ಬೆಂಗಳೂರು: ಗಾಂಜಾ ನಶೆಯಲ್ಲಿ ಹೆಲ್ಮೆಟ್ ಧರಿಸದೆ ಅಡ್ಡಾದಿಡ್ಡಿ ಬೈಕ್ ಚಾಲನೆ ಮಾಡುತ್ತಿದ್ದ ಸವಾರರನ್ನು ಹಿಡಿಯಲು ತೆರಳಿದ ಟ್ರಾಫಿಕ್ ಕಾನ್ಸ್ಸ್ಟೇಬಲ್ ಮೇಲೆಯೇ ಹಲ್ಲೆ ಮಾಡಿರುವ ಘಟನೆ ವಿಜಯನಗರ ಸಂಚಾರಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಗಾಂಜಾ ನಶೆಯಲ್ಲಿ ಬೈಕ್ ಸವಾರಿ: ಕಾನ್ಸ್ಸ್ಟೇಬಲ್ ಮೇಲೆ ಹಲ್ಲೆಗೆ ಯತ್ನ - bangalore crime today
ಬೆಂಗಳೂರಿನ ವಿಜಯನಗರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಂದು ಗಾಂಜಾ ಸೇವಿಸಿ, ಬೈಕ್ ಮೇಲೆ ತೆರಳುತ್ತಿದ್ದ ಮೂವರನ್ನು ಪೊಲೀಸ್ ಕಾನ್ಸ್ಸ್ಟೇಬಲ್ ತಡೆಯಲು ಯತ್ನಿಸಿದ್ದಾರೆ. ಗಾಂಜಾ ಸೇವಿನೆಯಲ್ಲಿದ್ದ ಮೂವರು ಪೊಲೀಸ್ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ.
![ಗಾಂಜಾ ನಶೆಯಲ್ಲಿ ಬೈಕ್ ಸವಾರಿ: ಕಾನ್ಸ್ಸ್ಟೇಬಲ್ ಮೇಲೆ ಹಲ್ಲೆಗೆ ಯತ್ನ Attempted assault on policeman](https://etvbharatimages.akamaized.net/etvbharat/prod-images/768-512-8618796-thumbnail-3x2-binscopy.jpg)
ಗಾಂಜಾ ನಶೆಯಲ್ಲಿ ಬೈಕ್ ಸವಾರಿ
ಇಂದು ಬೈಕ್ನಲ್ಲಿ ಮೂವರು ಸವಾರರು ತೆರಳುತ್ತಿದ್ದಾಗ ಪೊಲೀಸ್ ಕಾನ್ಸ್ಸ್ಟೇಬಲ್ ವಿದ್ಯಾದರ್ ಅಡ್ಡಗಟ್ಟಲು ಮುಂದಾಗಿದ್ದಾರೆ. ಇದರಿಂದ ಆಕ್ರೋಶಗೊಂಡ ಆರೋಪಿಗಳು ಕಾಲಿನಿಂದ ಒದ್ದು, ಪಾರಾಗಲು ಪ್ರಯತ್ನಿದ್ದಾರೆ.
ಡಿಸಿಪಿ ಸಂಜೀವ್
ಆರೋಪಿಗಳಾದ ಅಮರ್ ಖುರೇಶಿ, ಸಯ್ಯದ್ ಸಾಧೀಕ್ ಹಾಗೂ ಓರ್ವ ಅಪ್ರಾಪ್ತ ಬಾಲಕ ಈ ಕೃತ್ಯದಲ್ಲಿ ಭಾಗಿಯಾಗಿದ್ದಾರೆ. ಇಬ್ಬರನ್ನು ಇದೀಗ ವಶಕ್ಕೆ ಪಡೆಯಲಾಗಿದೆ. ವಿಜಯನಗರ ಕಾನೂನು ಸುವ್ಯವಸ್ಥೆ ವಿಭಾಗದ ಪೊಲೀಸರು ಆರೋಪಿಗಳನ್ನು ವಿಚಾರಣೆಗೊಳಪಡಿಸಿದ್ದು, ಆರೋಪಿಗಳು ಗಾಂಜಾ ನಶೆಯಲ್ಲಿದ್ದರು ಎಂಬುದು ದೃಢಪಡಿಸಿದ್ದಾರೆ.