ಕರ್ನಾಟಕ

karnataka

ETV Bharat / state

ಆಪರೇಷನ್ ಕಮಲದ ಬಗ್ಗೆ ನನಗೆ ಗೊತ್ತಿಲ್ಲ, ಆದ್ರೆ ಸರ್ಕಾರ ಬೀಳಿಸಲು ಯತ್ನಿಸಲಾಗುತ್ತಿದೆ: ಸಿಎಂ ಸಿದ್ದರಾಮಯ್ಯ

''ಆಪರೇಷನ್ ಕಮಲದ ಬಗ್ಗೆ ನನಗೆ ಗೊತ್ತಿಲ್ಲ, ಆದ್ರೆ ಸರ್ಕಾರ ಬೀಳಿಸಲು ಪ್ರಯತ್ನಗಳು ನಡೆದಿವೆ'' ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

CM Siddaramaiah
ಸಿಎಂ ಸಿದ್ದರಾಮಯ್ಯ

By ETV Bharat Karnataka Team

Published : Oct 28, 2023, 6:39 PM IST

ಬೆಂಗಳೂರು:''ಆಪರೇಷನ್ ಕಮಲದ ಬಗ್ಗೆ ನನಗೆ ಗೊತ್ತಿಲ್ಲ, ಆದರೆ ಸರ್ಕಾರವನ್ನು ಬೀಳಿಸಲು ಬಿಜೆಪಿ ಯತ್ನಿಸುತ್ತಿದೆ'' ಎಂದು ಸಿಎಂ ಸಿದ್ದರಾಮಯ್ಯ ಗಂಭೀರ ಆರೋಪ ಮಾಡಿದ್ದಾರೆ.

ವಿಧಾನಸೌಧದಲ್ಲಿ ಇಂದು ಆಪರೇಷನ್ ಕಮಲದ ವಿಚಾರವಾಗಿ ಪ್ರತಿಕ್ರಿಯಿಸಿ, ''ಈ ವಿಚಾರ ನನಗೆ ಗೊತ್ತಿಲ್ಲ. ಬಿಜೆಪಿಯವರು ಆಪರೇಷನ್ ಕಮಲ‌ ಮಾಡುವುದಕ್ಕೆ ಪ್ರಯತ್ನ ಮಾಡ್ತಿದ್ದಾರೆ. ಸರ್ಕಾರ ಬೀಳಿಸಲು ಆಪರೇಷನ್ ಕಮಲ ಮಾಡ್ತಿದ್ದಾರೆ'' ಎಂದರು.

ಕಾಂಗ್ರೆಸ್ ಶಾಸಕ ಗಣಿಗ ರವಿ ಬಿಜೆಪಿ ಆಪರೇಷನ್ ಕಮಲದ ಬಗ್ಗೆ ನಿನ್ನೆ ಹೇಳಿಕೆ ಕೊಟ್ಟಿದ್ದರು. ''ಹಿಂದಿನ ಗ್ಯಾಂಗ್ ಮತ್ತೆ ಆ್ಯಕ್ಟಿವ್ ಆಗಿದೆ. ನಿಮ್ಮನ್ನು ಅಮಿತ್ ಶಾ ಭೇಟಿ‌ ಮಾಡಿಸ್ತೇವೆ. ಚಾರ್ಟರ್ ಫ್ಲೈಟ್ ಬುಕ್ ಮಾಡಿದ್ದೇವೆ ಅಂತಾರೆ. ಎನ್.ಆರ್‌‌. ಸಂತೋಷ್ 10 ದಿನದ ಹಿಂದೆ ನಮ್ಮ ಶಾಸಕರನ್ನು ನಗರದ ಖಾಸಗಿ ಹೊಟೇಲ್​ನಲ್ಲಿ ಭೇಟಿ ಮಾಡಿದ್ದರು. ಒಬ್ಬರು ಮೈಸೂರು ಭಾಗದ ಮಾಜಿ ಎಂಎಲ್​ಸಿ, ಇನ್ನೊಬ್ಬರು ಬೆಳಗಾವಿಯ ಮಾಜಿ ಸಚಿವರು ಆಪರೇಷನ್​ ಕಮಲಕ್ಕೆ ಮುಂದಾಗಿದ್ದಾರೆ. ಸಮಯ ಬರಲಿ ಎಲ್ಲವನ್ನೂ ಬಿಚ್ಚಿಡ್ತೇವೆ'' ಎಂದು ತಿಳಿಸಿದ್ದರು.

ಈ ಬಗ್ಗೆ ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ ಅವರು, ''ಬಿಜೆಪಿಯವರು ಆಪರೇಷನ್ ಕಮಲ‌ ಮಾಡುವುದಕ್ಕೆ ಪ್ರಯತ್ನ ಮಾಡುತ್ತಿದ್ದಾರೆ. ಸರ್ಕಾರ ಉರುಳಿಸಲು ಆಪರೇಷನ್ ಕಮಲಕ್ಕೆ ಕೈ ಹಾಕಿದ್ದಾರೆ ಎಂದು ಒಪ್ಪಿಕೊಂಡಿದ್ದಾರೆ.

ಕೆ.ಸಿ. ವೇಣುಗೋಪಾಲ್ ಟೀಕೆ:ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್, ''ನಾಯಕನಿಲ್ಲದ ಒಂದು ಪಕ್ಷ, ಜನಾದೇಶವನ್ನು ತಿರಸ್ಕರಿಸುವ ಚಾಳಿ ಹೊಂದಿರುವ ಅಜೆಂಡಾ ಹೊಂದಿದೆ. ದಿಲ್ಲಿ ವರಿಷ್ಠರ ಉಸ್ತುವಾರಿಯಲ್ಲಿ ಕರ್ನಾಟಕ ಬಿಜೆಪಿ ಕರ್ನಾಟಕ ಸರ್ಕಾರವನ್ನು ಅಸ್ತಿರ ಗೊಳಿಸಲು ಮತ್ತೊಂದು ನಗೆಪಾಟಲಿನ ಯತ್ನ ಮಾಡುತ್ತಿದೆ'' ಎಂದು ಟೀಕಿಸಿದ್ದಾರೆ.

''ನಮ್ಮ ಶಾಸಕರು ಪಕ್ಷ ನಿಷ್ಠರಾಗಿದ್ದಾರೆ. ಪಂಚ ಗ್ಯಾರಂಟಿಗಳ ತ್ವರಿತ ಅನುಷ್ಠಾನದಿಂದ ರಾಜ್ಯ ಸರ್ಕಾರ ವ್ಯಾಪಕವಾಗಿ ಮೆಚ್ಚುಗೆ ಗಳಿಸುತ್ತಿದೆ‌. ಮೊದಲು ಬಿಜೆಪಿ ರಾಜ್ಯಾಧ್ಯಕ್ಷ, ಪ್ರತಿಪಕ್ಷ ನಾಯಕನನ್ನು ನೇಮಕ ಮಾಡಲಿ'' ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸಿಎಂ ಬದಲಾವಣೆ ಬಗ್ಗೆ ಚರ್ಚೆಯಾಗಿಲ್ಲ- ಆರ್.ಬಿ. ತಿಮ್ಮಾಪೂರ:''ಸಿಎಂ ಬದಲಾವಣೆ ಕುರಿತು ಯಾವುದೇ ಚರ್ಚೆಯಾಗಿಲ್ಲ. ಕೇವಲ ಮಾಧ್ಯಮಗಳಲ್ಲಿ ಮಾತ್ರ ವದಂತಿ ಹರಡಿದೆ'' ಎಂದು ಅಬಕಾರಿ ಸಚಿವ ಆರ್.ಬಿ. ತಿಮ್ಮಾಪೂರ ತಿಳಿಸಿದ್ದಾರೆ. ಬಾಗಲಕೋಟೆಯಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು. ''ಸಚಿವ ಜಿ. ಪರಮೇಶ್ವರ್​ ಮನೆಯಲ್ಲಿ‌ ಕಾಂಗ್ರೆಸ್​ ನಾಯಕರ ಡಿನ್ನರ್​ ಪಾರ್ಟಿಯಲ್ಲಿ ನಾನು ಭಾಗಿಯಾಗಿಲ್ಲ. ಆದ್ರೆ, ಅದಕ್ಕೆ ಅಂತಹದ್ದೇನು ಮಹತ್ವವೇನಿಲ್ಲ'' ಎಂದಿದ್ದಾರೆ.

ಇದನ್ನೂ ಓದಿ:ಐದು ವರ್ಷ ಸಿದ್ದರಾಮಯ್ಯ ಅವರೇ ಸಿಎಂ ಆಗಿರಬೇಕು: ಸಚಿವ ಕೆ ಎನ್ ರಾಜಣ್ಣ

ABOUT THE AUTHOR

...view details