ಬೆಂಗಳೂರು: ಪ್ರೇಯಸಿ ತನ್ನೊಂದಿಗೆ ಮಾತು ಬಿಟ್ಟಳೆಂದು ಪಾಗಲ್ ಪ್ರೇಮಿವೋರ್ವ ಆಕೆಗೆ ಚಾಕು ಇರಿದು ಕೊಲೆ ಮಾಡಲು ಯತ್ನಿಸಿರುವ ಘಟನೆ ಚೊಕ್ಕಸಂದ್ರದಲ್ಲಿ ನಡೆದಿದ್ದು, ಆರೋಪಿಯನ್ನು ಪೀಣ್ಯ ಪೊಲೀಸರು ಬಂಧಿಸಿದ್ದಾರೆ.
ತನ್ನೊಂದಿಗೆ ಮಾತು ಬಿಟ್ಟ ಪ್ರೇಯಸಿಗೆ ಪಾಗಲ್ ಪ್ರೇಮಿ ಮಾಡಿದ್ದೇನು ಗೊತ್ತಾ? - ಬೆಂಗಳೂರು ಪಾಗಲ್ ಪ್ರೇಮಿ ಸುದ್ದಿ
ಪ್ರೇಯಸಿ ತನ್ನೊಂದಿಗೆ ಮಾತು ಬಿಟ್ಟಳು ಎಂಬ ಕಾರಣಕ್ಕೆ ಪಾಗಲ್ ಪ್ರೇಮಿವೋರ್ವ ಆಕೆಗೆ ಚಾಕುವಿನಿಂದ ಇರಿದು ಕೊಲೆಗೆ ಯತ್ನಿಸಿದ ಘಟನೆ ಚೊಕ್ಕಸಂದ್ರದಲ್ಲಿ ನಡೆದಿದೆ.
ಆರೋಪಿ ಜನಾರ್ಧನ್
ಚೊಕ್ಕಸಂದ್ರದ ನಿವಾಸಿ ಜನಾರ್ಧನ್ (26) ಎಂಬಾತ ಬಂಧಿತ ಆರೋಪಿ.ಕಳೆದ ಮೂರು ವರ್ಷಗಳಿಂದ ಇಬ್ಬರು ಪ್ರೀತಿಸುತ್ತಿದ್ದರು ಎನ್ನಲಾಗಿದೆ. ಮಾತು ಬಿಟ್ಟ ಕಾರಣ ಯುವತಿಗೆ ಚಾಕುವಿನಿಂದ ಇರಿದಿದ್ದಾನೆ. ಗಾಯಗೊಂಡ ಯುವತಿಯನ್ನು ತಕ್ಷಣ ಸಪ್ತಗಿರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಮುಂದಿನ ತನಿಖೆ ಕೈಗೊಂಡಿದ್ದೇವೆ ಎಂದು ಉತ್ತರ ವಿಭಾಗದ ಡಿಸಿಪಿ ಎನ್. ಶಶಿಕುಮಾರ್ ತಿಳಿಸಿದ್ದಾರೆ.
ಈ ಸಂಬಂಧ ಪೀಣ್ಯ ಪೊಲೀಸ್ ಠಾಣೆ ಪ್ರಕರಣ ದಾಖಲಾಗಿದೆ.