ಕರ್ನಾಟಕ

karnataka

ETV Bharat / state

ತಾಲೂಕು ಕಚೇರಿ​ಗೆ ಉಪ ಲೋಕಾಯುಕ್ತ ಅಧಿಕಾರಿಗಳ ದಿಢೀರ್ ಭೇಟಿ, ಸಿಬ್ಬಂದಿಗೆ ನೋಟಿಸ್ - Anekal Taluk office news

ಭೂ ಮಾಪನ ಮತ್ತು ಆಹಾರ ಇಲಾಖೆ ಅಧಿಕಾರಿಗಳು ಸರಿಯಾಗಿ ಕೆಲಸ ನಿರ್ವಹಿಸುತ್ತಿಲ್ಲ ಎನ್ನುವ ಆರೋಪ ಕೇಳಿ ಬಂದ ಹಿನ್ನೆಲೆ, ಉಪ ಲೋಕಾಯುಕ್ತ ಅಧಿಕಾರಿ ಆನಂದ್ ಅವರ ತಂಡ ಆನೇಕಲ್ ತಾಲ್ಲೂಕು ಕಚೇರಿಗೆ ದಿಢೀರ್ ಭೇಟಿ ನೀಡಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

Deputy Lokayukta
ತಾಲೂಕು ಕಚೇರಿ​ ಉಪ ಲೋಕಾಯುಕ್ತ ಅಧಿಕಾರಿಗಳ ದಾಳಿ

By

Published : Dec 28, 2019, 11:44 AM IST

ಆನೇಕಲ್​ : ಭೂ ಮಾಪನ ಮತ್ತು ಆಹಾರ ಇಲಾಖೆ ಅಧಿಕಾರಿಗಳು ಸರಿಯಾಗಿ ಕೆಲಸ ನಿರ್ವಹಿಸುತ್ತಿಲ್ಲ ಎನ್ನುವ ಆರೋಪ ಕೇಳಿ ಬಂದ ಹಿನ್ನೆಲೆ, ಉಪ ಲೋಕಾಯುಕ್ತ ಅಧಿಕಾರಿ ಆನಂದ್ ಅವರ ತಂಡ ಆನೇಕಲ್ ತಾಲ್ಲೂಕು ಕಚೇರಿಗೆ ದಿಢೀರ್ ಭೇಟಿ ನೀಡಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ತಾಲ್ಲೂಕು ಕಚೇರಿಗೆ ಆಗಮಿಸಿದ ಅಧಿಕಾರಿಗಳು, ಸಿಬ್ಬಂದಿ ಕಾರ್ಯವೈಖರಿ ಕಂಡು ಗರಂ ಆದರು. ಸಾರ್ವಜನಿಕರ ಕುಂದು ಕೊರತೆಯನ್ನು ಬಗೆಹರಿಸದ ಅಧಿಕಾರಿಗಳ ವಿರುದ್ಧ ತೀವ್ರ ಅಸಮಾಧಾನ ಹೊರಹಾಕಿದರು.

ತಾಲೂಕು ಕಚೇರಿ​ಗೆ ಉಪ ಲೋಕಾಯುಕ್ತ ಅಧಿಕಾರಿಗಳ ದಾಳಿ, ಸಿಬ್ಬಂದಿಗೆ ತರಾಟೆ

ತಾಲ್ಲೂಕು ಕಚೇರಿಯಲ್ಲಿನ ಎಲ್ಲಾ ಇಲಾಖೆಗಳಿಗೆ ಭೇಟಿ ನೀಡಿ ಪರಿಶೀಲಿಸಿದ ಅಧಿಕಾರಿಗಳು, ಸಾರ್ವಜನಿಕರ ಸಮಸ್ಯೆ ಆಲಿಸಿ, ಅವುಗಳ ಬಗ್ಗೆ ಗಮನಹರಿಸುವುದಾಗಿಯೂ ಭರವಸೆ ನೀಡಿದರು. ಮಧ್ಯಾಹ್ನ 12 ಗಂಟೆಯಾದರೂ ಕಚೇರಿಗೆ ಬಾರದ ಅಧಿಕಾರಿಗಳಿಗೆ ನೋಟಿಸ್ ನೀಡುವ ಮೂಲಕ ಖಡಕ್ ವಾರ್ನಿಂಗ್ ನೀಡಿದ್ದಾರೆ.

ಈ ಸಂಬಂಧ ಪ್ರತಿಕ್ರಿಯಿಸಿದ ದಲಿತ ಸಂಘರ್ಷ ಸಮಿತಿ ರಾಜ್ಯಾಧ್ಯಕ್ಷ, ಅಕ್ರಮಗಳ ಬಗ್ಗೆ ಕೇಳಿದ್ದಕ್ಕೆ ನನ್ನ ಮೇಲೆ ಕೇಸು ದಾಖಲಿಸಿದ್ದರು. ದುಡ್ಡು ಇಲ್ಲದೇ ಇಲ್ಲಿ ಯಾವುದೇ ಕೆಲಸ ಆಗ್ತಾ ಇಲ್ಲ ಎಂದು ದೂರಿದ್ರು.

ABOUT THE AUTHOR

...view details