ಕರ್ನಾಟಕ

karnataka

ETV Bharat / state

ಆನೇಕಲ್​ನಲ್ಲಿ ಬುದ್ಧಿಮಾಂದ್ಯ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನ : ಸಾರ್ವಜನಿಕರಿಂದ ರಕ್ಷಣೆ - ಆನೇಕಲ್​ನಲ್ಲಿ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನ

ಬಾಲಕಿ ಬುದ್ಧಿಮಾಂದ್ಯತೆಯಿಂದ ಬಳಲುತ್ತಿದ್ದು, ಈ ಘಟನೆಯಿಂದ ಮತ್ತಷ್ಟು ಖಿನ್ನತೆಗೆ ಒಳಗಾಗಿದ್ದಾಳೆ. ಈ ಕುರಿತು ಸೂರ್ಯನಗರ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿದೆ..

ಆನೇಕಲ್​ನಲ್ಲಿ ಬುದ್ದಿಮಾಂದ್ಯ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನ
ಆನೇಕಲ್​ನಲ್ಲಿ ಬುದ್ದಿಮಾಂದ್ಯ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನ

By

Published : Sep 29, 2021, 2:35 PM IST

ಆನೇಕಲ್ : ಚಾಕೊಲೇಟ್ ಕೊಡಿಸುವ ನೆಪದಲ್ಲಿ ಬುದ್ಧಿಮಾಂದ್ಯ ಬಾಲಕಿಯ ಅತ್ಯಾಚಾರಕ್ಕೆ ವಿಫಲ ಯತ್ನ ನಡೆಸಿರುವ ಘಟನೆ ಸೂರ್ಯನಗರ ಪೊಲೀಸ್ ಠಾಣಾ ವ್ಯಾಪ್ತಿಯ ಹೆನ್ನಾಗರ ಹೊಸಹಳ್ಳಿ ದಿನ್ನೆಯ ಬಳಿ ನಡೆದಿದೆ. ಪಾಳು ಬಿದ್ದ ಕಟ್ಟಡಕ್ಕೆ ಕರೆದೊಯ್ದು ಅತ್ಯಾಚಾರಕ್ಕೆ ಯತ್ನಸಿದ್ದ ಆರೋಪಿಯನ್ನ ಸ್ಥಳೀಯರೇ ಹಿಡಿದು ಥಳಿಸಿದಾರೆ.

ಆರೋಪಿ ಚಂದ್ರೇಗೌಡ

ಅತ್ಯಾಚಾರಕ್ಕೆ ಯತ್ನಿಸಿದ ಆರೋಪಿ ಚಂದ್ರೇಗೌಡ (52) ಎಂಬಾತನನ್ನು ಸಾರ್ವಜನಿಕರು ಹಿಡಿದು ಥಳಿಸಿದ್ದಾರೆ. ಕಳೆದ ಸೋಮವಾರ ಸಂಜೆ ಈ ಘಟನೆ ನಡೆದಿದೆ. ಆರೋಪಿಯನ್ನ ಪೊಲೀಸರು ವಶಕ್ಕೆ ಪಡೆದಿದಾರೆ. ಮನೆ ಬಳಿ ಆಟವಾಡುತ್ತಿದ್ದ ಬಾಲಕಿಯನ್ನು ಪುಸಲಾಯಿಸಿದ್ದ ಆರೋಪಿ, ಕಳೆದ ಸೋಮವಾರ ಸಂಜೆ ಪಾಳು ಮನೆಯೊಂದಕ್ಕೆ ಕರೆದುಕೊಂಡು ಹೋಗಿದ್ದ.

ಇದರಿಂದ ಅನುಮಾನಗೊಂಡ ಸ್ಥಳೀಯರು, ಚಂದ್ರೇಗೌಡನನ್ನು ಹಿಡಿದು ಗೂಸಾ ಕೊಟ್ಟಿದ್ದರು. ಬಾಲಕಿಯನ್ನು ರಕ್ಷಣೆ ಮಾಡಿದ್ದರು. ಇದರಿಂದ ಬಾಲಕಿ ಭಯಗೊಂಡು ಬಾತ್ ರೂಮ್ ಬಾಗಿಲು ಹಾಕಿಕೊಂಡಿದ್ದಾಳೆ.

ಈ ವೇಳೆ ಬಾಗಿಲು ತೆರೆಯಲು ಹೋದಾಗ ಬಾಲಕಿ ತಲೆಗೆ ಗಾಯವಾಗಿದೆ. ಬಾಲಕಿ ಬುದ್ಧಿಮಾಂದ್ಯತೆಯಿಂದ ಬಳಲುತ್ತಿದ್ದು, ಈ ಘಟನೆಯಿಂದ ಮತ್ತಷ್ಟು ಖಿನ್ನತೆಗೆ ಒಳಗಾಗಿದ್ದಾಳೆ. ಈ ಕುರಿತು ಸೂರ್ಯನಗರ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿದೆ.

ABOUT THE AUTHOR

...view details