ಬೆಂಗಳೂರು:ಚಾಕು ತೋರಿಸಿ ಮಹಿಳೆ ಮೇಲೆ ಅತ್ಯಾಚಾರ ಯತ್ನಿಸಿರುವ ಘಟನೆ ಅಶೋಕನಗರ ಪೊಲೀಸ್ ಠಾಣಾ ವ್ಯಾಪ್ತಿಯ ಶಾಂತಲಾ ನಗರದಲ್ಲಿ ಬೆಳಕಿಗೆ ಬಂದಿದೆ. ಮಹಿಳೆ ನೀಡಿದ ದೂರಿನ ಮೇರೆಗೆ ಕೃತ್ಯವೆಸಗಿದ ಆರೋಪದಡಿ ತಲೆಮರೆಸಿಕೊಂಡಿರುವ ವಿಲಿಯಂ ಪ್ರಕಾಶ್ ವಿರುದ್ಧ ಪ್ರಕರಣ ದಾಖಲಿಕೊಂಡು ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.
ಶಾಂತಲಾನಗರದಲ್ಲಿ ವಾಸವಾಗಿದ್ದ ಮಹಿಳೆ ಇದೇ ತಿಂಗಳು 10ರ ಸುಮಾರು 9.30ರ ವೇಳೆಗೆ ಆರೋಪಿ ಕೃತ್ಯವೆಸಗಿದ್ದಾನೆ. ಏರಿಯಾದಲ್ಲಿ ಕೂರಿಸಿದ್ದ ಗಣೇಶ ಮೂರ್ತಿ ನಿಮಜ್ಜನ ಮುಗಿದ ಬಳಿಕ ಮನೆಯ ಪಕ್ಕದಲ್ಲಿರುವ ಚರ್ಚ್ ಬಳಿ ಲೈಟ್ ಆಫ್ ಮಾಡಲು ಮಹಿಳೆ ಹೋಗಿದ್ದರು. ಈ ವೇಳೆ ಹಿಂಬದಿಯಿಂದ ಬಂದ ಪ್ರಕಾಶ್, ಚಾಕು ತೋರಿಸಿ ಮೈ-ಕೈ ಮುಟ್ಟಿ ಲೈಂಗಿಕವಾಗಿ ದೌರ್ಜನ್ಯವೆಸಗಿದ್ದಾನೆ.