ಬೆಂಗಳೂರು: ರಾಜ್ಯ ಸಾರಿಗೆ ಇಲಾಖೆಯು ಕೆಎ 51/ಎಂಟಿ ಮುಂಗಡ ಶ್ರೇಣಿಯಲ್ಲಿ ನೋಂದಾಯಿಸುವ ವಾಹನಗಳ ಫ್ಯಾನ್ಸಿ ನಂಬರ್ಗಳನ್ನು ಹರಾಜಿಗಿಟ್ಟಿದೆ. ಫ್ಯಾನ್ಸಿ ನಂಬರ್‌ಗಳಾದ 1, 123, 1234,10,11, 111,1111, 100, 1000, 1001, 22, 27, 222, 234, 2222, 2727, 33, 333, 3333, 3636, 44, 444, 4444, 4455, 5, 55, 555, 555, 6, 66, 666, 6666, 6055, 6363,7, 77, 777, 7777, 7272, 8, 88, 888, 8888, 8055, 8118, 8181, 9, 99, 999, 9999, 909, 9009, 9000 ಹೀಗೆ ಹಲವಾರು ನಂಬರ್ಗಳನ್ನು ಹರಾಜು ಮೂಲಕ ನೀಡುವ ಆದೇಶ ಹೊರಡಿಸಿದೆ.
ಫ್ಯಾನ್ಸಿ ನಂಬರ್ಗಳನ್ನು ಪಡೆಯಲು ಆಸಕ್ತಿ ಹೊಂದಿರುವ ವಾಹನಗಳ ಮಾಲೀಕರು ರಾಜ್ಯದ ಯಾವುದೇ ಸಾರಿಗೆ ಇಲಾಖೆಯ ಪ್ರಾದೇಶಿಕ ಸಾರಿಗೆ ಇಲಾಖೆಯ (ಆರ್ಟಿಓ) ಕಚೇರಿಯಲ್ಲಿ ಅರ್ಜಿ ಸಲ್ಲಿಸಬಹುದು. ಹರಾಜು ಪ್ರಕ್ರಿಯೆಯಲ್ಲಿ ಫಾಲ್ಗೊಂಡು, ಇಚ್ಛಿತ ನಂಬರ್ಗಳನ್ನು ಪಡೆಯಬಹುದು.
ಒಂದು ನಂಬರ್ಗೆ ಒಂದಕ್ಕಿಂತ ಹೆಚ್ಚು ಅರ್ಜಿಗಳು ಬಂದಾಗ ಅವುಗಳನ್ನು ಸಾರಿಗೆ ಹರಾಜು ಮೂಲಕ ಹಂಚಿಕೆ ಮಾಡುವ ಪದ್ಧತಿ ಅನುಸರಿಸುತ್ತದೆ. ಕರ್ನಾಟಕ ಮೋಟಾರು ವಾಹನಗಳ ಕಾಯ್ದೆ 1989 ರ ತಿದ್ದುಪಡಿ ನಿಯಮ 46 (ಎ)ಗೆ ಹೊಸದಾಗಿ ಉಪನಿಯಮ 46 (ಎಎ) ಸೇರ್ಪಡೆ ಮಾಡಿ ಕೆಎ 51/ಎಂಟಿ ( KA51/MT)ಮುಂಗಡ ಶ್ರೇಣಿಯನ್ನ ಪ್ರಾರಂಭಿಸಲಾಗಿದೆ.