ಬೆಂಗಳೂರು : ವಿಧಾನಸೌಧದಲ್ಲಿ ವ್ಯಕ್ತಿಯೊಬ್ಬ 3ನೇ ಮಹಡಿಯಲ್ಲಿ ಕತ್ತು ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ.
ವಿಧಾನಸೌಧದಲ್ಲಿ ನಡೆಯಿತು ಆತ್ಮಹತ್ಯಾ ಯತ್ನ...! ಕಾರಣ ನಿಗೂಢ - bng
ವಿಧಾನಸೌಧದಲ್ಲಿ ವ್ಯಕ್ತಿಯೊಬ್ಬ 3ನೇ ಮಹಡಿಯಲ್ಲಿ ಕತ್ತು ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ.
![ವಿಧಾನಸೌಧದಲ್ಲಿ ನಡೆಯಿತು ಆತ್ಮಹತ್ಯಾ ಯತ್ನ...! ಕಾರಣ ನಿಗೂಢ](https://etvbharatimages.akamaized.net/etvbharat/prod-images/768-512-3647458-thumbnail-3x2-die.jpg)
ವಿಧಾನಸೌಧದಲ್ಲಿ ವ್ಯಕ್ತಿಯಿಂದ ಕತ್ತು ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನ
ಚಿಕ್ಕಬಳ್ಳಾಪುರದಲ್ಲಿ ಲೈಬ್ರರಿಯನ್ ಆಗಿ ಕಾರ್ಯನಿರ್ವಹಿಸುತ್ತಿದ್ದ ರೇವಣ್ಣ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯಾಗಿದ್ದಾರೆ. ಇನ್ನು ಈ ಘಟನೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಶೌಚಾಲಯ ಕೊಠಡಿ ಸಂಖ್ಯೆ 332ರಲ್ಲಿ ಘಟನೆ ನಡೆದಿದೆ.
ಭದ್ರತೆಯ ನಡುವೆಯೂ ವಿಧಾನಸೌಧದಲ್ಲಿ ಇಂತಹ ಘಟನೆ ನಡೆದಿದ್ದು, ಸದ್ಯ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯನ್ನ ಆಸ್ಪತ್ರೆಗೆ ದಾಖಲಿಸಲಾಗಿದೆ. ಈತ ಕುಸಿದು ಬಿದ್ದ ಜಾಗದಲ್ಲಿ ಮಾತ್ರೆಗಳು ಹಾಗೂ ಪ್ಲಾಸ್ಟಿಕ್ ಚೀಲದಲ್ಲಿ ಕೆಲವೊಂದು ದಾಖಲೆಗಳು ಪತ್ತೆಯಾಗಿವೆ. ಸ್ಥಳಕ್ಕೆ ವಿಧಾನಸೌಧ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ವಿಧಾನಸೌಧದಲ್ಲಿ ವ್ಯಕ್ತಿಯಿಂದ ಕತ್ತು ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನ
Last Updated : Jun 24, 2019, 2:36 PM IST
TAGGED:
bng