ಬೆಂಗಳೂರು:ರಾಸಾಯನಿಕಗಳ ಸಿಂಪಡಣೆ ಇಲ್ಲದೆ ಕೀಟಗಳ ನಿಯಂತ್ರಣ ಮಾಡುವ ಎರಡು ತಂತ್ರಜ್ಞಾನವನ್ನ ಕೃಷಿ ವಿಜ್ಞಾನಿಗಳು ಅನ್ವೇಷಣೆ ಮಾಡಿದ್ದಾರೆ. ಪಕ್ಷಿ ಆಕರ್ಷಕ ಮತ್ತು ಮೋಹಕ ಬಲೆಯಿಂದ ಕೀಟಗಳ ನಿಯಂತ್ರಣ ಸಾಧ್ಯವಾಗಿದೆ.
ರೈತರು ಕಷ್ಟ ಪಟ್ಟು ಬೆಳೆಯುವ ಬೆಳೆಗಳ ಇಳುವರಿಗೆ ಕೀಟಗಳ ಬಾಧೆ ಮಾರಕವಾಗುತ್ತಿದೆ. ಕೀಟಗಳ ನಿಯಂತ್ರಣಕ್ಕಾಗಿ ರಸಾಯನಿಕಗಳ ಸಿಂಪಡಣೆಯಿಂದ ಸೂಕ್ಷ್ಮ ಜೀವಿಗಳ ಪರಿಸರಕ್ಕೂ ಮಾರಕವಾಗಿದೆ. ಇದನ್ನು ಅರಿತ ಕೃಷಿ ವಿಜ್ಞಾನಿ ಡಾ.ಅತೀಕುರ್ ರೆಹಮಾನ್ ಎರಡು ಸುಲಭ ತಂತ್ರಜ್ಞಾನ ಅನ್ವೇಷಣೆ ಮಾಡಿದ್ದಾರೆ. ರಾಸಾಯನಿಕಗಳ ಸಿಂಪಡಣೆ ಇಲ್ಲದೆ ಪಕ್ಷಿ ಆಕರ್ಷಕ ಮತ್ತು ಮೋಹಕ ಬಲೆಯಿಂದ ಕೀಟಗಳ ನಿಯಂತ್ರಣ ಮಾಡುವುದನ್ನು ಪರಿಚಯಿಸಿದ್ದಾರೆ. ತೊಗರಿ ಬೆಳೆಗಾರರು ಕೀಟಗಳ ಹಾವಳಿಯಿಂದ ಚಿಂತೆಗೊಳಗಾಗಿದ್ದರು, ಇದನ್ನು ತಪ್ಪಿಸಲು ಈ ಹೊಸ ತಂತ್ರಜ್ಞಾನ ಅನ್ವೇಷಣೆ ಉಪಕಾರಿಯಾಗಿದೆ.
ಕೃಷಿ ವಿಜ್ಞಾನಿ ಡಾ.ಅತೀಕುರ್ ರೆಹಮಾನ್ ಬಳಕೆ ಮಾಡುವ ವಿಧಾನ:ಒಂದು ಎಕರೆಯ ತೊಗರಿ ಹೊಲದಲ್ಲಿ ನಾಲ್ಕು ಕಡೆ ಕವಲುಗಳಿರುವ ಮರ ನೆಟ್ಟು, ಕವಲುಗಳ ಗಿಡದಿಂದ ಒಂದು ಅಡಿ ಎತ್ತರವಾಗಿ ಇರುವಂತೆ ಮೋಹಕ ಬಲೆಯನ್ನು ನೋಡಿಕೊಳ್ಳಬೇಕು. ಬಲೆಯೊಳಗೆ ವಾಸನೆ ಬರುವ ಲೂರಾ ಎಂಬ ವಸ್ತು ಇಡುವುದರಿಂದ ಗಂಡು ಚಿಟ್ಟೆಗಳು ಸೆಳತಕ್ಕೆ ಒಳಗಾಗಿ ಬಂದು ಬಲೆಯೊಳಗೆ ಬೀಳುತ್ತವೆ. ಪಕ್ಷಿಗಳು ಕವಲುಗಳ ಮೇಲೆ ಕುತೂ ಕೀಟಗಳನ್ನ ತಿನ್ನುತ್ತವೆ. ಇದರಿಂದ ಕೀಟಗಳ ನಿಯಂತ್ರಣ ಕಡಿಮೆಯಾಗುತ್ತದೆ. ಹೆಣ್ಣು ಚಿಟ್ಟೆ ಮೊಟ್ಟೆ ಇಡಲು ಗಂಡು ಚಿಟ್ಟೆಯ ಸಂಗವಾಗಬೇಕಾದ ಗಂಡು ಚಿಟ್ಟೆಯನ್ನ ಆಕರ್ಷಿಸಲು ಒಂದು ರೀತಿಯ ಸುವಾಸನೆಯನ್ನ ಹೆಣ್ಣು ಚಿಟ್ಟೆ ಹೊರಸೂಸುತ್ತದೆ. ಆದ್ದರಿಂದ ಲೂರಾವನ್ನು ಬಲೆಯೊಳಗೆ ಇಡಲಾಗುದು. ಒಂದು ದಿನದಲ್ಲಿ 5ಕ್ಕಿಂತ ಹೆಚ್ಚು ಚಿಟ್ಟೆ ಬಿದ್ದರೆ, ಇಲ್ಲಿ ಕೀಟಗಳ ಬಾಧೆ ಹೆಚ್ಚಾಗಿದೆ ಎಂದು ತಿಳಿದು ಅನಂತರ ರಾಸಾಯನಿಕಗಳ ಸಿಂಪಡಣೆ ಮಾಡಿ ಬೆಳೆ ಸಂರಕ್ಷಣೆ ಮಾಡಬಹುದು. ಮೋಹಕ ಬಲೆಯಿಂದ ರಸಾಯನಿಕಗಳ ಸಿಂಪಡಣೆ ಮಾಡಲು ಸಹ ದಿಕ್ಸೂಚಿ ಆಗಿದೆ.
ಒಂದು ಹೆಣ್ಣು ಚಿಟ್ಟೆ 400 ರಿಂದ 500 ಮೊಟ್ಟೆ ಇಡುತ್ತೆ, ಗಂಡು ಚಿಟ್ಟೆಗಳು ಬಂದು ಬಲೆಯೊಳಗೆ ಬೀಳುವುದರಿಂದ ಬೆಳೆಗಳನ್ನ ರಕ್ಷಣೆ ಮಾಡಬಹುದಾಗಿದೆ. ಈ ವಿಧಾನ ವಿವೇಚನ ರಹಿತ ರಾಸಾಯನಿಕಗಳ ಸಿಂಪಡಣೆಗೆ ಕಡಿವಾಣ ಹಾಕಲಿದೆ ಎಂದು ಕೃಷಿ ವಿಜ್ಞಾನಿ ಡಾ.ಅತೀಕುರ್ ರೆಹಮಾನ್ ಹೇಳಿದರು.
ಇದನ್ನು ಓದಿ;ಜಿಗಿ ಹುಳು ಕಾಟಕ್ಕೆ ಮಾವಿನ ಬೆಳೆ ನಾಶ : ಸಂಕಷ್ಟದಲ್ಲಿ ಗದಗ ರೈತರು!