ಕರ್ನಾಟಕ

karnataka

ETV Bharat / state

ಪೆಟ್ರೋಲ್ ಹಾಕಿಸಿಕೊಂಡ ಬಳಿಕ ಹಣ ಕೇಳಿದ ಸಿಬ್ಬಂದಿಗೆ ಮಚ್ಚು ಬೀಸಿದ ಪುಂಡರು: ವಿಡಿಯೋ - Attack on Patrol Bunk Staff in bengaluru

ಬೆಂಗಳೂರಿನ ಬ್ಯಾಟರಾಯನಪುರದ ಪೆಟ್ರೋಲ್ ಬಂಕ್​ನಲ್ಲಿ ದಾಂಧಲೆ ನಡೆಸಿದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

attack-on-patrol-bunk-staff-at-batarayanapura
ಪೆಟ್ರೋಲ್ ಹಾಕಿಸಿಕೊಂಡ ಬಳಿಕ ಹಣ ಕೇಳಿದ ಸಿಬ್ಬಂದಿಗೆ ಮಚ್ಚು ಬೀಸಿದ ಪುಂಡರು: ವಿಡಿಯೋ

By

Published : Jun 12, 2022, 5:32 PM IST

ಬೆಂಗಳೂರು:ಸಿಲಿಕಾನ್ ಸಿಟಿಯಲ್ಲಿ ಪುಂಡರ ಅಟ್ಟಹಾಸ ಮುಂದುವರೆದಿದೆ. ನಗರದ ಬ್ಯಾಟರಾಯನಪುರದ ಬಂಕ್​ನಲ್ಲಿ ಪೆಟ್ರೋಲ್ ಹಾಕಿಸಿಕೊಂಡ ಬಳಿಕ ಪುಂಡರು ದಾಂಧಲೆ ನಡೆಸಿದ್ದು, ಸಿಸಿಟಿವಿ ದೃಶ್ಯಾವಳಿ ಆಧಾರದ ಮೇಲೆ ಇಬ್ಬರನ್ನು ಬಂಧಿಸಲಾಗಿದೆ.

ಬಂಧಿತ ಆರೋಪಿಗಳು

ಪೆಟ್ರೋಲ್ ಹಾಕಿಸಿಕೊಂಡ ಬಳಿಕ ಹಣ ಕೇಳಿದ ಬಂಕ್ ಸಿಬ್ಬಂದಿ ಮೇಲೆ ಯುವಕರು ಮಚ್ಚು ಬೀಸಿದ್ದಾರೆ. ಈ ದೃಶ್ಯ ಅಲ್ಲಿನ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಇದರ ಆಧಾರದ ಮೇಲೆ ಮೂವರು ಆರೋಪಿಗಳಲ್ಲಿ ಇಬ್ಬರನ್ನು ಬ್ಯಾಟರಾಯನಪುರ ಪೊಲೀಸರು ಸೆರೆ ಹಿಡಿದ್ದಾರೆ. ಉದಯ್ ಮತ್ತು ಕಿರಣ್ ಎಂಬುವರನ್ನು ಬಂಧಿಸಲಾಗಿದ್ದು, ಇನ್ನೊಬ್ಬನಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

ಪೆಟ್ರೋಲ್ ಹಾಕಿಸಿಕೊಂಡ ಬಳಿಕ ಹಣ ಕೇಳಿದ ಸಿಬ್ಬಂದಿಗೆ ಮಚ್ಚು ಬೀಸಿದ ಪುಂಡರು

ಇದನ್ನೂ ಓದಿ:ಬೆಳ್ತಂಗಡಿ: ಮನೆಯಂಗಳದಲ್ಲಿ ಸುತ್ತಾಡಿದ ಚಿರತೆ- ಸಿಸಿ ಕ್ಯಾಮರಾದಲ್ಲಿ ದೃಶ್ಯ ಸೆರೆ

ABOUT THE AUTHOR

...view details