕೇಳಿ ಬಂದಿದೆ.
ನಗರದ ಟೌನ್ ರಾಯನ್ನಲ್ಲಿ ಘಟನೆ ನಡೆದಿದ್ದು, ಆಟೋ ಡ್ರೈವರ್ ವಿನಯ್ ಕುಮಾರ್ ಎರಡು ವರ್ಷದ ಹಿಂದೆ ಫೈನಾನ್ಷಿಯರ್ SLN ನವೀನ್ ಎಂಬುವವರ ಬಳಿ 25 ಸಾವಿರ ಹಣ ಪಡೆದಿದ್ರಂತೆ. ಬಳಿಕ ಹಣ ಪಾವತಿಸಲಾಗದೆ ಬಡ್ಡಿ ಹಣ ಮಾತ್ರ ಪಾವತಿಸಿಕೊಂಡು ಬರುತ್ತಿದ್ದರಂತೆ. ಈ ಸಲ ಬಡ್ಡಿ ಹಣ ಕೊಡಲು ವಿನಯ್ ತಡ ಮಾಡಿದ ಎನ್ನಲಾಗಿದೆ.