ಕರ್ನಾಟಕ

karnataka

ETV Bharat / state

ಸಚಿವ ನಾಗೇಶ್ ಮನೆ ಮೇಲೆ ನಡೆದ ದಾಳಿ ತಪ್ಪು: ಸಾಹಿತಿ ಹಂಪ ನಾಗರಾಜಯ್ಯ - attack on minister nagesh house is condemble says hampa nagarajayya

ತಾತ್ವಿಕವಾಗಿ, ವೈಯಕ್ತಿಕವಾಗಿ ಮುಖಾಮುಖಿಯಾಗಿ ಚರ್ಚೆ ಮಾಡೋಣ, ಆದರೆ, ಪಠ್ಯ ಪುಸ್ತಕ ಪರಿಷ್ಕರಣೆ ವಿಚಾರವಾಗಿ ಸಚಿವ ನಾಗೇಶ್ ಮನೆಯ ಮೇಲೆ ದಾಳಿ ಮಾಡಿದ್ದು ತಪ್ಪು ಎಂದು ಹಿರಿಯ ಸಾಹಿತಿ ಹಂಪ ನಾಗರಾಜಯ್ಯ ಹೇಳಿದ್ದಾರೆ.

attack-on-minister-nagesh-house-is-condemble-says-hampa-nagarajayya
ಸಚಿವ ನಾಗೇಶ್ ಮನೆಯ ಮೇಲೆ ನಡೆದ ದಾಳಿ ತಪ್ಪು : ಸಾಹಿತಿ ಹಂಪ ನಾಗರಾಜಯ್ಯ

By

Published : Jun 6, 2022, 6:21 AM IST

ಬೆಂಗಳೂರು: ತಾತ್ವಿಕವಾಗಿ, ವೈಯಕ್ತಿಕವಾಗಿ ಮುಖಾಮುಖಿಯಾಗಿ ಚರ್ಚೆ ಮಾಡೋಣ. ಆದರೆ, ಪಠ್ಯ ಪುಸ್ತಕ ಪರಿಷ್ಕರಣೆ ವಿಚಾರವಾಗಿ ಸಚಿವ ನಾಗೇಶ್ ಮನೆಯ ಮೇಲೆ ದಾಳಿ ಮಾಡಿದ್ದು ತಪ್ಪು ಎಂದು ಹಿರಿಯ ಸಾಹಿತಿ ಹಂಪ ನಾಗರಾಜಯ್ಯ ಹೇಳಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಸುಗಮ ಸಂಗೀತ ಪರಿಷತ್ ಸಂಯುಕ್ತಾಶ್ರಯದಲ್ಲಿ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಏರ್ಪಡಿಸಿದ್ದ ವೈ.ಕೆ.ಮುದ್ದುಕೃಷ್ಣರ 75ನೇಯ ಹುಟ್ಟು ಹಬ್ಬದ ಸಂಭ್ರಮ ಸಮಾರಂಭದಲ್ಲಿ ಹಂಪ ನಾಗರಾಜಯ್ಯ ಮಾತನಾಡಿದರು. ಸಿ ಎಂ ಬಸವರಾಜ್ ಬೊಮ್ಮಾಯಿ ಈ ಕಾರ್ಯಕ್ರಮದಲ್ಲಿ ವೈ.ಕೆ.ಎಂ ವಿರಚಿತ ಪುಸ್ತಕ ಹಾಡು ಹಿಡಿದ ಜಾಡು ಲೋಕಾರ್ಪಣೆ ಮಾಡಿದರು.

ದಾಳಿ ವಿಚಾರವಾಗಿ ನನಗೆ ಬಹಳ ನೋವಾಗಿದೆ. ಹಾಗೆಲ್ಲ ಮಾಡುವುದು ಸರಿಯಲ್ಲ. ಆದರೆ, ನಂತರದ ಹೇಳಿಕೆಗಳಲ್ಲಿ ಹಲವು ಸಚಿವರುಗಳು ಸಾಹಿತಿಗಳನ್ನು ಒಂದು ಪಕ್ಷದ ಕೃಪಾಪೋಷಿತರು ಎಂದಿದ್ದಾರೆ ಅದು ತಪ್ಪು ಎಂದರು.

ಸಚಿವರೊಂದಿಗೆ ಸಿಎಂ ಮಾತಾಡಬೇಕು: ಹೇಳಿಕೆಗಳ ಕುರಿತು ವೇದಿಕೆ ಮೇಲಿರುವ ಸಿಎಂ ಬಸವರಾಜ ಬೊಮ್ಮಾಯಿ ಸಚಿವರ ಜೊತೆ ಮಾತನಾಡಬೇಕು, ಇಲ್ಲದಿದ್ದರೆ ನಿಮಗೆ ಕೆಟ್ಟ ಹೆಸರು ಬರುತ್ತದೆ ಎಂದು ಹೇಳಿದರು.

ಓದಿ :ಗದಗದಲ್ಲಿ ಸರ್ಕಾರಿ ಜಾಗ ಒತ್ತುವರಿ.. ನೋಟಿಸ್​ಗೆ​ ಬಗ್ಗದವರ ಕಟ್ಟಡದ ಮೇಲೆ ಜೆಸಿಬಿ ಸವಾರಿ

For All Latest Updates

ABOUT THE AUTHOR

...view details