ಬೆಂಗಳೂರು: ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಹಾಡಹಗಲೇ ಸುಲಿಗೆಗೆ ಯತ್ನಿಸಿರುವ ಘಟನೆ ಉತ್ತರಹಳ್ಳಿಯ ಮುಖ್ಯ ರಸ್ತೆಯಲ್ಲಿ ನಡೆದಿದೆ.
ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಡ್ರ್ಯಾಗರ್ನಿಂದ ಮನಸೋಇಚ್ಛೆ ಹಲ್ಲೆ ಮಾಡಿದ್ದಾರೆ. ಆದ್ರೆ ಹಣ ದರೋಡೆ ಮಾಡುವಲ್ಲಿ ಖದೀಮರು ವಿಫಲರಾಗಿದ್ದಾರೆ. ವರದರಾಜು ಎಂಬ ವ್ಯಕ್ತಿ ಪಿಗ್ಮಿ ಕಲೆಕ್ಟರ್ ಆಗಿ ಕೆಲಸ ಮಾಡ್ತಿದ್ರು. ಎಂದಿನಂತೆ ಸೆ. 30 ರಂದು ಹಣವನ್ನು ಕಲೆಕ್ಟ್ ಮಾಡಿ ಉತ್ತರಹಳ್ಳಿ ಮೈನ್ ರೋಡ್ಗೆ ಬಂದಿದ್ದಾರೆ. ಈ ವೇಳೆ ಬೈಕ್ನಲ್ಲಿ ಹೆಲ್ಮೆಟ್ ಧರಿಸಿ ಬಂದಿದ್ದ ಇಬ್ಬರು ದುಷ್ಜರ್ಮಿಗಳು ಡ್ರ್ಯಾಗರ್ನಿಂದ ಹಲ್ಲೆ ಮಾಡಿ ಹಣದ ಬ್ಯಾಗ್ ನೀಡುವಂತೆ ವರದರಾಜ್ ಅವರನ್ನ ಬೆದರಿಸಿದ್ದಾರೆ.